ಸೈಫ್ ಅಲಿ ಮದ್ವೆಗೆ ಮುನ್ನ ಮಾವನ ಮನೆಗೆ?

ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಹಳೆ ಕೇಸಿನ ಕಡತ ಸಿಕ್ಕಿದೆ. ದುಬೈನಿಂದ ಐಷಾರಾಮಿ ಕಾರು ಖರೀದಿಸಿದ ಸೈಫ್ ಅಲಿ ಖಾನ್ ಅವರು ಆಮದು ವ್ಯವಹಾರದಲ್ಲಿ ಹಣ ಪಾವತಿ, ತೆರಿಗೆ ಜಮೆ, ಅಸಲಿ ಮಾಲೀಕರು ಯಾರು? ಇತ್ಯಾದಿ ವಿಷಯಗಳ ಮೇಲೆ ಜಾರಿ ನಿರ್ದೇಶನಾಲಯ ಬೆಳಕು ಚೆಲ್ಲಿದೆ.
2004ರ ಕಾರು ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂರ್ನಾಲ್ಕು ಗಂಟೆಗಳ ಕಾಲ 'ಇಡಿ' ಕಚೇರಿಯಲ್ಲಿ ಸೈಫ್ ಅಲಿ ಖಾನ್ ವಿಚಾರಣೆಗೆ ಒಳಪಟ್ಟಿದ್ದಾರೆ. ಮತ್ತೆ ಕರೆದಾಗ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ನಿರ್ದೇಶನ ನೀಡಿ ಅವರನ್ನು ಕಳಿಸಲಾಗಿದೆ.
ಏನಿದು ಪ್ರಕರಣ?: 2004 ರಲಿ ದುಬೈನಿಂದ ಟೊಯೋಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಖರೀದಿಸಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ಆದರೆ, ವಾಹನ ಆಮದು ಆಗಿದ್ದು ಮಾತ್ರ ಕೇರಳದ ನಿವಾಸಿ ಕೊಲಾಂಗರ ಮಹಮ್ಮದ್ ಹೆಸರಿನಲ್ಲಿ ಎಂಬುದು ವಿಶೇಷ.
ಕೆ ಮಹಮ್ಮದ್ ಹಿನ್ನೆಲೆ ಪರೀಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು ಈತ ಈ ಐಷಾರಾಮಿ ವಾಹನ ಖರೀದಿಸಲು ಸಾಧ್ಯವೇ ಸಾಧ್ಯವಿಲ್ಲ ಎಂದು ಷರಾ ಹಾಕಿಬಿಟ್ಟಿತು. ಕಸ್ಟಮ್ಸ್ ಅಧಿಕಾರಿಗಳಿ ಹಾಗೂ ಗುಪ್ತಚರ ವಿಭಾಗ ತನಿಖೆ ನಡೆಸಿ, ಆಮದು ವ್ಯವಹಾರ ಕಾನೂನು ಬದ್ಧವಾಗಿಲ್ಲ ಎಂದು ವರದಿ ನೀಡಿತ್ತು.
2006 ರಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಜಾರಿ ನಿರ್ದೇಶನಾಲಯ ಪ್ರಕರಣವನ್ನು ಕೈಗೆತ್ತಿಕೊಂಡಿತು. ಮುಂಬೈನ ಬ್ಯಾಂಕ್ ನಲ್ಲಿ ಭಾರಿ ಮೊತ್ತದ ನಗದು ಪಡೆದ ಖಾತೆಗಳನ್ನು ಪರಿಶೀಲಿಸತೊಡಗಿತು. ಆಗ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಾತೆ ಕೂಡಾ ಕಂಡು ಬಂದಿತ್ತು.
ಈ ಸಂಬಂಧ Foreign Exchange Management Act (FEMA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸೈಫ್ ಅಲಿ ಖಾನ್ ಅವರನ್ನು ಒಂದು ಸುತ್ತಿನ ವಿಚಾರಣೆ ಮುಗಿಸಲಾಗಿದ್ದು, ಈ ಪ್ರಕರಣದಲ್ಲಿ ಹವಾಲಾ ಹಣ ಬಳಕೆ ಬಗ್ಗೆ ನಟನನ್ನು ಪ್ರಶ್ನಿಸಿದೆ. ಸದ್ಯದಲ್ಲೇ ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿ, ತನಿಖೆ ಮುಕ್ತಾಯಗೊಳಿಸುವುದಾಗಿ ಇಡಿ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications