ಪೆಟ್ರೋಲ್ ಕಣಜ ಸೌದಿಯಲ್ಲಿ ಶೀಘ್ರ ಪೆಟ್ರೋಲ್ ಅಭಾವ

saudi-arabia-to-become-petrol-importer-2030-citigroup
ದುಬೈ, ಸೆ.7: ಇತ್ತ ಪೆಟ್ರೋಲ್ ಬೆಲೆಯನ್ನು ಗಗನದತ್ತ ಚಿಮ್ಮಿಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮೇಡಂ ವಿದೇಶದಿಂದ ವಾಪಸಾಗುವುದಕ್ಕೇ ಭಾರತ ಸರಕಾರ ಕಾಯುತ್ತಿದೆ. ಆದರೆ ಅತ್ತ 'ಪೆಟ್ರೋಲ್ ಕಣಜ' ಸೌದಿಯಲ್ಲಿ ಸದ್ಯದಲ್ಲೇ ಪೆಟ್ರೋಲ್ ಅಭಾವ ಸೃಷ್ಟಿಯಾಗುವ ಎಲ್ಲ ಅಪಾಯಗಳು ಗೋಚರಿಸುತ್ತಿವೆ.

ವಿಶ್ವದಲ್ಲೇ ಅತಿ ದೊಡ್ಡ ತೈಲ ಉತ್ಪಾದಕ ದೇಶ ಸೌದಿ ಅರೇಬಿಯ. ಇಲ್ಲಿ ದಿನಕ್ಕೆ 1.11 ಕೋಟಿ ಬ್ಯಾರಲ್ ತೈಲ ಉತ್ಪಾದಿಸಲಾಗುತ್ತದೆ. ಪ್ರಸ್ತುತ ದಿನವೊಂದಕ್ಕೆ ಇಲ್ಲಿಂದ 77 ಲಕ್ಷ ಬ್ಯಾರಲ್ ತೈಲ ರಫ್ತು ಮಾಡಲಾಗುತ್ತಿದೆ.

ಆದರೆ 2030ರ ವೇಳೆಗೆ ರಫ್ತು ಮಾಡುವುದು ಹಾಗಿರಲಿ, ಸೌದಿ ತೈಲವನ್ನು ಆಮದು ಮಾಡಿಕೊಳ್ಳುವ ದೇಶವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಸಿಟಿಗ್ರೂಪ್ ವರದಿಯೊಂದು ಹೇಳಿದೆ.

ಸೌದಿಯು ಸದ್ಯಕ್ಕೆ ತನ್ನ ಉತ್ಪಾದನೆಯ ಶೇ. 25 ರಷ್ಟು ತೈಲವನ್ನು ತಾನೇ ಬಳಸಿಕೊಳ್ಳುತ್ತಿದೆ. ದೇಶದ ತಲಾವಾರು ಇಂಧನ ಬಳಕೆ ಹೆಚ್ಚಾಗುತ್ತಲೇ ಇದೆ. ಸೌದಿಯಲ್ಲಿ ಶೇ. 50ರಷ್ಟು ವಿದ್ಯುತ್ತನ್ನು ತೈಲ ಮತ್ತು ಅದರ ಉಪ ಉತ್ಪನ್ನಗಳಿಂದ ಉತ್ಪಾದಿಸಲಾಗುತ್ತಿದೆ.

ಪರಿಸ್ಥಿತಿ ಹೀಗೇ ಮುಂದುವರಿದರೆ 2030ರ ವೇಳೆಗೆ ಸೌದಿ ಅರೇಬಿಯದ ಬಳಿ ರಫ್ತು ಮಾಡಲು ತೈಲವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವರದಿ ವಿಶ್ಲೇಷಿಸಿದೆ.

ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಗಟ್ಟಬೇಕಾದರೆ ವಿದ್ಯುತ್‌ ಉತ್ಪಾದಿಸಲು ಮತ್ತು ಕೈಗಾರಿಕೆಗಳಲ್ಲಿ ಪೆಟ್ರೋಲ್ ಬಳಸುವುದನ್ನು ಕಡಿಮೆ ಮಾಡುವುದು ಅತ್ಯಗತ್ಯ ಎಂದು ವರದಿ ಎಚ್ಚರಿಸಿದೆ.

ಈ ನಿಟ್ಟಿನಲ್ಲಿ ಮರಳುಗಾಡಿನಲ್ಲಿ ಸೌರ ವಿದ್ಯುತ್ ಮತ್ತು ಅಣು ವಿದ್ಯುತ್ ಉತ್ಪಾದನೆಯತ್ತ ಗಮನಹರಿಸುವುದು ಅನಿವಾರ್ಯವಾಗಿದೆ. ಸೌದಿ ಅರೇಬಿಯದ ಒಟ್ಟು ಆದಾಯದಲ್ಲಿ ಶೇ. 86ರಷ್ಟು ತೈಲೋತ್ಪನದಿಂದ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+