ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ದರ 32 ಸಾವಿರದಿಂದ ಇಳಿಕೆ ಸಾಧ್ಯತೆ

By Mahesh
|
Google Oneindia Kannada News

Unabated rally in gold; crosses Rs 32,000
ಬೆಂಗಳೂರು, ಸೆ.7: ಗುರುವಾರ(ಸೆ.5) ನಿರೀಕ್ಷೆಯಂತೆ ಚಿನ್ನದ ಬೆಲೆ 10 ಗ್ರಾಮ್‌ಗಳಿಗೆ 32 ಸಾವಿರ ರು. ಗಳ ಗಡಿ ದಾಟಿತು. ಜಾಗತಿಕ ಬೆಲೆ ಪ್ರವೃತ್ತಿ ಏರುಮುಖವಾಗಿದ್ದು ಜೊತೆಗೆ ಮದುವೆ ಮುಂತಾದ ಶುಭ ಸಮಾರಂಭದ ಋತು ಆರಂಭದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿರೀಕ್ಷಿತವಾಗಿತ್ತು. ಆದರೆ, ಶುಕ್ರವಾರದಿಂದ ಬೆಲೆ ಕೊಂಚ ಇಳಿಕೆಯಾಗುವ ಲಕ್ಷಣಗಳು ಕಂಡು ಬಂದಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಚಿನ್ನದ ದರ 31,700 ರು (24K), 29,650 ರು(22K), ಬೆಳ್ಳಿ 1 ಕಿಲೋ 61,900 ರು ಇದೆ. ಉಳಿದಂತೆ ಚೆನ್ನೈನಲ್ಲಿ 22K(31,675), 24K(31800.00) ಇದೆ. ಅಹಮದಾಬಾದಿನಲ್ಲಿ 31615.00(22K), 31740.00(24K). ಮುಂಬೈ, ದೆಹಲಿ, ಜೈಪುರಗಳಲ್ಲಿ 32 ಸಾವಿರ ಗಡಿ ದಾಟಿದೆ.

ಯುರೋ ವಲಯದಲ್ಲಿನ ಸಾಲ ಬಿಕ್ಕಟ್ಟು ಪರಿಹರಿಸುವಲ್ಲಿ ಯುರೋಪಿನ ಸೆಂಟ್ರಲ್ ಬ್ಯಾಂಕ್ ಸರ್ಕಾರಿ ಬಾಂಡ್ ಖರೀದಿ ಮಿತಿಯನ್ನು ತೆಗೆದು ಹಾಕಲಿದೆ ಎಂಬ ಊಹಾಪೋಹಗಳ ನಡುವೆಯೇ ಈ ಬೆಲೆ ಏರಿಕೆ ಪ್ರವೃತ್ತಿ ಜಾಗತಿಕ ಮಟ್ಟದಲ್ಲೂ ತೀವ್ರವಾಗಿದೆ. ಈ ಸಭೆ ನಂತರ ಚಿನ್ನದ ಬೆಲೆಯ ಏರಿಳಿತದ ಗ್ರಾಫ್ ಸ್ಪಷ್ಟ ಚಿತ್ರಣ ಸಿಗಲಿದೆ.

ಎರಡು ವಾರಗಳಲ್ಲಿ 10ಗ್ರಾಮ್‌ಗಳಿಗೆ 1,555ರೂ.ಗಳಷ್ಟು ಏರಿಕೆಯಾಗಿ ದೇಶದೆಲ್ಲೆಡೆ 32 ಸಾವಿರ ರು ಗಡಿ ದಾಟಿತ್ತು. ಶುದ್ಧ ಚಿನ್ನ 10 ಗ್ರಾಮ್‌ಗೆ 32,300 ರೂ., ಆದರೆ 8ಗ್ರಾಮ್‌ಗಳ ನಾಣ್ಯಕ್ಕೆ 200 ರೂ. ಏರಿ 25,250ರೂ.ಗಳಾಗಿತ್ತು.

ಮುಂದಿನ ಹಬ್ಬ ಹಾಗೂ ಮದುವೆ ಋತುವಿನಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತೀಯ ಸರಾಫ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಂದರ್ ಜೈನ್ ತಿಳಿಸಿದ್ದಾರೆ. ರೂಪಾಯಿ ಮೌಲ್ಯ ಕುಸಿದಿರುವುದೂ ಚಿನ್ನದ ಆಮದನ್ನು ದುಬಾರಿಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಕಳೆದ ಏಪ್ರಿಲ್ 4 ರಿಂದ ಆಗಿರುವ ಏರಿಕೆಗಳಲ್ಲೇ ಇದು ಗರಿಷ್ಠವಾಗಿತ್ತು.ಬೆಳ್ಳಿ ಕಿಲೋಗೆ 1,100 ರೂ.ಏರಿ 61,100ರೂ. ಗಳಿಗೆ ತಲುಪಿದೆ.ಕೈಗಾರಿಕೆ ಮತ್ತು ನಾಣ್ಯ ನಿರ್ಮಾಣ ವಲಯದಿಂದ ಹೆಚ್ಚಿದ ಬೇಡಿಕೆ ಇದಕ್ಕೆ ಕಾರಣವೆಂದು ಹೇಳಲಾಗಿದೆ.

English summary
Continuing the bull run, India's gold futures gained on Thursday morning, by touching a fresh peak of Rs 32,874 per 10 grams following firm global cues. Gold investors will eye the outcome of a European Central Bank's policy meet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X