ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಗೆ ಮಹಿಳಾ ಟೆಕ್ಕಿಯಿಂದ ರೂ49 ಲಕ್ಷ ಉಂಡೆನಾಮ

By Srinath
|
Google Oneindia Kannada News

tcs-eserve-techie-pratiksha-citibank-fraud-rs-49-lakh
ಚೆನ್ನೈ, ಆ. 25: ಟೆಕ್ಕಿಗಳಿಗೆ ಜೀವನಾನುಭವ ತುಸು ಕಡಿಮೆ ಎಂದು ಆಗಾಗ ಬಿಂಬಿಸಲಾಗುತ್ತದೆ. ಅದು ನಿಜವೂ ಹೌದು ಎಂದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಆದರೆ ಬಹಳಷ್ಟು ಟೆಕ್ಕಿಗಳು ತಮ್ಮ ಕ್ಷೇತ್ರದಲ್ಲಿ ನಿಜಕ್ಕೂ ಪ್ರಕಾಂಡ ಪಂಡಿತರು ಎಂಬುದರಲ್ಲಿ ಎರಡು ಮಾತಿಲ್ಲ.

ದುರ್ದೈವವೆಂದರೆ ಕೆಲ ಟೆಕ್ಕಿಗಳು ಮಾಹಿತಿ ತಂತ್ರಜ್ಞಾನದಲ್ಲಿನ ತಮ್ಮೀ ಬುದ್ಧಿಮತ್ತೆಯ ಮೂಲಕ ಸೈಬರ್ ವಂಚನೆಗಿಳಿಯುತ್ತಾರೆ. ಮಹಿಳೆಯರು ಇದಕ್ಕೆ ಅಪವಾದ ಎಂಬ ಮಾತಿದೆಯಾದರೂ ಇಲ್ಲಿನ ಕಥಾನಾಯಕಿ ತಾನು ಯಾರಿಗೂ ಕಮ್ಮಿಯಿಲ್ಲ ಎಂದು ಕೈಚಳಕ ತೋರಿದ್ದಾರೆ.

ತಂತ್ರಜ್ಞರ ತವರೂರು ಎಂದು ಹೆಸರುವಾಸಿಯಾಗಿರುವ ಚೆನ್ನೈನಲ್ಲಿ ಮಹಿಳಾ ಟೆಕ್ಕಿಯೊಬ್ಬರು ಇಂತಹ ಹೈಟೆಕ್ ಅಪರಾಧವೆಸಗಿದ್ದಾರೆ. ಆರೋಪಿ ಟೆಕ್ಕಿ ಪ್ರತೀಕ್ಷಾ ಇಲ್ಲಿನ ಟಿಸಿಎಸ್ ಇ-ಸರ್ವ್ (TCS eServe) ಕಂಪನಿಯಲ್ಲಿದ್ದಾಳೆ. ಕಂಪನಿಯು ನಗರದ Citibank ಶಾಖೆಯ back-end ಸೇವಾ ವಿಭಾಗದ ಗುತ್ತಿಗೆ ಹೊತ್ತಿದ್ದು, ಪ್ರತೀಕ್ಷಾ ಇದೇ ವಿಭಾಗದಲ್ಲಿದ್ದಾಳೆ.

ಟೆಕ್ಕಿ ಪ್ರತೀಕ್ಷಾ, ಗ್ರಾಹಕರ ಅತಿ ಸೂಕ್ಷ್ಮ ವಿಷಯಗಳನ್ನು ಸ್ನೇಹಿತರಿಗೆ ನೀಡುವ ಮೂಲಕ ವಂಚನೆ ಮಾಡಿದ್ದಾಳೆ. ಆ ಮೂಲಕ ಗ್ರಾಹಕರ ಖಾತೆಗೆ ಕನ್ನ ಹಾಕಲು ಸ್ನೇಹಿತರಿಗೆ ಸಹಕರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ಅಶೋಕ ನಗರದಲ್ಲಿರುವ ಆಕೆಯ ಮನೆಯಲ್ಲಿ ಬಂಧಿಸಿದ್ದಾರೆ. 30 ವರ್ಷದ ಪ್ರತೀಕ್ಷಾಳನ್ನು ಕಂಪನಿ ಈಗ ಅಮಾನತುಗೊಳಿಸಿದೆ.

ಆರೋಪಿ ಪ್ರತೀಕ್ಷಾ ಇಬ್ಬರು ಗ್ರಾಹಕರ ಖಾತೆಗಳ ವಿವರಗಳನ್ನು ಪಡೆದು ಅವರ ವಿಳಾಸಗಳನ್ನು ಬದಲಿಸಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೂತನ ವಿಳಾಸಕ್ಕೆ ಕಳುಹಿಸುವಂತೆ ಬ್ಯಾಂಕ್‌ನ ದಿಕ್ಕು ತಪ್ಪಿಸಿದ್ದಳು.

ನಂತರ ಆಕೆಯ ಸ್ನೇಹಿತರು ಕಾರ್ಡ್‌ಗಳನ್ನು ಪಡೆದು ನಾನಾ ಕಡೆ ವಸ್ತುಗಳನ್ನು ಖರೀದಿ ಮತ್ತು ಹಣ ಡ್ರಾ ಮಾಡುವ ಮೂಲಕ ಸುಮಾರು ಮೂರು ಖಾತೆಗಳಿಂದ 49 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾರೆ.

ಕಂಪನಿಯ ದೂರಿನನ್ವಯ ಕೇಂದ್ರ ಅಪರಾಧ ದಳದ ಪೊಲೀಸರು ತನಿಖೆಗೆ ಮುಂದಾದಾಗ ಪ್ರತೀಕ್ಷಾ ಬಳಸುತ್ತಿದ್ದ ಕಂಪ್ಯೂಟರ್‌ ಅನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಈ ಅಂಕಿ-ಅಂಶಗಳು ಬೆಳಕಿಗೆ ಬಂದಿದೆ. ವಿಚಾರಣೆಯ ವೇಳೆ ಆರೋಪಿ ಪ್ರತೀಕ್ಷಾ ಅಪರಾಧವನ್ನು ಒಪ್ಪಿಕೊಂಡಿದ್ದು, ಇದೀಗ ಪೊಲೀಸರು ಆಕೆಯ ಸ್ನೇಹಿತರ ಹುಡುಕಾಟದಲ್ಲಿದ್ದಾರೆ.

MCA ವ್ಯಾಸಂಗ ಮಾಡಿರುವ ಆರೋಪಿ ಪ್ರತೀಕ್ಷಾ, ಕಳೆದ ಏಳು ವರ್ಷಗಳಿಂದ ಟಿಸಿಎಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಪ್ರತೀಕ್ಷಾ ಇತ್ತೀಚೆಗಷ್ಟೇ ವಿವಾಹವಾಗಿದ್ದು, ಆತ ಸಹ ಸಾಫ್ಟ್‌ವೇರ್ ಇಂಜಿನಿಯರ್ ಎನ್ನಲಾಗಿದೆ.

ತೀವ್ರ ಹಣಕಾಸಿನ ಮುಗ್ಗಟ್ಟಿನಲ್ಲಿದ್ದ ಸ್ನೇಹಿತರೊಬ್ಬರಿಗೆ ನೆರವಾಗಲು ತಾನು ಈ ಅಪರಾಧವೆಸಗಿದ್ದಾಗಿ ವಿಚಾರಣೆಯ ವೇಳೆ ಆಕೆ ತಿಳಿಸಿದ್ದಾಳೆ ಎಂದು ವಿಚಾರಣಾಧಿಕಾರಿ ತಿಳಿಸಿದ್ದಾರೆ.

English summary
Chennai TCS eServe techie Pratiksha Citibank fraud yeilds Rs 49 lakh. The 30-year-old software engineer Pratiksha landed behind bars for helping her friends swindle 49 lakh from customers of Citibank in the city. Working for TCS eServe, which handled the back-end operations of Citibank, she had access to sensitive information of account holders, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X