ಕಸಕಡ್ಡಿ ಎತ್ರೋ ಅಂದ್ರೆ ಕಮಿಷನರ್ರನ್ನೇ ಎತ್ತಿದ್ರು

19 IAS officers has been transferred
ಬೆಂಗಳೂರು, ಸೋಮವಾರ(ಆ 27) : ಬಿಬಿಎಂಪಿ ಮತ್ತು ಬಿಡಿಎ ಕಮಿಷನರ್ ಸೇರಿದಂತೆ ಒಟ್ಟು 19 ಐಎಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಸರಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಕಮಿಷನರ್ ಶಂಕರಲಿಂಗೇ ಗೌಡ ಅವರನ್ನು ತೋಟಗಾರಿಕಾ ಇಲಾಖೆಗೆ ಎತ್ತಂಗಡಿ ಮಾಡಲಾಗಿದೆ.

ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ (ಬಿಡಿಎ) ಕಮಿಷನರ್ ಆಗಿ ಶ್ಯಾಮ್ ಭಟ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಮಿಷನರ್ ಆಗಿ ರಜನೀಶ್ ಗೋಯಲ್ ಅವರನ್ನು ನೇಮಿಸಿ ಸರಕಾರ ಇದೀಗ ಕೆಲವೇ ಕ್ಷಣಗಳ ಹಿಂದೆ ಆದೇಶ ಹೊರಡಿಸಿದೆ.

ಮದನ್ ಗೋಪಾಲ್ ಅವರನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಸೆಲ್ವ ಕುಮಾರ್ ಅವರನ್ನು ಕೆಪಿಟಿಸಿಎಲ್ ಎಂಡಿ ಆಗಿ, ರವಿ ಕುಮಾರ್ ಅವರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಉಳಿದಂತೆ ತುಷಾರ್ ಗಿರಿನಾಥ್ - ಕಂದಾಯ, ಎಸ್ ಡಿ ಮೀನಾ - ಸಮಾಜ ಕಲ್ಯಾಣ, ವಂದಿತ್ ಶರ್ಮಾ - ಕೆ ಎಸ್ ಎಫ್ ಸಿ, ರಮಣ ರೆಡ್ಡಿ - ಪಿ ಡಬ್ಲ್ಯುಡಿ, ಪ್ರಭಾಕರ್ - ವೈದ್ಯಕೀಯ ಶಿಕ್ಷಣ ,ವೆಂಕಟಯ್ಯ - ಯುವಜನ ಸೇವಾ ಖಾತೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

* ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾಗಿರುವ ಟಿ.ಶ್ಯಾಮ್ ಭಟ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಕಮಾಡಿದೆ.
* ಪಿ.ಬಿ.ರಾಮಮೂರ್ತಿ ಅವರನ್ನು ವಕ್ಫ್ ಇಲಾಖೆಗೆ,
* ಎಂ.ಮದನ್ ಗೋಪಾಲ್-ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
* ಪಿ.ರವಿಕುಮಾರ್-ಆಯುಕ್ತರು, ಸಾರಿಗೆ ಇಲಾಖೆ,
* ಇ. ವೆಂಕಟಯ್ಯ-ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ,
* ವಂಧಿತಾ ಶರ್ಮಾ-ಎಂ.ಡಿ., ಕೆಎಸ್ಎಫ್ಸಿ,
* ರಾಜೀವ್ ಚಾವ್ಲಾ- ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ
* ಡಾ.ಇ.ವಿ ರಮಣ ರೆಡ್ಡಿ ಅವರನ್ನು ಯುವಜನ ಸೇವಾ ಇಲಾಖೆಗೆ
* ಶಂಭುದಯಾಳ್ ಮೀನಾ ಅವರನ್ನು ಸಮಾಜ ಕಲ್ಯಾಣ ಇಲಾಖೆಗೆ

* ಗಂಗಾರಾಮ್ ಬಡೇರಿಯಾ ಅವರನ್ನು ಗುಲ್ಬರ್ಗ ವಿಭಾಗದ ಪ್ರಾದೇಶಿಕ ಆಯುಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

* ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅವರಿಗೆ ಹೆಚ್ಚುವರಿಯಾಗಿ ಕಂದಾಯ ಇಲಾಖೆಯನ್ನು ನೀಡಲಾಗಿದೆ.

* ರಾಜೇಂದ್ರ ಚೋಳನ್-ಹೆಸ್ಕಾಂ, ಹುಬ್ಬಳ್ಳಿ,
* ಪಂಕಜ್ ಕುಮಾರ್-ಎಂಡಿ, ಕೆಪಿಟಿಸಿಎಲ್,
* ಕೆ.ಎಸ್. ಪ್ರಭಾಕರ-ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ
* ಎಸ್.ಅರ್.ಉಮಾಶಂಕರ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ
* ಎಸ್.ಸೆಲ್ವಕುಮಾರ್ -ಕೆಪಿಟಿಸಿಎಲ್ ಗೆ ವರ್ಗಾವಣೆ ಮಾಡಲಾಗಿದೆ.
* ಮನೋಜ್ ಕುಮಾರ್ ಮೀನಾ ಅವರನ್ನು ಗುಲ್ಬರ್ಗದ ಜಿಇಎಸ್ಸಿಪಿಗೆ ವರ್ಗಾವಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+