ಗೌಡರ ಕುಟುಂಬದ 3ನೆ ಕುಡಿ ರಾಜಕೀಯಕ್ಕೆ ಎಂಟ್ರಿ

hd-revanna-2nd-son-prajwal-enters-politics-sakleshpur
ಬೆಂಗಳೂರು, ಸೆ.11: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಮೂರನೆಯ ತಲೆಮಾರು ರಾಜಕೀಯ ಪ್ರವೇಶ ಮಾಡಿದೆ. 'ಮಣ್ಣಿನ ಮಗ' ದೇವೇಗೌಡ ಅವರ ಹಿರಿಯ ಪುತ್ರ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರಾಜಕೀಯ ಅಖಾಡಕ್ಕೆ ಧುಮಿಕಿರುವ ಗೌಡರ ಕುಟುಂಬದ ಮೂರನೆಯ ಕುಡಿಯಾಗಿದೆ.

ಹರದನಹಳ್ಳಿ ದೇವೇಗೌಡ ರೇವಣ್ಣ ಅವರ ಪುತ್ರ ಎಚ್ ಡಿ (ಆರ್?) ಪ್ರಜ್ವಲ್ ಸಕಲೇಶಪುರ ಪಟ್ಟಣದಲ್ಲಿ ನಿನ್ನೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಾವೂ ರಾಜಕೀಯಕ್ಕೆ ಅಂಕಿತವಾಘುವ ಮುನ್ಸೂಚನೆ ನೀಡಿದ್ದಾರೆ. ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಅದ್ದೂರಿಯಾಗಿ ಅವರಿಗೆ ಸ್ವಾಗತ ಕೋರಿದರು. ಪ್ರಜ್ವಲ್ ಕಾರ್ಯಕರ್ತರೊಂದಿಗೆ ಮುಕ್ತವಾಗಿ ಬೆರೆಯುವ ಮೂಲಕ ಅವರ ಮನಸೆಳೆದರು.

ಇದರೊಂದಿಗೆ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿರುವ ಪ್ರಜ್ವಲ್ ಪಕ್ಷದ ಯುವ ಘಟಕವನ್ನು ಸಂಘಟಿಸುವ ಹೊಣೆ ಹೊತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ರಾಜಕೀಯವಾಗಿ ಗುರುತಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ದೇವೇಗೌಡರ ಮುದ್ದಿನ ಮೊಮ್ಮಗ: ರೇವಣ್ಣರ ಎರಡನೆಯ ಪುತ್ರ ಪ್ರಜ್ವಲ್ ಈಗಾಗಲೇ ಹೊಳೇನರಸೀಪುರ ರಾಜಕೀಯವನ್ನು ಕರಗತ ಮಾಡಿಕೊಂಡಿದ್ದಾರೆ. ದೇವೇಗೌಡರ ಮುದ್ದಿನ ಮೊಮ್ಮಗನೂ ಹೌದು.

ರೇವಣ್ಣ ಅವರ ಪತ್ನಿ ಭವಾನಿ ಅವರೂ ಸಹ ಈಗಾಗಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ. ರೇವಣ್ಣ-ಭವಾನಿ ದಂಪತಿಗೆ ಸೂರಜ್ ಮತ್ತು ಪ್ರಜ್ವಲ್ ಎಂಬಿಬ್ಬರು ಪುತ್ರರು ಇದ್ದಾರೆ. ನಾಚಿಕೆ ಸ್ವಭಾವದ ಸೂರಜ್ ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+