ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಜೊತೆ ಕರ್ನಾಟಕ ಚುನಾವಣೆ: ಬಿಎಸ್ವೈ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಸೆ.12: ಅತ್ತ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಂತೆ ಇತ್ತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಸೆಂಬ್ಲಿ ಚುನಾವಣೆ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು ನಗರ ಶಾಸಕರ ಜೊತೆ ಮಂಗಳವಾರ (ಸೆ.11) ಸಭೆ ಸೇರಿ ಮಾತುಕತೆ ನಡೆಸಿದ ಯಡಿಯೂರಪ್ಪ ಅವರು ನಗರದ ಕಸ ವಿಲೇವಾರಿ ಸಮಸ್ಯೆ, ಮುಂಬರುವ ಚುನಾವಣೆಗೆ ಸಿದ್ಧತೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಗೊಂದಲ ಮುಂತಾದ ವಿಷಯಗಳನ್ನು ಚರ್ಚಿಸಿದ್ದಾರೆ.

ಡಿಸೆಂಬರ್ ನಲ್ಲೇ ಚುನಾವಣೆ: ಗುಜರಾತಿನಲ್ಲಿ ಚುನಾವಣೆ ನಡೆಯುವ ಹೊತ್ತಿಗೆ ರಾಜ್ಯದಲ್ಲೂ ಚುನಾವಣೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಒಂದು ವೇಳೆ ಡಿಸೆಂಬರ್ ನಲ್ಲಿ ಚುನಾವಣೆ ಸಾಧ್ಯವಾಗದಿದ್ದಾರೆ, ಫೆಬ್ರವರಿ-ಮಾರ್ಚ್ ವೇಳೆಗೆ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವುದು ಖಚಿತ.

ಹೀಗಾಗಿ ಕ್ಷೇತ್ರವಾರು ಅಭ್ಯರ್ಥಿಗಳ ಸಾಧನೆ, ಕ್ಷೇತ್ರಗಳ ಅಭಿವೃದ್ಧಿ ಕುರಿತಂತೆ ಈಗಲೇ ಅನುಷ್ಠಾನ ಕಾರ್ಯ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ತಾಕೀತು ಮಾಡಿದ್ದಾರೆ.

ಇದುವರೆವಿಗೂ 150 ಸೀಟು ಗೆಲ್ಲುವ ನಿರೀಕ್ಷೆಯಿದೆ ಎನ್ನುತ್ತಿದ್ದ ಬಿಎಸ್ ವೈ, ಮಂಗಳವಾರ ಯಾಕೋ 140 ಸೀಟು ಗೆಲ್ಲುವ ಭರವಸೆ ಇದೆ ಎಂದರು.

ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವಂತೆ ಮಾಡಲು ಎಲ್ಲಾ ಕಾರ್ಯಕರ್ತರು ಈಗಿಂದಲೇ ಶ್ರಮವಹಿಸಿ ಕಾರ್ಯೋನ್ಮುಖರಾಗಬೇಕು ಎಂದು ಯಡಿಯೂರಪ್ಪ ಕರೆ ನೀಡಿದ್ದಾರೆ.

ಕಸದ ಸಮಸ್ಯೆ ಚೆನ್ನೈ ಮಾದರಿ: ಚೆನ್ನೈನ ನಾಮಕಲ್ ನಲ್ಲಿ ಬಳಸಲಾಗುತ್ತಿರುವ ಘನ ತ್ಯಾಜ್ಯ ನಿರ್ವಹಣೆ ತಂತ್ರಜ್ಞಾನವನ್ನು ಬೆಂಗಳೂರಿನಲ್ಲೂ ಅಳವಡಿಸುವಂತೆ ಯಡಿಯೂರಪ್ಪ ಸೂಚನೆ ನೀಡಿದರು.

ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಬಗ್ಗೆ ಸಚಿವ ಸಂಪುಟ ಶೀಘ್ರವೇ ನಿರ್ಣಯ ಕೈಗೊಳ್ಳಬೇಕು ಎಂದರು.

ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರು ಬೆಂಗಳೂರಿನ ಕಸದ ಸಮಸ್ಯೆ, ಕೈಗೊಂಡಿರುವ ಕ್ರಮ, ಆಗಬೇಕಾಗಿರುವ ಕಾರ್ಯಗಳ ಕೂಲಂಕುಷ ವರದಿ ತಯಾರಿಸಿ ಪವರ್ ಪಾಯಿಂಟ್ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.

ಈ ಬಗ್ಗೆ ಅಧ್ಯಯನ ನಡೆಸಲು ಅರವಿಂದ ಲಿಂಬಾವಳಿ ಸೇರಿದಂತೆ 5 ಜನರ ಶಾಸಕರ ತಂಡ ಸೇಲಂ ಜಿಲ್ಲೆಯ ನಾಮಕಲ್ ಗೆ ತೆರಳಿ ಅಧ್ಯಯನ ನಡೆಸುವಂತೆ ಸೂಚಿಸಿದರು.

ಯಡಿಯೂರಪ್ಪ ನಡೆಸಿದ ಎರಡು ಗಂಟೆಗಳ ಕಾಲದ ಸಭೆಯಲ್ಲಿ ಎಸ್ ಸುರೇಶ್ ಕುಮಾರ್ ಹಾಗೂ ಸಿಎನ್ ಅಶ್ವಥನಾರಾಯಣ ಬಿಟ್ಟು ಮಿಕ್ಕ ಎಲ್ಲಾ ಶಾಸಕರು ಪಾಲ್ಗೊಂಡಿದ್ದರು.
ಸೆ.14 ರಂದು ಇದೇ ವಿಷಯವಾಗಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಹಾಗೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನಗರ ಶಾಸಕರ ಸಭೆ ಕರೆದಿದ್ದಾರೆ.

English summary
Karnataka likely to have assembly election by december 2012 same time as Gujarat goes to poll said former CM Yeddyurappa. BSY held meeting with Bangalore MLAs to discuss garbage disposal plans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X