Get Updates
Get notified of breaking news, exclusive insights, and must-see stories!

ರಾಸಲೀಲೆ: ಆರತಿರಾವ್ ಗೆ ತಾತ್ಕಾಲಿಕ ಜಾಮೀನು

Aarati Rao gets temporary relief
ರಾಮನಗರ, ಸೆ 7: ಬಿಡದಿ ನಿತ್ಯಾನಂದ ಸ್ವಾಮೀಜಿ ರಾಸಲೀಲೆ ಸಿಡಿ ತಯಾರಿಕೆ ಪ್ರಕರಣದ ಹಿನ್ನಲೆಯಲ್ಲಿ ರಂಜಿತಾ ಸೇರಿದಂತೆ ನಿತ್ಯಾನಂದನ ಶಿಷ್ಯರು ಆರತಿ ರಾವ್ ಮೇಲೆ ಹೂಡಿದ್ದ ಕೇಸಿನ ಪ್ರಕರಣದ ಹಿನ್ನಲೆಯಲ್ಲಿ ಆರತಿ ರಾವ್ ಅವರಿಗೆ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಶುಕ್ರವಾರ (ಸೆ 7) ರಾಮನಗರ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಆರತಿ ರಾವ್ ತಮ್ಮ ವಕೀಲರೊಂದಿಗೆ ಹಾಜರಾದರು.

ಈ ಪ್ರಕರಣದ ಹಿನ್ನಲೆಯಲ್ಲಿ ಆರತಿ ರಾವ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ರುದ್ರಮುನಿಯವರು ತಾತ್ಕಾಲಿಕ ನಿರೀಕ್ಷಣಾ ಜಾಮೀನು ನೀಡಿದ್ದಲ್ಲದೆ ಸೆಪ್ಟಂಬರ್ 13ರೊಳಗೆ ಕಾಯಂ ನಿರೀಕ್ಷಣಾ ಜಾಮೀನನ್ನು ಸಂಬಂಧಪಟ್ಟ ಜೆ ಎಂ ಎಫ್ ಸಿ ನ್ಯಾಯಾಲಯದಿಂದ ಪಡೆಯುವಂತೆ ಸೂಚಿಸಿದ್ದಾರೆ.

ಬಿಡದಿ ನಿತ್ಯಾನಂದ ಸ್ವಾಮೀಜಿಯ ಶಿಷ್ಯರು ಹಾಗೂ ರಂಜಿತಾ ಸೇರಿದಂತೆ ರಾಸಲೀಲೆ ಸಿಡಿ ತಯಾರಿಕಾ ಪ್ರಕರಣದಲ್ಲಿ ಲೆನಿನ್ ಮತ್ತು ಆರತಿ ರಾವ್ ಅವರ ಕೈವಾಡವಿದೆ ಎಂದು ರಾಮನಗರ ನ್ಯಾಯಾಲಯದಲ್ಲಿ ಕೇಸು ದಾಖಲು ಮಾಡಿದ್ದರು.

2010ರಲ್ಲಿ ನಟಿ ರಂಜಿತಾ ಜತೆಗಿನ ರಾಸಲೀಲೆ ಪ್ರಕರಣ ಬಹಿರಂಗವಾಯಿತು. ಅದಾದ 15 ತಿಂಗಳ ತರುವಾಯ ರಾಸಲೀಲೆ ಸಿ.ಡಿ.ಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಆರತಿ ರಾವ್ ನನಗೆ ಬೆದರಿಸಿ, ಕೋಟಿಗಟ್ಟಲೆ ಹಣದ ಬೇಡಿಕೆಯಿಟ್ಟಿದ್ದಳು ಎಂದು ನಿತ್ಯಾನಂದ ಸ್ವಾಮಿ, ಆರತಿ ರಾವ್ ಮೇಲೆ ದೂರು ದಾಖಲಿಸಿದ್ದರು.

ಅಲ್ಲದೆ ಭಕ್ತೆಯ ಹೆಸರಿನಲ್ಲಿ ಆಶ್ರಮದಲ್ಲಿ ಕಲಿಸುವ ಯೋಗ, ಧ್ಯಾನಗಳನ್ನು ಕಲಿತು ಹೊರಜಗತ್ತಿನಲ್ಲಿ ಖಾಸಗಿ ಶಾಲೆಗಳನ್ನು ನಡೆಸಿ, ಹಣ ಗಳಿಸಿದ್ದಾಳೆ ಎಂದು ಚೆನ್ನೈನಲ್ಲಿ ನಿತ್ಯಾನಂದ ಕೇಸು ದಾಖಲಿಸಿದ್ದಾನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+