Get Updates
Get notified of breaking news, exclusive insights, and must-see stories!

ಕ್ಯಾರಿಓವರ್ ಗೆ ಓಕೆ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಖುಷಿ

HC relief for 8,400 diploma students
ಬೆಂಗಳೂರು, ಸೆ.11:: ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ಗಳಲ್ಲಿ 10 ವಿಷಯ ಬಾಕಿ ಉಳಿಸಿಕೊಂಡಿರುವ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್‌ಗೆ ಹೈಕೋರ್ಟ್ ಸೋಮವಾರ(ಸೆ.10) ಶುಭ ಸುದ್ದಿ ಕೊಟ್ಟಿದೆ.

ಕ್ಯಾರಿಓವರ್ ಗೆ ಅನುಮತಿ ಸಿಗದೆ ಮುಂದಿನ ಸೆಮಿಸ್ಟರ್ ತರಗತಿಗೆ ಪ್ರವೇಶ ಪಡೆಯಲಾಗದೆ ಸುಮಾರು 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಂಗಾಲಾಗಿದ್ದರು.

ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ನೇತೃತ್ವದ ಏಕಸದಸ್ಯ ಪೀಠ ಅವರು 5 ಸೆಮಿಸ್ಟರ್ ಕ್ಯಾರಿ ಓವರ್ ಕೋರಿ 175 ಡಿಪ್ಲೊಮಾ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದರು.

10 ವಿಷಯಗಳ ಕ್ಯಾರಿಓವರ್ ಕೇವಲ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸೀಮಿತವಾಗಿರುತ್ತದೆ. ಬೇರೆ ಯಾವ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗುವುದಿಲ್ಲ ಎಂದು ಅದೇಶಿದ ಪೀಠ ಅರ್ಜಿ ವಜಾಗೊಳಿಸಿದೆ.

'ವಿದ್ಯಾರ್ಥಿಗಳು ಸ್ವಹಿತಾಸಕ್ತಿಯಿಂದ ಅಭ್ಯಾಸ ಮಾಡಿದರೆ ಮಾತ್ರ ಜೀವನದಲ್ಲಿ ಯಾಶಸ್ಸು ಸಾಧಿಸಬಹುದು. ಅಧ್ಯಯನ ಆಸಕ್ತಿ ಹೃದಯದಿಂದ ಬರಬೇಕು. ಆಗ ಮಾತ್ರ ವಿದ್ಯೆಯ ಸಾರ್ಥಕತೆ ಅರಿತುಕೊಳ್ಳಲು ಸಾಧ್ಯ' ಎಂದು ವಿದ್ಯಾರ್ಥಿಗಳಿಗೆ ನ್ಯಾ. ರಾಮಮೋಹನ್ ರೆಡ್ಡಿ ಬುದ್ಧಿಮಾತು ಹೇಳಿದರು.

ಸರ್ಕಾರದ ಲೆಕ್ಕಾಚಾರದ ಪ್ರಕಾರ ಶೇ.82 ರಷ್ಟು ವಿದ್ಯಾರ್ಥಿಗಳು 10 ವಿಷಯಗಳ ಕ್ಯಾರಿಓವರ್ ಅನುಕೂಲತೆ ಪಡೆದುಕೊಳ್ಳಲಿದ್ದಾರೆ. ಮುಂದಿನ ವರ್ಷದಿಂದ ಈ ರೀತಿ ಕ್ಯಾರಿಓವರ್ ನೀಡಲು ಸಾಧ್ಯವಿಲ್ಲ.

ಈ ಸಂಬಂಧ ಸಮರ್ಪಕವಾದ ನೀತಿ ನಿಯಮವನ್ನು ರೂಪಿಸುವಂತೆ ಸರ್ಕಾರಕ್ಕೆ ಪೀಠ ಸೂಚಿಸಿದೆ. ಒಮ್ಮೆ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ನೀಡಿದಂತೆ ಮತ್ತೆ ಮತ್ತೆ ಪಡೆದುಕೊಳ್ಳಬೇಕು ಎನಿಸುತ್ತದೆ.

ಇದರಿಂದ ಅಧ್ಯಯನದ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಕ್ಯಾರಿಓವರ್ ಮೇಲೆ ಅವಲಂಬಿತವಾಗುತ್ತಾರೆ. ಈ ಬಗ್ಗೆ ಸರ್ಕಾರ ಗಮನಹರಿಸುವಂತೆ ಪೀಠ ಸಲಹೆ ನೀಡಿತು. 2009-10ನೇ ಸಾಲಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ ರೂಪಿಸಲಾಗಿತ್ತು.

ಅದರಂತೆ 3ನೇ ಸೆಮಿಸ್ಟರ್ ದಾಖಲಾತಿ ಪಡೆಯಲು 4 ವಿಷಯಗಳ ಕ್ಯಾರಿಓವರ್ ಹಾಗೂ 5 ಸೆಮಿಸ್ಟರ್ ಪ್ರವೇಶಕ್ಕೆ ಮತ್ತೆ ನಾಲ್ಕು ವಿಷಯ ಅಂದರೆ 8 ವಿಷಯಗಳ
ಕ್ಯಾರಿಓವರ್ ನೀತಿ ರೂಪಿಸಲಾಗಿತ್ತು.

ಈ ನಡುವೆ 2010-11 ನೇ ಸಾಲಿನಲ್ಲಿ ಹಳೆ ಪಠ್ಯಕ್ರಮ ಹೊಂದಿದ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಕ್ಯಾರಿ ಓವರ್ ನೀಡಲಾಗಿತ್ತು. ಆದರೆ, ಇದನ್ನೆ ಹೊಸ ಪಠ್ಯಕ್ರಮಕ್ಕೆ ಕೇಳುವುದು ಸರಿಯಲ್ಲ. ಸರ್ಕಾರದಿಂದ ಈ ವರ್ಷ 10 ವಿಷಯಗಳ ಕ್ಯಾರಿಓವರ್ ಮಾತ್ರ ನೀಡಲಾಗುತ್ತದೆ ಎಂದು ಸರ್ಕಾರಿ ಪರ ವಕೀಲರು ಪೀಠದ ಗಮನಕ್ಕೆ ತಂದರು.

ಅದರಂತೆ, 10ಕ್ಕೂ ಅಧಿಕ ವಿಷಯಗಳ ಕ್ಯಾರಿಓವರ್ ಪದ್ಧತಿಯನ್ನು ಈ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶ ನೀಡಲಾಗಿದೆ.

ಇಂಜಿನಿಯರಿಂಗ್: ಮೊದಲನೇ ಮತ್ತು ಎರಡನೇ ಸೆಮಿಸ್ಟರ್‌ನಲ್ಲಿ ನಾಲ್ಕಕಿಂತ ಅಧಿಕ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಒಂದು ವಾರದೊಳಗೆ ವಿಶೇಷ ಮರುಪರೀಕ್ಷೆ ನಡೆಸುವಂತೆ ವಿಟಿಯು ಗೆ ಹೈಕೊರ್ಟ್ ತನ್ನ ಆದೇಶದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+