ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೌಡಿ ಸೈಲೆಂಟ್ ಸುನೀಲ ಸಹಚರರ ಬಂಧನ

By Mahesh
|
Google Oneindia Kannada News

Silent Sunil gang
ಬೆಂಗಳೂರು, ಸೆ.6: ಬೆಂಗಳೂರು ಜೈಲಿನಲ್ಲಿರುವ ನಗರದ ಕುಖ್ಯಾತ ರೌಡಿ ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ ಸಹಚರರನ್ನು ಬೆಂಗಳೂರಿನ ಸಿಸಿಬಿ ದಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ತಮ್ಮ ಎದುರಾಳಿ ಗುಂಪಿನ ಸುಬ್ರಮಣಿ ಮತ್ತು ಆತನ ಸ್ನೇಹಿತರಾದ ಶೇಖರ ಮತ್ತು ಆನಂದನನ್ನು ಕೊಲೆ ಮಾಡಿ ಆತನ ವಶದಲ್ಲಿದ್ದ ಹಣ ಮತ್ತು ಆಭರಣಗಳನ್ನು ದರೋಡೆ ಮಾಡಲು ಮಾರಕಾಸ್ತ್ರಗಳನ್ನು ವಶದಲ್ಲಿಟ್ಟುಕೊಂಡು ಹೊಂಚುಹಾಕುತ್ತಿದ್ದಾರೆಂಬ ವಿಷಯವು ಬೆಳಕಿಗೆ ಬಂದಿರುತ್ತದೆ.

ದಸ್ತಗಿರಿಯಾಗಿರುವ ಆರೋಪಿಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ.
1) ಶ್ರೀಧರ ಅಲಿಯಾಸ್ ತೀರ್ಥಶ್ರೀ, 36 ವರ್ಷ
2) ಪ್ರಭಾಕರ ಅಲಿಯಾಸ್ ಪುಟ್ಟ, 35 ವರ್ಷ
3) ವೈ. ದೇವರಾಜು ಅಲಿಯಾಸ್ ದೇವ, 30 ವರ್ಷ
4) ವಿ. ಆನಂದ, 38 ವರ್ಷ
5) ರಾಮಪ್ಪ, 36 ವರ್ಷ
6) ವೆಂಕಟೇಶ ಅಲಿಯಾಸ್ ಆಟೋ ವೆಂಕಟೇಶ,38 ವರ್ಷ
7) ವೆಂಕಟೇಶ, 45 ವರ್ಷ
8) ರಾಜು ಕಡಕ ಅಲಿಯಾಸ್ ರಾಜು ನೇಪಾಳಿ 23 ವರ್ಷ
9) ಶಂಕರ್ ಬಹದ್ದೂರ್, 31 ವರ್ಷ

ಆರೋಪಿಗಳು ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣಾ ಸರಹದ್ದಿನ, ಸೋಮಸಂದ್ರ ಪಾಳ್ಯ ಮತ್ತು ಮಂಗಮ್ಮನಪಾಳ್ಯ, ಕಡೆ ಹೋಗುವ ರಸ್ತೆಯಲ್ಲಿ ದರೋಡೆಮಾಡಲು ಹೊಂಚು ಹಾಕುತ್ತಿದ್ದಾಗ ಸಿ.ಸಿ.ಬಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಅವರ ವಶದಿಂದ 1 ಸ್ಯಾಂಟ್ರೋ ಕಾರು, 1 ಲಾಂಗ್, 3 ಪೈಪ್ ಗಳು, 1 ದೊಣ್ಣೆ, 7 ಮೊಬೈಲ್ ಪೋನ್ ಗಳನ್ನು ಅಮಾನತ್ತುಪಡಿಸಿರುತ್ತಾರೆ. ಈ ಬಗ್ಗೆ ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿರುತ್ತೆ

ಇತರೆ ಅಪರಾಧ ಸುದ್ದಿ: ಇರಾನ್ ಮೂಲದ ದಂತ ವೈದ್ಯ ವಿದ್ಯಾರ್ಥಿಯೊಬ್ಬರ ಮನೆಯಿಂದ ಸುಮಾರು 13 ಲಕ್ಷ ರು ಮೊತ್ತದ ವಸ್ತುಗಳು ದೋಚಿರುವ ಘಟನೆ ಕಾಡಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ.

ಇರಾನಿ ವಿದ್ಯಾರ್ಥಿ ಇದ್ದ ಬಾಡಿಗೆ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ 12.50 ಲಕ್ಷ ರೂ.ನಗದು, ವಿಡೀಯೊ ಕ್ಯಾಮರಾ ಸೇರಿದಂತೆ 13 ಲಕ್ಷ ರೂ.ಮೊತ್ತದ ವಸ್ತುಗಳನ್ನು ದೋಚಲಾಗಿದೆ

ಎಚ್‌ಬಿಆರ್ ಲೇಔಟ್‌ನ ನಿವಾಸಿ ಅಲಿ ರೋಜ್ ಗಾರ್, ಎಸ್ ಜಿಆರ್ ಕಾಲೇಜಿನಲ್ಲಿ ಎರಡನೇ ವರ್ಷದ ಡೆಂಟಲ್ ಸರ್ಜರಿ ಓದುತ್ತಿದ್ದಾರೆ. ಘಟನೆ ನಡೆದಾಗ ಸ್ನೇಹಿತನ ಮನೆಯಲ್ಲಿದ್ದ ಅಲಿ, ಗಾಬರಿಗೊಂಡು ಕಾಡಗೊಂಡನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆ ಬೀಗ ಹಾಕಿಕೊಂಡು ಕೋರಮಂಗಲದಲ್ಲಿರುವ ಗೆಳೆಯನ ಮನೆಗೆ ಹೋಗಿದ್ದೆ. ಆದರೆ, ರಾತ್ರಿ 11:30 ಸುಮಾರಿಗೆ ಮನೆಗೆ ಹಿಂದಿರುಗಿ ನೋಡಿದಾಗ, ಹಣ ಕಳವು ಮಾಡಿರುವುದು ಪತ್ತೆಯಾಗಿದೆ ಎಂದು ಅಲಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಈ ಸಂಬಂಧ ಕಾಡುಗೊಂಡನಹಳ್ಳಿ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಮನೆಯಲ್ಲಿ ಏಕೆ ಲಕ್ಷಗಟ್ಟಲೇ ನಗದು ಹಣ ಇಟ್ಟುಕೊಂಡಿದ್ದು ಏಕೆ ಎಂಬ ಅನುಮಾನದಿಂದ ಅಲಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ನನ್ನ ಸಂಬಂಧಿಕರೊಬ್ಬರನ್ನು ರಾಜರಾಜೇಶ್ವರಿ ಡೆಂಟಲ್ ಕಾಲೇಜಿಗೆ ದಾಖಲು ಮಾಡಲು ಹಣ ತಂದಿರಿಸಿದ್ದೆ ಎಂದು ಅಲಿ ಹೇಳಿಕೆ ನೀಡಿದ್ದಾರೆ. ಅಲಿ ಬಗ್ಗೆ ತಿಳಿದವರೇ ಈ ಕೃತ್ಯ ಎಸೆಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು,
ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

English summary
Rowdy Silent Sunil's associated held by CCB Police today(Sep.6). A dental student from Iran Aliwas robbed of Rs 12.5 cash, a video camera and other valuables kept in his room in KG Halli police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X