• search

ಮಲ್ಲಪುರದ ಟೀನೇಜ್ ಲವ್ ರೇಪ್ ಸ್ಟೋರಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Teenage love rape case, Mallapur
  ಹೈದರಾಬಾದ್, ಆ.24: ಮಲ್ಲಪುರದಲ್ಲಿ ಇತ್ತೀಚೆಗೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಲ್ಲದೆ ಸ್ಥಳೀಯರಿಗೆ ಇವರ ಬಗ್ಗೆ ಎಚ್ಚರಿಕೆ ನೀಡಿದರು. ಸಿನಿಮಾಗಳಿಂದ ಪ್ರೇರಿತರಾದ ಈ ಯುವಕರು ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರಗೈದು ಇಡೀ ಪ್ರದೇಶವನ್ನೇ ತಲ್ಲಣಗೊಳಿಸಿದ್ದರು.

  13 ವರ್ಷದ ಬಾಲಕಿಯ ಮೇಲೆ 17 ವರ್ಷ 2ನೇ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗೆ ಮನಸ್ಸಾಗಿದೆ. ಸಿನಿಮಾ, ಟಿವಿ ಪ್ರಭಾವದಿಂದ ಪ್ರಭಾವಿತನಾಗಿ ಟೀನೇಜ್ ಪ್ರೇಮಕತೆ ಆರಂಭಿಸಿದ್ದಾನೆ. ಶಾಂತಿನಗರದ ನಿವಾಸಿಯಾದ ಈತನ ತಾಯಿ ಮನೆಕೆಲಸ ವೃತ್ತಿಯಲ್ಲಿದ್ದಾರೆ.

  ಕುಕಟ್ಪಲ್ಲಿಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಆರೋಪಿ ರಮೇಶ್ ಕಾಲೇಜಿಗೆ ಹಾಜರಾಗಿದ್ದೇ ಕಮ್ಮಿ. 22 ವರ್ಷದ ಅಖ್ತರ್ ಎಂಬ ಗೆಳೆಯನ ಜೊತೆ ಮಲ್ಲಪುರದ ಹೈಸ್ಕೂಲ್ ಬಳಿ ಕಟ್ಟೆಯಲ್ಲಿ ಹರಟೆ ಹೊಡೆಯುತ್ತ ಕಾಲ ಕಳೆಯುತ್ತಿದ್ದ.

  ಸ್ಥಳೀಯ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಅಖ್ತರ್ ಮೊದಮೊದಲಿಗೆ ರಮೇಶ್ ಗೆ ಬುದ್ಧಿ ಹೇಳಲು ಪ್ರಯತ್ನಿಸಿ ವಿಫಲನಾಗಿದ್ದಾನೆ. ರಮೇಶ್ ತನ್ನ ಪ್ರೇಮಕತೆಯನ್ನು ಅಖ್ತರ್ ಬಳಿ ಹೇಳಿಕೊಂಡು ಹೇಗಾದರೂ ನನಗೆ ಅವಳು ಬೇಕು ಎಂದು ಗಲಾಟೆ ಮಾಡಿದ್ದಾನೆ.

  ಗೆಳೆಯ ಒತ್ತಡಕ್ಕೆ ಮಣಿದ ಅಖ್ತರ್ ಬಾಲಕಿಯ ಕಿಡ್ನಾಪ್ ಯೋಜನೆ ಹಾಕಿದ್ದಾನೆ. ರಮೇಶನ ಪರಿಚಯವಿದ್ದುದ್ದರಿಂದ ಬಾಲಕಿ ಕೂಡಾ ಅಖ್ತರ್ ಮನೆ ಕಡೆಗೆ ಬಂದಿದ್ದಾಳೆ. ಆದರೆ, ಅಲ್ಲಿದ್ದ ವಾತಾವರಣ ನೋಡಿ ಹೆದರಿದ್ದಾಳೆ.

  ರಮೇಶನ ಮೇಲೆ ಅಲ್ಪಸ್ವಲ್ಪ ಪ್ರೇಮ ಇರಿಸಿಕೊಂಡಿದ್ದ ಬಾಲಕಿಗೆ ತನ್ನ ಮೇಲೆ ಎರಡು ಕಾಮಮೃಗಗಳು ಇನ್ನೇನು ಬೀಳಲಿದೆ ಎಂದು ತಿಳಿಯುವಷ್ಟರಲ್ಲಿ ಕಾಲ ಮೀರಿತ್ತು. ಹಸಿದ ಹೆಬ್ಬುಲಿಯಂತೆ ಆಕೆ ಮೇಲೆ ಬಿದ್ದು ಕಾಮತೃಷ್ಣೆಯನ್ನು ತೀರಿಸಿಕೊಂಡ ಯುವಕರು ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.

  ರಮೇಶನ ಚಲನವಲನಗಳನ್ನು ಗಮನಿಸಿದ ಪೊಲೀಸರು ಅಖ್ತರ್ ಮನೆಗೆ ದಾಳಿ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ. ಬಾಲಕಿ ನೀಡಿದ್ದ ಹೇಳಿಕೆಗೂ ಅಖ್ತರ್ ಮನೆಯ ವಾತಾವರಣಕ್ಕೂ ಸಾಮ್ಯತೆ ಕಂಡು ಬಂದಿದೆ.

  ನಂತರ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸತ್ಯ ಹೊರಬಿದ್ದಿದೆ. ಬಾಲಕಿಯನ್ನು ಪ್ರೀತಿಸುತಿದ್ದೆ. ಅದರೆ, ಆಕೆ ಮೇಲೆ ಕಾಮದೃಷ್ಟಿ ಬೀರಲು ಸಿನಿಮಾಗಳ ಪ್ರಚೋದನಕಾರಿ ದೃಶ್ಯಗಳೇ ಕಾರಣ ಎಂದು ರಮೇಶ್ ಹೇಳಿಕೆ ನೀಡಿದ್ದಾನೆ ಎಂದು ಲಾಲಗುಡ ಇನ್ಸ್ ಪೆಕ್ಟರ್ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.

  ಹೆತ್ತರವರ ಅನುಮತಿ ಇಲ್ಲದೆ ಆರಂಭವಾದ ಟೀನೇಜ್ ಲವ್ ಸ್ಟೋರಿ, ದುರಂತ ಅಂತ್ಯ ಕಂಡಿದ್ದನ್ನು ಬೆಂಗಳೂರಿನ ದೇವನಹಳ್ಳಿ ಕಂಡ ಬಳಿಕ ಹೈದರಾಬಾದಿನಲ್ಲೂ ಇದೇ ರೀತಿ ಯುವ ಪ್ರೇಮಿಗಳ ಪ್ರೀತಿ ಹೆಸರಿನ ಚೆಲ್ಲಾಟ ದುರಂತಕ್ಕೆ ಕಾರಣವಾಗಿದೆ. ಇನ್ಸ್ ಪೆಕ್ಟರ್ ಶ್ರೀನಿವಾಸ್ ರೆಡ್ಡಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಪೋಷಕರು ಸೇರಿದಂತೆ ಮಲ್ಲಪುರ ಪ್ರದೇಶದ ಜನರಿಗೆ ಬುದ್ಧಿವಾದ ಹೇಳಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Mallapur police have arrested two persons in connection with rape case of 13 year old girl. Teenage love cum rape incidence was inspired by movies as per the statement given by one of the accused.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more