ಇಡೀ ಕುಟುಂಬದವರ ಒಳ ಉಡುಪಿನಲ್ಲಿತ್ತು 21 ಕೆಜಿ ಚಿನ್ನ

family-caught-hiding-21-kg-gold-in-undergarments-mumbai
ಮುಂಬೈ, ಸೆ.13: ಅಲ್ಲಾ! ಚಿನ್ನದ ಬೆಲೆ ಈ ಪಾಟಿ ಏರುತ್ತಿದ್ದರೆ ಇನ್ನೇನ್ಮಾಡೋಕ್ಕಾಗುತ್ತದೆ. ಅದಕ್ಕೇ ಈ ಖದೀಮರು ಚಿನ್ನವನ್ನು ತಮ್ಮ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ತಂದರು.

ಏಯ್ ಬಿಡ್ರೀ, ಆ ಕುಟಂಬದವರು ತಾವು ಧರಿಸಿದ್ದ ಒಳ ಉಡುಪಿನಲ್ಲಿ ಅಬ್ಬಬ್ಬಾ ಅಂದರೆ ತಲಾ ಹತ್ತಿಪ್ಪತ್ತು ಗ್ರಾಂ ತಂದಿರಬಹುದು. ಅದಕ್ಕೆ ಇಷ್ಟು ಬೊಬ್ಬೆಯೇಕೆ ಎಂದೇನಾದರೂ ನೀವು ಬೊಬ್ಬಿಟ್ಟರೆ ಬೇಸ್ತುಬಿದ್ದಿದ್ದೀರಿ ಎಂದೇ ಅರ್ಥ. ಏಕೆಂದರೆ ಪತಿ-ಪತ್ನಿ ಮತ್ತು ಪುತ್ರಿಯ ಈ ಕುಟುಂಬದವರು ಬರೋಬ್ಬರಿ 21 ಕೆಜಿ ಚಿನ್ನವನ್ನು ವಿದೇಶದಿಂದ ತಮ್ಮ ಅಂಡರ್ ವೇರ್ ಗಳಲ್ಲಿ ಜೋಪಾನವಾಗಿ ಬಚ್ಚಿಟ್ಟುಕೊಂಡು ತಂದಿದ್ದಾರ್ರೀ...!

ವಿಮಾನಯಾನ 'ಗುಪ್ತ'ಚರ ದಳವು ಮುಂಬೈ ವಿಮಾಣ ನಿಲ್ದಾಣದಲ್ಲಿ ಈ ಪ್ರಕರಣವನ್ನು ಮೊನ್ನೆ ಮಂಗಳವಾರ ರಾತ್ರಿ ಪತ್ತೆ ಹಚ್ಚಿದೆ. ಸ್ಪೈಸ್ ಜೆಟ್ ವಿಮಾನದ ಮೂಲಕ ದುಬೈನಿಂದ ಮುಂಬೈಗೆ ಬಂದಿಳಿದ ತ್ರಿಮೂರ್ತಿ ಕುಟುಂಬಸ್ಥರನ್ನು ನೋಡುತ್ತಿದ್ದಂತೆ 'ಗುಪ್ತ'ಚರರಿಗೆ ಯಾಕೋ ಅನುಮಾನದ ವಾಸನೆ ಬಡಿದಿದೆ.

'ಕುಟುಂಬದ ಯಜಮಾನ ಭಾರಿ ಕುಳ. ಚಿನ್ನದ ರಫ್ತುದಾರ' ಎಂದು ಗೊತ್ತಾದರೂ ನಡೀರಿ ತಪಾಸಣೆ ಮಾಡಿಸಿಕೊಳ್ಳಿ ಎಂದಿದ್ದಾರೆ.

ಗುಪ್ತಚರರು ಇಂಚಿಂಚೂ ತಡಕಾಡಿದಾಗ ಕಳ್ಳತನ ನಗ್ನವಾಗಿದೆ. ಗಂಡ-ಹೆಂಡತಿ ಅಲ್ಲದೆ ಆ ದಂಪತಿಯ ಪುತ್ರಿಯನ್ನೂ ತಪಾಸಣೆ ಮಾಡಿದಾಗ ಆ ಮೂವರೂ ತಮ್ಮತಮ್ಮ ಒಳ ಉಡುಪುಗಳಲ್ಲಿ ಜೋಪಾನವಾಗಿ ಜೋಡಿಸಿಟ್ಟಿದ್ದ ಒಂದೊಂದೇ ಚಿನ್ನದಾಭರಣಗಳನ್ನು ಕಳಚುತ್ತಾ ಹೋದರು.

'ಹೀಗೇಕೆ ಮಾಡಿದಿರಿ?' ಅಂತ ಕೇಳಿದ್ದಕ್ಕೆ 21 ಕೆಜಿಗೆ ಸುಂಕ ಕಟ್ಟಬೇಕು ಅಂದರೆ ತಮಾಷೀನಾ ಎಂದು ಸುಂಕದವನ ಮುಂದೆ ಸುಖ ದುಃಖ ತೋಡಿಕೊಳ್ಳಲು ಹೋಗಿದ್ದಾರೆ... ಆದರೆ ಆ ವೇಳೆಗೆ ಗುಪ್ತಚರರು ಅವರ ಒಳ ಉಡುಪುಗಳಿಂದ ಅಷ್ಟೂ ಚಿನ್ನವನ್ನು ತೋಡಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+