ಹಾಡಹಗಲೇ ಬಸ್ಟಾಂಡಿನಲ್ಲಿ ಮಹಿಳಾ ಟೆಕ್ಕಿ ಬರ್ಬರ ಹತ್ಯೆ

woman-techie-karthika-killed-by-bf-chennai-bus-stand
ಚೆನ್ನೈ, ಸೆ.12: ಹಾಡಹಗಲೇ ಬಸ್ಟಾಂಡಿನಲ್ಲಿ ಮಹಿಳಾ ಟೆಕ್ಕಿಯೊಬ್ಬಳನ್ನು ಬರ್ಬರವಾಗಿ ಎಲ್ಲರೆದುರೇ ಹತ್ಯೆ ಮಾಡಲಾಗಿದೆ. ಮಹಾನಗರದ ಖ್ಯಾತ ಪ್ಯಾರಿಸ್ ಕಾರ್ನರ್ ಬಳಿ ನಿನ್ನೆ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ.

ಹೀಗೆ ಯುವತಿಯನ್ನು ಹತ್ಯೆ ಮಾಡಿದ ಯುವಕ ತಾನೂ ಚೂರಿಯಿಂದ ಚುಚ್ಚಿಕೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅದಕ್ಕೂ ಮುನ್ನ ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಆದರೆ ಬಸ್ಟಾಂಡಿನಲ್ಲಿ ನೆರೆದಿದ್ದ ಜನ ಮಾತ್ರ ಇದ್ಯಾವುದೋ ಸಿನಿಮಾದ ಶೂಟಿಂಗ್ ಇರಬಹುದು ಎಂದು ಸುಮ್ಮನೇ ನೋಡುತ್ತಾ ನಿಂತರು. ಮತ್ತು ಈಗಾಗಲೇ ಇದು ಭಗ್ನ ಪ್ರೇಮದ ಕಥೆ ಎಂದೂ ನಿಮಗೆ ಅರಿವಾಗಿರಬಹುದು.

ಏನಾಯಿತೆಂದರೆ ಸಾವಿಗೀಡಾದ 21 ವರ್ಷ ಕಾರ್ತೀಕಾ ಮತ್ತು 27 ವರ್ಷದ ರಾಜಾರತ್ನಂ ನಡುವೆ ಕಾದಲ್ ನಡೆಯುತ್ತಿತ್ತು. ಆದರೆ ಅದೇನಾಯಿತೋ ಹುಡುಗಿ ಮನೆಯವರು ಈ ಪ್ರೇಮ-ಪ್ರೀತಿಗೆ ರೆಡ್ ಸಿಗ್ನಲ್ ತೋರಿಸಿದರು. ಇದರಿಂದ ತಿರುವತ್ತಿಯೂರಿನ ಮಾಣಿಕ್ಕಂ ನಗರದ ನಿವಾಸಿ, ಪಾಗಲ್ ಪ್ರೇಮಿ ರಾಜಾರತ್ನಂ ಕೆರಳಿದ.

ಟೆಕ್ಕಿ ಕಾರ್ತೀಕಾ ಬೇಕರಿ ಅಂಗಡಿಯ ಮಾಲೀಕನ ಒಬ್ಬಳೇ ಮುದ್ದುಮಗಳು. ಮೂಲತಃ ಕನ್ಯಾಕುಮಾರಿಯವನಾದ ರಾಜಾರತ್ನಂ ಐಟಿಐ ಡಿಪ್ಲೊಮಾ ಮಾಡಿಕೊಂಡಿದ್ದ. ಮಾಣಿಕ್ಕಂ ನಗರದಲ್ಲಿ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ. ಕಾರ್ತೀಕಾ ಮತ್ತು ರಾಜಾರತ್ನಂ ಮನೆಗಳು ಅಕ್ಕಪಕ್ಕದಲ್ಲಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+