ಕಲ್ಲಿದ್ದಲು ಹಗರಣದಲ್ಲಿ ಮಾಧ್ಯಮ ಸಂಸ್ಥೆಗಳೂ ಭಾಗಿ

ಛತ್ತಿಸ್‌ಗಡದ ಪ್ರತಿಷ್ಠಿತ Dainik Bhaskar ಹಿಂದಿ ಪತ್ರಿಕೆಯ ಅಂಗ ಸಂಸ್ಥೆಯಾದ DB Power Ltd, ಮರಾಠಿಯ ದೈನಿಕ ಪತ್ರಿಕೆ Lokmat group ಛತ್ತೀಸ್‌ಗಡದಲ್ಲಿ JLD Yavatmal Energy ಮತ್ತು ಜಾರ್ಖಂಡ್‌ನ Prabhat Khabar ದಿನಪತ್ರಿಕೆಯ Usha Martin Ltd ಎಂಬ ಸಂಸ್ಥೆಗಳು ಕಲ್ಲಿದ್ದಲು ಬ್ಲಾಕ್‌ಗಳನ್ನು ಪಡೆದಿವೆ.
ದೇಶದಲ್ಲಿ ವಿದ್ಯುತ್‌ಗೆ ಭಾರೀ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಇಂದು ಮಾಧ್ಯಮ ಸಂಸ್ಥೆಗಳು ತಮ್ಮ ಪ್ರಭಾವ ಬೀರಿ ಕಲ್ಲಿದ್ದಲು ಬ್ಲಾಕ್‌ಗಳನ್ನು ಪಡೆಯಲು ಸಮರ್ಥವಾಗಿರುವುದರಿಂದ ಕೆಲ ಮಾಧ್ಯಮ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದ ನೈಸರ್ಗಿಕ ಸಂಪನ್ಮೂಲದಲ್ಲಿ ಇಂತಹ ಸಂಸ್ಥೆಗಳು ಸ್ವಲ್ಪವೇ ಹೂಡಿಕೆ ಮಾಡಿದರೂ ಆ ಸಂಸ್ಥೆಗಳ ಒಟ್ಟಾರೆ ಆಸ್ತಿ ವೌಲ್ಯ ವೃದ್ಧಿಸುತ್ತದೆ. ವಿದ್ಯುತ್ ಉತ್ಪಾದನೆಯಲ್ಲಿ ನೇರವಾದ ಸಂಪರ್ಕ ಹೊಂದಿರುವ ಕಲ್ಲಿದ್ದಲು ಸಂಪನ್ಮೂಲಕ್ಕೆ ಹೂಡಿಕೆ ಮಾಡಿದರೆ ಸಂಸ್ಥೆಯ ಒಟ್ಟಾರೆ ವೌಲ್ಯ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಇಂತಹ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಟ್ಟು 10 ಕಂಪನಿಗಳು ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಭಾಗಿಯಾಗಿವೆ ಎನ್ನಲಾಗಿದೆ. ಇದರಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಮೇಲಿನ 3 ಸಂಸ್ಥೆಗಳ ಹೆಸರುಗಳು ಕೇಳಿಬಂದಿವೆ.












Click it and Unblock the Notifications