• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಧಿತ ಆರೋಪಿ ಉಗ್ರರಿಗೆ ಜಾಮೀನು ಕಷ್ಟ ಕಷ್ಟ

By Srinath
|
ಬೆಂಗಳೂರು, ಸೆ. 1: ಕಳೆದರೆಡು ದಿನಗಳಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ 11+6 ಶಂಕಿತ ಭಯೋತ್ಪಾದಕರ ವಿರುದ್ಧ ಸಾಕಷ್ಟು ಪುರಾವೆಗಳು ದೊರೆತಿವೆ. ಹೀಗೆ ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿರುವುದರಿಂದಲೇ ಅವರನ್ನು ಬಂಧಿಸಲಾಗಿದೆ. ಹಾಗಾಗಿ, ಜಾಮೀನಿನ ಮೇಲೆ ಅವರು ಹೊರಬರುವುದು ಅಷ್ಟು ಸುಲಭ ಸಾಧ್ಯವಲ್ಲ ಎನ್ನುತ್ತಾರೆ ಸಿಸಿಬಿಯ ಉನ್ನತಾಧಿಕಾರಿಯೊಬ್ಬರು.

ಹಾಗೆ ನೋಡಿದರೆ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ರಾಜ್ಯ ಪೊಲೀಸರು 56 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಅವರು ಯಾರೂ ಜಾಮೀನಿನ ಮೇಲೆ ಬಿಡುಗಡೆಯಾಗಿಲ್ಲ. ಆದರೆ ಹುಬ್ಬಳ್ಳಿ ನ್ಯಾಯಾಲಯದ ಸ್ಫೋಟ ಆರೋಪಿಗಳು ಮಾತ್ರ ಜಾಮೀನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಳಿದ ಶಂಕಿತ ಉಗ್ರರು ಸುಪ್ರೀಂಕೋರ್ಟ್ ಕದ ತಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಪೊಲೀಸರು ಬಲವಾದ ಸಾಕ್ಷ್ಯ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಜಾಮೀನು ಕೊಡಲು ಸುತರಾಂ ಮನಸ್ಸು ಮಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಭದ್ರತೆ ಸೂಕ್ಷ್ಮ ವಿಚಾರ ಆಗಿರುವುದರಿಂದ ಶಂಕಿತ ಉಗ್ರರಿಗೆ ನ್ಯಾಯಾಲಯಗಳು ಜಾಮೀನು ನೀಡುವುದು ಕಷ್ಟ ಕಷ್ಟ.

ರಾಜ್ಯದಲ್ಲಿ ನಡೆದ ಭಯೋತ್ಫಾದನೆ ಪ್ರಕರಣಗಳು ಯಾವುವು:
ಚರ್ಚ್ ಬಾಂಬ್ ಸ್ಫೋಟ, ಐಐಎಸ್ ಸಿ ಮೇಲಿನ ದಾಳಿ, ಬೆಂಗಳೂರು ಸರಣಿ ಬಾಂಬ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ, ಹುಬ್ಬಳ್ಳಿ ಜೆಎಂಎಫ್ ಸಿ ನ್ಯಾಯಾಲಯ ಸ್ಫೋಟ, ಮೈಸೂರಿನಲ್ಲಿ ಸಿಕ್ಕಿಬಿದ್ದ ಅಲ್ ಬದ್ರ್ ಉಗ್ರರು, ಆಂಧ್ರದ ಮೆಹಬೂಬ್ ನಗರದಲ್ಲಿ ಸಿಕ್ಕಿಬಿದ್ದ ಎಲ್ಇಟಿ ಕಮಾಂಡರ್, ಮಂಗಳೂರು ಮತ್ತು ಚಿಂತಾಮಣಿಯಲ್ಲಿ ಸೆರೆಸಿಕ್ಕ ಉಗ್ರರು ಸೇರಿದಂತೆ ಒಟ್ಟು 56 ಮಂದಿ ರಾಜ್ಯದ ವಿವಿಧ ಜೈಲುಗಳಲ್ಲಿ ಬಂಧಿಗಳಾಗಿದ್ದಾರೆ.

ಬೆಂಗಳೂರು ಪೊಲೀಸರೇ 40 ಮಂದಿ ಉಗ್ರರ ಬೇಟೆಯಾಡಿದ್ದಾರೆ. ಕೇರಳದ ಪಿಡಿಎಫ್ ಮುಖಂಡ ಅಬ್ದುಲ್ ನಾಜರ್ ಮದನಿ ಸೇರಿದಂತೆ ಹಲವರ ವಿರುದ್ಧ ವಿವಿಧ ನ್ಯಾಯಾಲಯಗಳಿಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಹಿಂದೊಂದು ಮುಂದೊಂದು ನಂಬರ್ ಪ್ಲೇಟ್: ಹುಬ್ಬಳ್ಳಿಯಲ್ಲಿ ಮೊನ್ನೆ ಬಂಧನಕ್ಕೊಳಗಾದ ಗುತ್ತಿಗೆದಾರ ಮಹಮ್ಮದ್‌ ಸಾಧಿಕ್‌ ಲಷ್ಕರ್‌ ಅಲಿಯಾಸ್‌ ರಾಜು (28) ಮನೆಯೊಳಗೆ TVS Victor ದ್ವಿಚಕ್ರ ವಾಹನವೊಂದು ಅಡಗಿ ಕುಳಿತಿದೆ. ಇದರ ವಿಶೇಷವೇನೆಂದು ಕೇಳಿದಿರಾ?

ಈ ವಾಹನ ಸಾಧಿಕ್‌ ಲಷ್ಕರ್‌ ಗೆ ಸೇರಿದ್ದು. ಅವ ಕಾರು ಖರೀದಿಸಿದ ನಂತರ ಬೈಕನ್ನು ಮೂಲೆಗೆ ತಳ್ಳಿ, ಕಾರುಬಾರು ಜೋರಾಗಿ ನಡೆಸಿದ್ದಾನೆ. ಆಶ್ಚರ್ಯವೆಂದರೆ ಈ ಬೈಕಿಗೆ ಹಿಂದೆ ಮತ್ತು ಮುಂದೆ ಇರುವ ನೋಂದಣಿ ಸಂಖ್ಯೆ ಬೇರೆ ಬೇರೆಯಾಗಿದೆ.

ಮುಂಬದಿಯ ನಂಬರ್ ಪ್ಲೇಟಿನಲ್ಲಿ KA 17 U 983 ಇದೆ. ಅದೇ ಹಿಂಬದಿಯಲ್ಲಿ KA 17 U 893 ಇದೆ. ಒಂದೇ ದೃಷ್ಟಿಗೆ ಇದು ಪ್ರ್ತೇಕ ನಂಬರ್ ಎಂಬುದು ಗೊತ್ತಾಗದು. ಕೇವಲ 2 ಸಂಖ್ಯೆಗಳನ್ನು ಅದಲು ಬದಲು ಮಾಡಿ, ಪೊಲೀಸರ ಕಣ್ಣಿಗೆ ಮಣ್ಣೆರಚುವ ಪ್ರಯತ್ನವಾ ಇದು? ಅಥವಾ ಈ ಎರಡೂ ನಂಬರುಗಳು ನಕಲಿಯವೇ? ಹುಬ್ಬಳ್ಳಿ ಪೊಲೀಸರು ತಕ್ಷಣವೇ ಸಾಧಿಕ್‌ ನ ಮನೆಗೆ ತೆರಳಿ, ಸಮಗ್ರ ಪರಿಶೀಲನೆ ನಡೆಸುವುದು ಒಳ್ಳೆಯದು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bail for Bangalore CCB arrested terror suspects not a cake walk. Other than 11+6 recent arrests, so far 56 terror suspects are behind bars in various jailes in Karnataka. But bail for them is a distant dream.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more