• search

ಇಂಡೋ ಪಾಕ್ ಚಹಾ ಕುಡಿದರೆ ಕ್ಯಾನ್ಸರ್ ಖತಂ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Indo Pak herbal Tea kills Cancer
  ಲಂಡನ್, ಆ.23: ಭಾರತ ಹಾಗೂ ಪಾಕಿಸ್ತಾನದ ಬಂಜರು ಪ್ರದೇಶಗಳಲ್ಲಿ ಕಾಣಸಿಗುವ ಅಪರೂಪದ ಸಸ್ಯದಿಂದ ತಯಾರಿಸಿದ ಹರ್ಬಲ್ ಟೀ ಕುಡಿದರೆ ಸಾಕು ಕ್ಯಾನ್ಸರ್ ಪೀಡೆ ಮಂಗಮಾಯವಾಗುತ್ತದೆ ಎಂದು ಲಂಡನ್ ನ ವಿಜ್ಞಾನಿಗಳು ಹೇಳಿದ್ದಾರೆ.

  ಈ ವರ್ಜಿನ್ಸ್ ಮ್ಯಾಂಟಲ್ ಎಂದು ಕರೆಯಲ್ಪಡುವ ಸಸ್ಯದ ರಸದಲ್ಲಿ ಕ್ಯಾನ್ಸರ್‌ನ ಕಣಗಳನ್ನು ಸಾಯಿಸುವ ಗುಣಗಳಿದೆ. ವಿಶೇಷ ಸಸ್ಯದ ಸಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ನಿವಾರಣೆಗೆ ಪ್ರಸಕ್ತ ಬಳಸಲಾಗುತ್ತಿರುವ ಕೀವೊಥೆರಪಿಯಿಂದ ಬರಬಹುದಾದ ಪಾರ್ಶ್ವ ಪರಿಣಾಮಗಳನ್ನೂ ತಡೆಗಟ್ಟಲು ಸಾಧ್ಯವಿದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

  ಸ್ತನ ಕ್ಯಾನ್ಸರ್‌ಗೆ ತುತ್ತಾಗಿರುವ ಪಾಕಿಸ್ತಾನದ ಗ್ರಾಮೀಣ ಪ್ರದೇಶಗಳ ಮಹಿಳೆಯರು ಈಗಾಗಲೇ 'ವರ್ಜಿನ್ಸ್ ಮ್ಯಾಂಟಲ್' ಎಂದು ಕರೆಯಲಾಗುವ ಸಸ್ಯದಿಂದ ತಯಾರಿಸಲಾದ ಚಹಾವನ್ನು ಸೇವಿಸುತ್ತಿದ್ದಾರೆ ಎಂದು 'ಡೈಲಿ ಮೇಲ್' ವರದಿ ಮಾಡಿದೆ.

  ಸಸ್ಯದಿಂದ ತೆಗೆಯಲಾದ ಸಾರದಲ್ಲಿ ಪ್ರಬಲ ಕ್ಯಾನ್ಸರ್ ನಿರೋಧಕ ಕಣಗಳು ಪತ್ತೆಯಾಗಿದೆ. ಕ್ಯಾನ್ಸರ್ ಕಣಗಳು ಹರಡುವುದನ್ನು ತಡೆಯುವಲ್ಲಿ ನೆರವಾಗುತ್ತವೆ ಎಂಬ ಅಂಶವನ್ನು ಬರ್ಮಿಂಗ್‌ಹ್ಯಾಮ್‌ನ ಆಶ್ಟನ್ ಯೂನಿವರ್ಸಿಟಿ ಹಾಗೂ ಡ್ಯೂಡ್ಲೆಯ ರಸೆಲ್ಸ್ ಹಾಸ್ಪಿಟಲ್‌ನ ಸಂಶೋಧಕರು ಕಂಡುಕೊಂಡಿದ್ದಾರೆ.

  ಸಸ್ಯದ ಭಾಗಗಳಿಂದ ತಯಾರಿಸಲಾದ ಚಹಾ ಬಳಸುವುದರಿಂದ ಕೇವಲ ಐದು ತಾಸುಗಳ ಅವಧಿಯಲ್ಲಿ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುವ ಪ್ರಕ್ರಿಯೆ ಬಂದಿದೆಯಲ್ಲದೆ 24 ತಾಸುಗಳ ಅವಧಿಯಲ್ಲಿ ಕ್ಯಾನ್ಸರ್ ಕೋಶಗಳನ್ನು ಸಾಯಿಸುವುದನ್ನು ಪ್ರಯೋಗಾಲಯದ ಪರೀಕ್ಷೆ ದೃಢಪಡಿಸಿದೆ ಎಂದು ವರದಿ ತಿಳಿಸಿದೆ.

  'Fagonia cretica' ಎಂಬ ಸಸ್ಯಶಾಸ್ತ್ರೀಯ ನಾಮವನ್ನು ಹೊಂದಿರುವ ಸಸ್ಯವು ಭಾರತ, ಪಾಕಿಸ್ತಾನ, ಆಫ್ರಿಕ ಹಾಗೂ ಯುರೋಪ್‌ನ ಕೆಲವು ಭಾಗಗಳಲ್ಲಿರುವ ಬಂಜರು ಹಾಗೂ ಮರುಭೂಮಿ ಪ್ರದೇಶಗಳಲ್ಲಿ ಕಂಡು ಬರುತ್ತವೆ.

  ಈ ಗಿಡಮೂಲಿಕೆ ಚಹಾವು ಕ್ಯಾನ್ಸರ್ ಕಣಗಳನ್ನು ನಾಶಪಡಿಸುವುದಲ್ಲದೆ, ಸಾಂಪ್ರದಾಯಿಕ ಕೀವೊಥೆರಪಿಯಂತೆ ಯಾವುದೇ ಪಾರ್ಶ್ವಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಎಂದು ಸಂಶೋಧನಾ ತಂಡದ ಮುಖ್ಯಸ್ಥರಾದ ಪ್ರೊಫೆಸರ್ ಹೆಲೆನ್ ಗ್ರಿಫಿತ್ಸ್ ಹಾಗೂ ಪ್ರೊಫೆಸರ್ ಅಮ್ತುಲ್ ಆರ್. ಕಾರ್‌ಮೈಕೆಲ್ ವಿವರಿಸಿದ್ದಾರೆ.

  ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಕ್ರಮೇಣ ಡಿಎನ್ಎ ನಾಶವಾಗಿ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳಿರುವ ಮತ್ತೊಂದು ಓದಿದ ಮೇಲೆ ಆಲ್ಕೋಹಾಲ್ ಬದಲಿಗೆ ಚಹಾ ಕುಡಿಯುವುದೇ ಮೇಲು ಎಂಬುದು ಎಲ್ಲರ ಸದಭಿಪ್ರಾಯವಾಗಿದೆ.

  ಬಿಯರ್, ವೈನ್ ಅಥವಾ ಇನ್ನಾವುದೇ ಮದ್ಯದಿಂದ ಅಸಿಟಾಲ್ಡಿಹೈಡ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಕ್ಯಾನ್ಸರ್‌ ಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.(ಪಿಟಿಐ)

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Scientists have discovered that extracts from a plant, found in arid regions of India and Pakistan can kill cancerous cells and produces no harmful side-effects associated with chemotherapy.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more