• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಿತಾ ಕುಮಾರಸ್ವಾಮಿ ದಂಪತಿಯಿಂದ ಗ್ರಾಮ ಸಂದರ್ಶನ

By Srinath
|
ಬೆಂಗಳೂರು, ಸೆ.1: ರಾಜ್ಯದ ಹಿತರಕ್ಷಣೆಯಲ್ಲಿ ಬಂಧಿತ ಆರೋಪಿ ಉಗ್ರರ ಬಗ್ಗೆ ಅಪ್ಪಿತಪ್ಪಿಯೂ ಮಾತನಾಡದ ಜಾತ್ಯಾತೀತ ಜನತಾ ದಳದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಪಕ್ಷದ ಹಿತದೃಷ್ಟಿಯಿಂದ ಸಪತ್ನೀಕರಾಗಿ ಮುಂದಿನ ವಾರ ನಾಲ್ಕು ದಿನಗಳ ಮಟ್ಟಿಗೆ ಗ್ರಾಮ ಸಂದರ್ಶನಕ್ಕೆ ಹೊರಡುವುದಾಗಿ ಹೇಳಿದ್ದಾರೆ.

ಹೀಗೆ ಜೆಡಿಎಸ್ ನ ಮೊದಲ ದಂಪತಿ ಅನಿತಾ ಮತ್ತು ಕುಮಾರಸ್ವಾಮಿಸೆ. 4ರಿಂದ ಚನ್ನಪಟ್ಟಣ ತಾಲೂಕಿನ 5 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲಿದೆ.

ಅದಕ್ಕೂ ಮುನ್ನ ದಂಪತಿ ಮಂಗಳವಾರದಂದು ಚನ್ನಪಟ್ಟಣದ ಕೆಂಗಲ್‌ ದೇವಾಲಯಕ್ಕೆ ಪೂಜೆ ಸಲ್ಲಿಸಲಿದೆ. ಅಂದಹಾಗೆ, ಮಧುಗಿರಿ ಕ್ಷೇತ್ರದ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಮುಂಬರುವ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಅನಿತಾ ಅವರು ತಾಲೂಕು ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್‌ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಭೆ ನಡೆಸಿದರು. ಸಭೆಯಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಬಮೂಲ್‌ ನಿರ್ದೇಶಕ ಎಸ್‌. ಲಿಂಗೇಶ್‌ ಕುಮಾರ್‌, ಮುಖಂಡರಾದ ಸಿಂ.ಲಿಂ. ನಾಗರಾಜು, ಮಾಕಳಿ ಮಹೇಶ್‌, ಪಾರ್ಥಸಾರಥಿ ಇತರರು ಉಪಸ್ಥಿತರಿದ್ದರು.

ಯೋಗೇಶ್ವರ್‌ ಅಧಿಕಾರವಧಿಯಲ್ಲಿ ತಾಲೂಕು ಜೆಡಿಎಸ್‌ ಕಾರ್ಯಕರ್ತರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದು, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಅಗತ್ಯ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ತಂಡೋಪಾದಿಯಲ್ಲಿ ಬರ ಅಧ್ಯಯನ:
ಸೆಪ್ಟೆಂಬರ್‌ 5 ರಿಂದ 15 ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜೆಡಿಎಸ್ ನಾಯಕರು 5 ತಂಡಗಳಲ್ಲಿ ಬರ ಪ್ರವಾಸ ಕೈಗೊಳ್ಳಲಿದೆ. ಜತೆಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಪಕ್ಷ ಬಲವರ್ಧನೆ ಕುರಿತು ಗಮನಹರಿಸಲಿವೆ. ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ನಮ್ಮ ಪಕ್ಷ ಕೈಗೊಳ್ಳಲಿರುವ ಬರ ಪೀಡಿತ ಪ್ರದೇಶಗಳ ಪ್ರವಾಸ ಭಿನ್ನವಾಗಿರುತ್ತದೆ ಎಂದಿದ್ದಾರೆ.

* ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷ ಪಿಜಿಆರ್‌ ಸಿಂಧ್ಯಾ ತಂಡ (ಸದಸ್ಯರು-ಮಾಜಿ ಸಚಿವರಾದ ಎಂ.ಮಹಾದೇವ್‌, ಎಂ.ಶಿವಣ್ಣ, ಸಿ.ಚೆನ್ನಿಗಪ್ಪ, ವಿಧಾನಪರಿಷತ್‌ ಸದಸ್ಯ ಹುಲಿನಾಯ್ಕರ್‌, ಮುಖಂಡರಾದ ಕೆ.ಎ.ಆನಂದ್‌, ಬಿ.ಎಸ್‌.ಕನ್ಯಾಕುಮಾರಿ, ಐ. ಸುಲ್ತಾನಾಬೇಗಂ)
ಪ್ರವಾಸದ ಜಿಲ್ಲೆಗಳು- ಮೈಸೂರು, ಚಾಮರಾಜನಗರ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಕೊಡಗು, ಚಿಕ್ಕಮಗಳೂರು.

* ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ್‌ ಯತ್ನಾಳ್‌ ತಂಡ (ಸದಸ್ಯರು- ಮಾಜಿ ಸಚಿವ ಕೆ ಅಮರನಾಥ್‌, ಮಾಜಿ ಸಚಿವೆ ಲೀಲಾದೇವಿ ಆರ್‌ ಪ್ರಸಾದ್‌, ಮುಖಂಡರಾದ ಅನಂತಯ್ಯ, ರಿಯಾಜ್‌ ಫಾರೂಖೀ, ರಾಮನಾಥ್‌ ಹೆಗಡೆ, ರಾಜಪಾಲ ಚವ್ಹಾಣ, ಅಶೋಕ್‌ ನಿಂಗಯ್ಯ ಪೂಜಾರಿ, ಡಿ ಯಶೋಧರ, ನಂದಿನಿಗೌಡ)
ಪ್ರವಾಸದ ಜಿಲ್ಲೆಗಳು- ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ವಿಜಾಪುರ.

* ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಂಡ (ಸದಸ್ಯರು- ಮೊಹಮ್ಮದ್‌ ಜಫ್ರುಲ್ಲಾಖಾನ್‌, ಮಾಜಿ ಸಚಿವ ಅಲ್ಕೋಡ್‌ ಹನುಮಂತಪ್ಪ, ಮಾಜಿ ಶಾಸರಾದ ಎನ್‌ ಸೂರ್ಯನಾರಾಯಣರೆಡ್ಡಿ, ಕೆ ಅನ್ನದಾನಿ, ಮುಖಂಡರಾದ ಕೆವಿ ನಾರಾಯಣಸ್ವಾಮಿ, ಇಸ್ಮಾಯಿಲ್‌ ಕಾಲೆಬುಡ್ಡೆ, ಎಂಎಸ್‌ ನಾರಾಯಣರಾವ್‌)
ಪ್ರವಾಸದ ಜಿಲ್ಲೆಗಳು- ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಮಹಾನಗರ.

* ಮಾಜಿ ಸಂಸದ ಸಿ ನಾರಾಯಣಸ್ವಾಮಿ ತಂಡ (ಸದಸ್ಯರು- ಶಾಸಕರಾದ ಜಿಕೆ ವೆಂಕಟ ಶಿವಾರೆಡ್ಡಿ, ಕೆ ರಾಜು, ಮಾಜಿ ಶಾಸಕರಾದ ಎಸ್‌ ಚಿಕ್ಕಮಾದು, ಎಚ್‌ಸಿ ನೀರಾವರಿ, ಎನ್ ಜ್ಯೋತಿರೆಡ್ಡಿ, ಮರಿಲಿಂಗೇಗೌಡ)
ಪ್ರವಾಸದ ಜಿಲ್ಲೆಗಳು- ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು.

* ಮಾಜಿ ಸಚಿವ ಬಂಡೆಂಪ್ಪ ಕಾಶಂಪೂರ್‌ ತಂಡ (ಸದಸ್ಯರು- ವಿಧಾನಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್ಎಂ ಆಗಾ, ಶಾಸಕ ಸುಭಾಷ್‌ ಆರ್ ಗುತ್ತೇದಾರ್‌, ಮಾಜಿ ಸಭಾಪತಿ ಡೇವಿಡ್‌ ಸಿಮೆಯೋನ್‌, ಮಾಜಿ ಶಾಸಕ ಜುಲ್ಫೀಕರ್‌ ಹಶ್ಮಿ, ಬಾಬುರಾವ್‌ ಮುಡಬಿ, ಮಂಗಳ)
ಪ್ರವಾಸದ ಜಿಲ್ಲೆಗಳು- ಗುಲ್ಬರ್ಗಾ, ಬೀದರ್‌, ಯಾದಗೀರ್‌, ರಾಯಚೂರು, ಕೊಪ್ಪಳ.

ಸಮಾವೇಶಗಳ ಸರಣಿ: ಈ ಮಧ್ಯೆ, ಜೆಡಿಎಸ್ ವತಿಯಿಂದ ಅಲ್ಪಸಂಖ್ಯಾತರು, ದಲಿತರ ಸಮಾವೇಶದ ನಂತರ ನಾಯಕ ಸಮುದಾಯ ಹಾಗೂ ಅಂಗವಿಕಲರ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅ. 1 ರಂದು ಚಿತ್ರದುರ್ಗದಲ್ಲಿ ನಾಯಕ ಸಮುದಾಯದ ಸಮಾವೇಶ, ಅ. 7 ರಂದು ಬೆಂಗಳೂರಿನಲ್ಲಿ ಅಂಗವಿಕಲರ ಸಮಾವೇಶ ನಡೆಯಲಿದೆ.

ನಾಯಕ ಸಮುದಾಯದ ಸಮಾವೇಶಕ್ಕೆ ಪೂರ್ವಬಾವಿಯಾಗಿ ಪಕ್ಷದ ನಾಯಕರಾದ ಚಿಕ್ಕಮಾದು ಅವರು ಒಂದು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಮಾಡಲಿದ್ದಾರೆ. ವಿಕಲಚೇತನರ ಸಮಾವೇಶಕ್ಕಾಗಿ ಜೆಡಿಎಸ್‌ ವಿಕಲಚೇತನರ ಘಟಕದ ಅಧ್ಯಕ್ಷ ಬಸವಣ್ಣ ಅವರು ಪ್ರವಾಸ ಮಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜೆಡಿಎಸ್ ಸುದ್ದಿಗಳುView All

English summary
H D Kumaraswamy, president of the State unit of Janata Dal (S) has said that Five of JDS teams will tour drought-prone Karnakata regions. Also along with Anitha Kumaraswamy himself will conduct Channapatna Gram Sabha from next week. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more