ಸೋನಿಯಾ ಆರೋಗ್ಯ ಏರುಪೇರು, ಆತಂಕ ಬೇಡ

ಆದರೆ, ಸೋನಿಯಾ ಅವರು ಯಾವ ಆಸ್ಪತ್ರೆಗೆ ತೆರಳಿದಿದ್ದಾರೆ. ಸದ್ಯ ಅವರ ಕಾಯಿಲೆ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಮತ್ತೊಮ್ಮೆ ಕಾಂಗ್ರೆಸ್ ಮೌನ ವಹಿಸಿದೆ.
ಅದರಲ್ಲೂ ತೀರಾ ಇತ್ತೀಚೆಗಷ್ಟೇ ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಭಾರತಕ್ಕೆ ಮರಳಿದ್ದರು. ಆದರೆ ಈಗ ಪುನಃ ವಿದೇಶದಲ್ಲಿ ಚಿಕಿತ್ಸೆ ಪಡೆಯುವಂತಹ ಕಷ್ಟದ ಪರಿಸ್ಥಿತಿ ಸೋನಿಯಾ ಗಾಂಧಿಗೆ ಬಂದಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಕಾಯಿಲೆ (ಕ್ಯಾನ್ಸರ್?)ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೋನಿಯಾ ಗಾಂಧಿ ಅವರ ಕಾಯಿಲೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ. ನಂತರ 2012ರ ಫೆಬ್ರವರಿಯಲ್ಲಿ ಕೆಲ ದಿನಗಳ ಕಾಲ ವಿದೇಶಕ್ಕೆ ತೆರಳಿದ್ದರು. ಈಗ ಮತ್ತೊಮ್ಮೆ ಚಿಕಿತ್ಸೆಗಾಗಿ ದೌಡಾಯಿಸಿದ್ದಾರೆ.
ರಾಹುಲ್ ಗೆ ಪಟ್ಟ?: ಎಂದಿನಂತೆ ರಕ್ಷಣಾ ಸಚಿವ ಎಕೆ ಅಂಟನಿ, ಸಂಸದೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಅವರಿರುವ ಸಮಿತಿಗೆ ಜವಾಬ್ದಾರಿಯನ್ನು ಸೋನಿಯಾ ವಹಿಸಿದ್ದಾರೆ. ಈ ಬಾರಿ ಪ್ರಣಬ್ ಮುಖರ್ಜಿ ಅವರ ಜಾಗಕ್ಕೆ ರಾಹುಲ್ ಗಾಂಧಿ ಸಮಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಸಕ್ರಿಯ ರಾಜಕೀಯದಿಂದ ಹಂತ ಹಂತವಾಗಿ ಹಿಂದೆ ಸರಿಯುವಂತೆ ಸೋನಿಯಾ ಗಾಂಧಿ ಅವರಿಗೆ ವೈದ್ಯರು ಸಲಹೆ ನೀಡಿದ್ದು, ಇದರ ಫಲಿತಾಂಶ ಸದ್ಯದಲ್ಲೇ ಕಾಣಬಹುದಾಗಿದೆ.
ಕೋಲ್ ಗೇಟ್ ಹಿಂಸೆ: ಇತ್ತೀಚೆಗೆ ಕೋಲ್ ಗೇಟ್ ಹಗರಣದ ಕುರಿತಾಗಿ ಬಿಜೆಪಿ ಪಕ್ಷದ ಮುಖಂಡರಿಗೆ ಖುದ್ದು ಸೋನಿಯಾ ಗಾಂಧಿ ಅವರೇ ಉತ್ತರ ನೀಡಿದ್ದಾರೆ. ಸಂಸತ್ತಿನ ಒಳಗೆ ಹಾಗೂ ಹೊರ ಭಾಗದಲ್ಲೂ ಸೋನಿಯಾ ಹಗರಣದ ಕುರಿತಾಗಿ ನೇರವಾಗಿ ಪ್ರತಿಪಕ್ಷಗಳಿಗೆ ಉತ್ತರಿಸಿ ದಂಗು ಮೂಡಿಸಿದ್ದರು.
ಸಿಎಜಿ ವರದಿ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಉದ್ಭವಿಸಿದ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಧಾನಿ ರಾಜೀನಾಮೆ ಕೇಳುತ್ತಿರುವ ಬಿಜೆಪಿ ತನ್ನ ಪಟ್ಟು ಸಡಿಲಿಸಲು ನಿರಾಕರಿಸಿದೆ.
ಪ್ರಧಾನಿ ಮನಮೋಹನ್ ಸಿಂಗ್ ಕೂಡ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಸಂಸತ್ತಿನ ಒಳಗೂ ಹೊರಗೂ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಪಕ್ಷದ ವಕ್ತಾರ ಶಾನವಾಜ್ ಹುಸೇನ್ ತಿಳಿಸಿದರು.












Click it and Unblock the Notifications