ಎರಡು ಲಕ್ಷ ಪೈಲಟ್ಸ್ ಬೇಕಾಗಿದ್ದಾರೆ: ಬೋಯಿಂಗ್

ಏಷ್ಯಾ ಖಂಡದಲ್ಲೇ ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಪೈಲಟ್ಟುಗಳ ಅಗತ್ಯವಿದೆ. ಅದರಲ್ಲೂ ಚೀನಾ ಮತ್ತು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಭಾರಿ ಬೇಡಿಕೆ ಕಂಡುಬರಲಿದೆ ಎಂದು ಬೋಯಿಂಗ್ ಸಂಸ್ಥೆಯ ಅಧ್ಯಯನವೊಂದು ತಿಳಿಸಿದೆ.
ಚೀನಾ, ಭಾರತ ಮತ್ತು ಮಧ್ಯ ಪ್ರಾಚ್ಯದ ವಿಮಾನಯಾನ ಸಂಸ್ಥೆಗಳಿಗೆ 185,600 ಹೊಸ ಪೈಲಟ್ಟುಗಳು ಮತ್ತು 243,500 ನೂತನ ತಂತ್ರಜ್ಞರು 20 ವರ್ಷಗಳ ಕಾಲಾವಧಿಯಲ್ಲಿ ಬೇಕಾಗಿದ್ದಾರೆ.
ವಿಶ್ವದ ಇತರೆ ಭಾಗಗಳಲ್ಲೂ ವಿಮಾನ ಸಿಬ್ಬಂದಿಗೆ ಬಹುಬೇಡಿಕೆ ಸೃಷ್ಟಿಯಾಗಲಿದೆ. ಇದರಿಂದ ಪೈಲಟ್ಟುಗಳು ಮತ್ತು ತಂತ್ರಜ್ಞರು ಭಾರಿ ಆಶಾಭಾವ ಹೊಂದಬಹುದು ಎಂದು ಬೋಯಿಂಗ್ ಸಂಸ್ಥೆಯು ಜೀವನೋತ್ಸಾಹ ತುಂಬಿದೆ.
ಈಗಾಗಲೇ ಪೈಲಟ್ಟುಗಳ ಕೊರತೆಯಿಂದಾಗಿ ವಿಮಾನ ಹಾರಾಟಗಳು ವಿಳಂಬವಾಗುವುದು ಅಥವಾ ವ್ಯತ್ಯಯವಾಗುವುದು ಜಾಗತಿಕ ವಿದ್ಯಮಾನವಾಗಿದೆ. ನುರಿತ ಪೈಲಟ್ಟುಗಳ ಕೊರತೆಯಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಆದ್ದರಿಂದ ಉತ್ತಮ ಭವಿಷ್ಯದ ಆಲೋಚನೆಯಿಂದ ಪೈಲಟ್ಟುಗಳು ಮತ್ತು ತಂತ್ರಜ್ಞರು ಆಗಲು ಈಗಿನಿಂದಲೇ ಸಿದ್ಧತೆ ನಡೆಸಬಹುದು ಎಂದು ಬೋಯಿಂಗ್ ಹಿತನುಡಿ ಹೇಳಿದೆ. ಉತ್ತಮ ಆರ್ಥಿಕತೆಗಳು, ಜನ ವಿಮಾನಯಾನದತ್ತ ಹೆಚ್ಚು ಒಲವು ತೋರುತ್ತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.












Click it and Unblock the Notifications