ಆರೋಗ್ಯ ನಿಮ್ಮ ಸ್ವತ್ತೇ ಹೊರತು ಬೇರೆಯವರ ಸ್ವತ್ತಲ್ಲ

Posted By:
Subscribe to Oneindia Kannada
September 8 World Physiotherapy day
ಬೆಂಗಳೂರು, ಸೆ. 8 : ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಾರು ಎಷ್ಟೇ ಸಂಪತ್ತುಳ್ಳುವರಾಗಿರಲಿ, ಅವರ ಆರೋಗ್ಯವೇ ಕೈಕೊಟ್ಟರೆ ಆ ಸಂಪತ್ತೆಲ್ಲ ಯಾವ ಮೂಲೆಗೆ? ಆರೋಗ್ಯ ಸದೃಢವಾಗಿದ್ದರೆ ತಾನೆ ಆ ಸಂಪತ್ತನೆಲ್ಲ ಗಳಿಸಲು ಸಾಧ್ಯ. ಇಷ್ಟೆಲ್ಲ ಗೊತ್ತಿದ್ದರೂ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಲೇ ಇರುತ್ತೇವೆ, ಅಸಂಬದ್ಧ ಜೀವನಶೈಲಿಯನ್ನು ನಡೆಸುತ್ತಿರುತ್ತೇವೆ.

ಆರೋಗ್ಯವನ್ನು ದಿವಿನಾಗಿಟ್ಟುಕೊಂಡವರಿಗೆ ಮತ್ತು ಬೇಕಾಬಿಟ್ಟಿ ಜೀವನಶೈಲಿ ರೂಢಿಸಿಕೊಂಡವರಿಗೆ ತಿಳಿದಿರಲಿ ಇಂದು ಅಂದರೆ ಸೆಪ್ಟೆಂಬರ್ 8ರ ದಿನವನ್ನು ವಿಶ್ವ ಫಿಸಿಯೋಧೆರಪಿ (ಭೌತಚಿಕಿತ್ಸಾ) ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಆರೋಗ್ಯದ ಬಗ್ಗೆ ಅರಿವು ಸಾರಲೆಂದೇ ಮೂರುವರೆ ಲಕ್ಷಕ್ಕೂ ಅಧಿಕವಿರುವ ಫಿಸಿಯೋಥೆರಪಿಸ್ಟ್‌ಗಳ ಸಂಘ ವರ್ಲ್ದ್ ಕಾನ್ಫೆಡರೇಶನ್ ಫಾರ್ ಫಿಸಿಕಲ್ ಥೇರಪಿಸ್ಟ್ (ಡಬ್ಲ್ಯು.ಸಿ.ಪಿ.ಟಿ) 1996ರಲ್ಲಿ ಸ್ಥಾಪಿಸಲಾಯಿತು.

ನೀವು ಆರೋಗ್ಯಕರವಾಗಿ ಇರಬೇಕೆಂದರೆ, ಯಾವಾಗಲೂ ಚಲನವಲನದಿಂದ ಇರಬೇಕು, ನಿಮ್ಮ ಜೀವನದ ಕೊನೆಯವರೆಗೆ ಎಂಬುದು ಈ ಸಂಸ್ಥೆ ನೀಡಿರುವ ಕಿವಿಮಾತು. ಆರೋಗ್ಯದಿಂದಿರಲಿ, ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಹೊಟ್ಟೆನೋವು, ತಲೆನೋವು, ಕೀಲುನೋವು ಮತ್ತಾವುದೇ ರೋಗದಿಂದ ಬಳಲುತ್ತಿರಲಿ ಅವರು ಯಾವಾಗಲೂ ಚಲನಶೀಲರಾಗಿರಬೇಕು, ಚಟುವಟಿಕೆಯಿಂದಿರಬೇಕು ಮತ್ತು ನಿಯಮಿತವಾಗಿ ಮತ್ತು ನಿರಂತರವಾಗಿ ವ್ಯಾಯಾಮ ಮಾಡುತ್ತಿರಬೇಕು ಎಂಬ ಸಂದೇಶವನ್ನು ಇಂದಿನ ದಿನದಂದು ಫಿಸಿಯೋಥೆರಪಿಸ್ಟ್‌ಗಳು ಜಗತ್ತಿಗೆ ಸಾರಿದ್ದಾರೆ. ಇದನ್ನು ಕಿವಿಗೆ ಹಾಕಿಕೊಳ್ಳುವುದು ಅಥವಾ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು ಓದುಗರಿಗೆ ಬಿಟ್ಟಿದ್ದು. ಎಷ್ಟಿದ್ದರೂ ನಿಮ್ಮ ಆರೋಗ್ಯ ನಿಮ್ಮ ಸ್ವತ್ತೇ ಹೊರತು ಬೇರೆಯವರ ಸ್ವತ್ತಲ್ಲವಲ್ಲ?

ಫಿಸಿಯೋಥೆರಪಿಸ್ಟ್‌ಗಳ ಉಪದೇಶಾಮೃತ...

* ಯಾವ ಜನರು ಕ್ರಿಯಾತ್ಮಕರಾಗಿರುತಾರೋ ಅಂತಹವರು ಹೆಚ್ಚಾಗಿ ಸಂಭಾವ್ಯ ಕಾರ್ಯಪ್ರವೃತ್ತರಾಗಿ, ಕ್ರಿಯಾಸಕ್ತರಾಗಿ, ಮತ್ತು ಆನಂದದಿಂದ ಯಾರ ನೆರವಿಲ್ಲದೆ ಬದುಕುವರು. ಅವರ ಜೀವನವು ಸಮರ್ಥ ಜೀವನ.

* ಆಲಸ್ಯತನ ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಪ್ರತಿ ವರ್ಷ ಪ್ರಪಂಚದಲ್ಲಿ ದಶ ಕೋಟಿಯ ಮರಣಗಳಿಗೆ ನಿದರ್ಶನವಾಗುತ್ತಿದೆ. ಅದು ಹೃದಯ ಕಾಯಿಲೆ, ಲಕ್ವಾ, ಮಧುಮೇಹ ಮತ್ತು ಅರ್ಬುದ (ಕ್ಯಾನ್ಸರ್) ರೋಗಗಳಿಗೆ ಕಾರಣವಾಗುತ್ತಿದೆ.

* ನೀವು ಕ್ರಿಯಾತ್ಮಕರಾಗಿ ಇರಲು ಎಂದೂ ತುಂಬಾ ಕಿರಿಯ ಅಥವಾ ಹಿರಿಯರಲ್ಲ - ಕೇವಲ ಅರ್ಧ ಗಂಟೆ ಮಿತವಾದ ವ್ಯಾಯಾಮ (ಅಂದರೆ: ವೇಗವಾದ ನಡೆ) ದಿನನಿತ್ಯ ಮಾಡಿದಲ್ಲಿ ನಿಜವಾದ ಬದಲಾವಾಣೆ ಕಾಣಬಹುದು.

ಯಾವ ರೀತಿಯ ವ್ಯಾಯಾಮ ಮಾಡಬೇಕು?

* ಹಿರಿಯರಿಗೆ 30 ನಿಮಿಷಗಳ ಕಾಲ ಮಿತವಾದ ದೈಹಿಕ ಚಟುವಟಿಕೆ ಅಗತ್ಯ. ಸೈಕಲ್ ಸವಾರಿ, ಈಜುವುದು ಅಥವಾ ವೇಗವಾದ ನಡಿಗೆ ಇಂತಹ ಚಟುವಟಿಕೆ- ಒಂದು ವಾರಕ್ಕೆ ಐದು ದಿನಗಳು.

* ಅಥವಾ, ತಜ್ಞರು 20 ನಿಮಿಷಗಳ ಕಾಲ ಸತ್ವವುಳ್ಳ ಚಟುವಟಿಕೆಗೆ ಸಲಹೆಕೊಡುತ್ತಾರೆ. ಯಾವುದಾದರೊಂದು ಚಟುವಟಿಕೆ ನಿಮ್ಮ ಉಸಿರಾಟದ ವೇಗವನ್ನು ಮತ್ತು ನಿಮ್ಮ ಹೃದಯ ಬಡಿತದ ವೇಗವನ್ನು ಹೆಚ್ಚಿಸುತ್ತದೆ. ಒಂದು ವಾರಕ್ಕೆ ಮೂರು ದಿನಗಳು.

* ಹಿರಿಯರು ಕೂಡ ಅವರ ಸ್ನಾಯುಗಳನ್ನು ದೃಢವಾಗಿ/ಬಲದಿಂದ ಇಟ್ಟುಕೊಳ್ಳಬೇಕು. ಬಲಪಡಿಸುವ ತರಬೇತಿ ವ್ಯಾಯಾಮಗಳ ಬಗ್ಗೆ ತಜ್ಞರು ಸಲಹೆಕೊಡುತ್ತಾರೆ. ಉದಾಹರಣೆಗೆ ಭಾರ ಎತ್ತುವಿಕೆ, ಯೋಗ, ತಳ್ಳುವಿಕೆ ವ್ಯಾಯಾಮ. ಕನಿಷ್ಠ ಒಂದು ವಾರಕ್ಕೆ ಮೂರು ದಿನಗಳು.

* 18 ವರ್ಷದ ಒಳಗೆ ಇರುವ ಮಕ್ಕಳಿಗೆ ಮತ್ತು ಯುವ ಜನರಿಗೆ 60 ನಿಮಿಷಗಳ ಕಾಲ ಸಾಧಾರಣ ಅಥವಾ ಸತ್ವವುಳ್ಳ ದೈಹಿಕ ಚಟುವಟಿಕೆ ಪ್ರತಿದಿನ ಅಗತ್ಯ.

* 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿಗೆ 150 ನಿಮಿಷಗಳ ಕಾಲ ಸಾಧಾರಣ ಚಟುವಟಿಕೆ, ಅಥವಾ 75 ನಿಮಿಷಗಳಕಾಲ ಸತ್ವವುಳ್ಳ ಚಟುವಟಿಕೆ, ಪ್ರತಿ ವಾರ.

ಸಂಶೋಧನೆ ತಿಳಿಸುವುದೆನೆಂದರೆ, ಪ್ರತಿಯೊಬ್ಬರು ಸುಮಾರು 5 ಕಿ.ಮೀ. ವೇಗದಲ್ಲಿ ಒಂದು ಗಂಟೆ (3-4 ಮೈಲಿ/ಗಂ) ನಡೆದರೆ ವಾರದಲ್ಲಿ ಅತ್ಯಂತ ಎಲ್ಲಾ ದಿನಗಳಲ್ಲಿ, ಪ್ರತಿವರ್ಷ ಸುಮಾರು ಶೇ.30ರಷ್ಟು ಮರಣವನ್ನು ಮುಂದೂಡಬಹುದು ಅಥವಾ ಹೃದಯ ಕಾಯಿಲೆ ಮತ್ತು ಲಕ್ವಾ ಕಾಯಿಲೆಗಳಿಂದ ದೂರವಿರಬಹುದು.

ನಿಮಗೆ ಯಾವುದೇ ದೇಹದ ತೊಂದರೆಗಳಿಂದ ವ್ಯಾಯಾಮ ಮಾಡಲು ತಪ್ಪಿಸುತ್ತಿದ್ದೀರ ಎಂದು ನೀವು ಭಾವಿಸಿದ್ದಲ್ಲಿ, ಫಿಸಿಯೋಥೇರಪಿಸ್ಟರನ್ನು ಕೇಳಿ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ. ಮತ್ತು ಈ ವ್ಯಾಯಾಮದ ಟೈಂಟೇಬಲ್ ನಿಮ್ಮ ದಿನಚರಿಯಲ್ಲಿ ಮರೆಯದೆ ಸೇರಿಸಿಕೊಳ್ಳಿರಿ. ಈ ದಿನದ ಅಂಗವಾಗಿ ಕರ್ನಾಟಕದಲ್ಲಿ ಎಲ್ಲ ಫಿಸಿಯೋಥೇರಪಿಸ್ಟ್‌ರು ವಿಧವಿಧವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದಾರೆ. ಇದರ ಲಾಭ ಪಡೆದು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿರಿ.

ಕರ್ನಾಟಕ ಸ್ಟೇಟ್ ಫಿಸಿಯೋಥೇರಪಿ ಫೇಡರೇಷನ್
ಜನರ ಮಹಿತಿಗಾಗಿ : http://www.karnatakaphysio.org

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Health is your wealth. September 8 is observed as World Physiotherapy day. On this occasion Karnataka State Physiotherapy Federation has come out with guidelines to all the people of Karnataka to keep their health in good condition. Be active, exercise everyday to be happy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ