ದೀಪಾವಳಿಗೆ ರಾಕೆಟ್ ವೇಗದಲ್ಲಿ ಚಿನ್ನ ಏರಿಕೆ!

Gold likely to cross Rs 32,000-mark by Diwali: BBA
ಮುಂಬೈ/ ಬೆಂಗಳೂರು, ಆ.30: ದೀಪಾವಳಿ ಹಬ್ಬದ ವೇಳೆಗೆ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರಿಕೆ ಕಾಣಲಿದ್ದು, ಮುಂಬೈನ ಚಿನಿವಾರ ಪೇಟೆಯ ವರ್ತಮಾನದ ಪ್ರಕಾರ ದೀಪಾವಳಿ ಹಬ್ಬದ ವೇಳೆಗೆ ಪ್ರತಿ 10 ಗ್ರಾಂ ಚಿನ್ನದ ಬೆಲೆ 32,000 ರು. ತಲುಪುವ ನಿರೀಕ್ಷೆಯಿದೆ.

ಬಾಂಬೆ ಬುಲಿಯನ್ ಅಸೋಸಿಯೇಶನ್ (ಬಿಬಿಎ) ಹೀಗೊಂದು ಮುನ್ಸೂಚನೆ ನೀಡಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಚಿನ್ನದ ಮೇಲಿನ ಹೂಡಿಕೆ ಪ್ರತಿ ದಿನ ಏರಿಕೆಯಾಗುತ್ತಿರುವ ಬೆನ್ನಲ್ಲೇ ಈ ರೀತಿ ಸುದ್ದಿ ಹಬ್ಬಿದೆ. ಇದಕ್ಕೆ ಕಾರಣವೂ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುಪೇರು ಹಾಗೂ ರುಪಾಯಿ vs ಡಾಲರ್ ಮೌಲ್ಯದ ಅಸಮತೋಲನವೇ ಕಾರಣ ಎನ್ನಬಹುದು.

ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ)ದಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆಯಿದ್ದು ಹಳದಿ ಲೋಹದ ಬೇಡಿಕೆ ಗಗನವನ್ನು ಮುಟ್ಟಲಿದೆ ಎಂದು ಬಿಬಿಎ ಹೇಳಿದೆ. ಸಿರಿಯಾದಲ್ಲಿ ನಡೆಯುತ್ತಿರುವ ಅಂತರಿಕ ಸಮರ ಹಾಗೂ ಇರಾನ್ ನಲ್ಲಿರುವ ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಇದರ ಪರಿಣಾಮವಾಗಿ ಭಾರತ, ಚೀನಾ ಮತ್ತು ಇತರ ದೇಶಗಳಲ್ಲಿ ಚಿನ್ನದ ಬೇಡಿಕೆ ಹಾಗೂ ಚಿಲ್ಲರೆ ಮಾರಾಟದಲ್ಲಿ ಹೆಚ್ಚಳ ಕಂಡು ಬರಲಿದೆ ಎಂದು ಬಿಬಿಎ ಅಧ್ಯಕ್ಷ ರಿದ್ದಿಸಿದ್ದಿ ಬುಲಿಯನ್ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೋಥಾರಿ ಹೇಳಿದ್ದಾರೆ.

ಅಮೆರಿಕವು ತನ್ನ ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಲಿರುವ ಮೂರನೇ ಸುತ್ತಿನ ಕ್ರಮಗಳಿಂದಾಗಿ ಚಿನ್ನದ ಸಾಗರೋತ್ತರ ಬೆಲೆಗಳು ಒಂದು ಔನ್ಸ್‌ಗೆ 1,800 ಡಾಲರ್ ತಲುಪುವ ನಿರೀಕ್ಷೆಯಿದೆ.

ಚಿನ್ನದ ಬೆಲೆ : ಗುರುವಾರ (ಆ.30) ಮುಂಬೈನಲ್ಲಿ ಅಪರಂಜಿ (24K) 31,060.00/10 ಗ್ರಾಂ ಹಾಗೂ 22K ಚಿನ್ನ 28,810.00/10 ಗ್ರಾಂ ಇದೆ.
ಬೆಂಗಳೂರಿನಲ್ಲಿ ಇದೇ ದರ ಪ್ರತಿ 10 ಗ್ರಾಂಗೆ 24K 31,250.00, 22K- 29,100.00 ಇದೆ.

2011ರಲ್ಲಿ ಸುಮಾರು 969 ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡಿರುವ ಭಾರತ, ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ವಹಿವಾಟು ನಿರೀಕ್ಷೆಯಲ್ಲಿದೆ. ಅದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 50 ರಷ್ಟು ಬೇಡಿಕೆ ಇಳಿಮುಖವಾಗುವ ನಿರೀಕ್ಷೆಯಿದೆ ಎಂದು ಪೃಥ್ವಿರಾಜ್ ಹೇಳಿದ್ದಾರೆ.

MCX ಕೂಡಾ ಅಕ್ಟೋಬರ್ ವೇಳೆಗೆ 10ಗ್ರಾಂ ಬೆಲೆ 30,929 ರಷ್ಟು ಏರಿಕೆ ಕಾಣಲಿದೆ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್ ಗೆ 1,667.69 ಗೆ ತಲುಪಲಿದೆ ಎಂದು ಮುಂಚಿತವಾಗಿ ಭವಿಷ್ಯ ನುಡಿದಿತ್ತು. ಈಗ ಸೆಪ್ಟೆಮ್ಬರ್ ನಲ್ಲಿ ಆರ್ಥಿಕ ಸುಧಾರಣೆಗಾಗಿ ಆರ್ ಬಿಐ ನಡೆಸಲಿರುವ ಮಹತ್ವದ ಸಭೆ ಹಾಗೂ ಸಭೆಯ ನಂತರದ ನಿರ್ಣಯದ ಮೇಲೆ ಹಳದಿ ಲೋಹದ ಬೆಲೆ ಭವಿಷ್ಯ ನಿರ್ಧಾರವಾಗಲಿದೆ.

ಅಗಸ್ಟ್ ಕೊನೆವಾರದಲ್ಲಿ ಹಬ್ಬಗಳ ಸಾಲು, ಮದುವೆ ಮುಂತಾದ ಶುಭಾರಂಭ ಕಾರ್ಯ ಕಾಲ ಸದ್ಯಕ್ಕೆ ಸ್ಥಗಿತವಾಗಿದ್ದರೂ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 31 ಸಾವಿರ ರು. ಗಡಿ ದಾಟಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+