ಭಾರತೀಯ ಪೈಲಟ್ಸ್ ಗೆ ಕಾಣಿಕೆ ನೀಡಿದ ಚೀನಾ ಸಚಿವ

china-defence-minister-gen-lie-gift-to-iaf-pilots
ನವದೆಹಲಿ, ಸೆ. 6: ಚೀನಾದ ರಕ್ಷಣಾ ಸಚಿವ ಜನರಲ್ ಲಿಯಾಂಗ್ ಗ್ವಾಂಗ್ ಲಿ ಅವರು ಭಾರತೀಯ ವಾಯುಪಡೆಯ ಇಬ್ಬರು ಪೈಲಟ್ ಗಳಿಗೆ ಒಂದು ಲಕ್ಷ ರೂಪಾಯಿ ವಿಶೇಷ ಕಾಣಿಕೆಯನ್ನು ನೀಡಿದ್ದಾರೆ.

ಏನಾಯಿತೆಂದರೆ ಚೀನಾದ ರಕ್ಷಣಾ ಸಚಿವರು ಭಾರತಕ್ಕೆ ಐದು ದಿನಗಳ ಅಧಿಕೃತ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ಮೊನ್ನೆ ಸೋಮವಾರ ಅವರನ್ನು ಮುಂಬೈನಿಂದ ದೆಹಲಿಗೆ ಕರೆತಂದಿತು. ಆ ವೇಳೆ ವಿಮಾನದ ಚಾಲಕರಾಗಿದ್ದ ಇಬ್ಬರು ಪೈಲಟ್ ಗಳಿಗೆ ಎರಡು ಕವರುಗಳನ್ನು ನೀಡಲಾಗಿದೆ.

ಸರಿ, ಅತ್ತ ವಿದೇಶದ ಸಚಿವರು ತಮ್ಮ ತಾಯ್ನಾಡಿಗೆ ಮರಳುತ್ತಿದ್ದಂತೆ ಇತ್ತ ಸದರಿ ಪೈಲಟ್ ಗಳು ಕುತೂಹಲಭರಿತರಾಗಿ ಆ 'ಅಸಮಾನ್ಯ ಕಾಣಿಕೆ'ಯನ್ನು ಅಂದರೆ ಕವರುಗಳನ್ನು ತೆಗೆದು ನೋಡಿದ್ದಾರೆ. ಅದರಲ್ಲಿತ್ತು ಭಾರತೀಯ ಕರೆನ್ಸಿಯ ಒಂದು ಲಕ್ಷ ರೂಪಾಯಿಗಳು. ಇದನ್ನು ಕಂಡು ಪೈಲಟ್ ಗಳು ನಿಜಕ್ಕೂ ಹೌಹಾರಿದ್ದಾರೆ.

ತಕ್ಷಣ ವಿಶೇಷ ವಿಮಾನದ ಮುಖ್ಯ ಪೈಲಟ್ (ಕ್ಯಾಪ್ಟನ್) ಆ ಅಸಮಾನ್ಯ/ಅಸಹಜ ಕಾಣಿಕೆಯ ಬಗ್ಗೆ ಭಾರತೀಯ ವಾಯುಪಡೆಯ ಮುಖ್ಯ ಕಚೇರಿಯ ಉನ್ನತಾಧಿಕಾರಿಗಳ ಗಮನ ಸೆಳೆದಿದ್ದಾರೆ. ಅವರಿಗೂ ತಕ್ಷಣ ಏನು ಮಾಡಬೇಕೆಂದು ತೋಚಿಲ್ಲ. ಬಳಿಕ ಸಮಾಲೋಚನೆ ನಡೆಸಿ, ಅಷ್ಟೂ ಮೊತ್ತವನ್ನು ಭಾರತ ಸರಕಾರದ ಖಜಾನೆಯಲ್ಲಿ ಜಮಾ ಮಾಡಲು ನಿರ್ಧರಿಸಿದ್ದಾರೆ.

'ವಿದೇಶಿ ಗಣ್ಯ ಅತಿಥಿಯೊಬ್ಬರು ನೀಡಿರುವ ಕಾಣಿಕೆಯನ್ನು ವಾಪಸ್ ಮಾಡುವುದು ನಮ್ಮ ಸೌಜನ್ಯವಲ್ಲ. ವಿಷಯ ಸೂಕ್ಷ್ಮವಾಗಿರುವುದರಿಂದ ಕಾಣಿಕೆಯನ್ನು ನಾವೇ ಇಟ್ಟುಕೊಳ್ಳಲು ನಿರ್ಧರಿಸಿದೆವು. ನಮ್ಮ ಗಣ್ಯರು ಹೀಗೆ ವಿದೇಶ ಪ್ರವಾಸ ಕೈಗೊಂಡಾಗ ಪೈಟಲ್ ಗಳ ಕಾರ್ಯತತ್ಪರತೆ ಮೆಚ್ಚಿ ಟೈ ಮತ್ತಿತರ ಚಿಕ್ಕ ಕಾಣಿಕೆಗಳನ್ನು ನೀಡುವುದು ಸಹಜ' ಎಂದು IAF ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+