• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಾಹ ಕಾಯ್ದೆ: ಹೆಣ್ಮಕ್ಕಳೇ ಸ್ಟ್ರಾಂಗೂ ಗುರೂ ಅಂತಿದೆ

By Mahesh
|
Protest against marital law
ಬೆಂಗಳೂರು, ಆ.21: ಕೇಂದ್ರ ಸರಕಾರ ವೈವಾಹಿಕ ಕಾಯಿದೆ 2010ನ್ನು ತಿದ್ದುಪಡಿ ಮಾಡುವುದರಿಂದ ಅನುಕೂಲಕ್ಕಿಂತ ಹೆಚ್ಚು ಅನಾನುಕೂಲಗಳೇ ಹೆಚ್ಚು. ಆದುದರಿಂದ ಈ ಕಾನೂನನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಅವಕಾಶ ನೀಡಬಾರದು ಎಂದು ಪುರುಷರ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷೆ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಆಗ್ರಹಿಸಿದ್ದಾರೆ.

ಮಹಿಳೆಯರ ರಕ್ಷಣೆ ಹೆಸರಿನಲ್ಲಿ ಕಾನೂನುಗಳನ್ನು ಜಾರಿಗೆ ತಂದರೆ ಪುರುಷರ ಶೋಷಣೆ ಹೆಚ್ಚಾಗಲಿದೆ. ಇದರಿಂದ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುವ ಸಂಭವವಿದೆ. ಮದುವೆ ನಂತರ ಮಹಿಳೆ ಡಿವೋರ್ಸ್ ಪಿಟೀಷನ್ ಹಾಕಿದರೆ ಗಂಡ ಅದನ್ನು ಪ್ರಶ್ನಿಸುವ ಹಕ್ಕು ಕಳೆದುಕೊಳ್ಳುತ್ತಾನೆ. ಇದು ಯಾವ ರೀತಿ ನ್ಯಾಯ.

ಈ ಬಗ್ಗೆ ದೆಹಲಿಯಲ್ಲಿ ಬೆಂಗಳೂರಿನ CRISP ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸರ್ಕಾರ ಈ ಕಾಯಿದೆಯನ್ನು ಜಾರಿಗೊಳಿಸುವುದಕ್ಕೆ ಮುಂದಾಗಿರುವುದು ಸೂಕ್ತವಲ್ಲ ಎಂದು ಹೇಳಿದರು.ಈ ಕಾಯಿದೆಯ ಪ್ರಕಾರ ಮದುವೆಯಾದ ಒಂದು ತಿಂಗಳಲ್ಲಿ ವಿಚ್ಛೇದನ ಪಡೆಯಬಹುದು ಹಾಗೂ ಪತಿಯ ಆಸ್ತಿಯಲ್ಲಿ ಭಾಗ, ಅವರ ಆದಾಯದಲ್ಲಿ ಶೇ.50ರಷ್ಟನ್ನು ನೀಡಬೇಕಾಗಿರುತ್ತದೆ.

ಇದರಿಂದ ವೈವಾಹಿಕ ಸಂಬಂಧ ಒಂದು ಕೌಟುಂಬಿಕ ಒಳಿತನ್ನು ಕಾಪಾಡದೆ ವ್ಯಾಪಾರಿಕರಣವಾಗಿ ಮಾರ್ಪಡುತ್ತವೆ. ಆದುದರಿಂದ ಈ ಕಾನೂನನ್ನು ಯಾವುದೇ ಕಾರಣಕ್ಕೂ ಜಾರಿಯಾಗಬಾರದು. ಗಂಡು ಹೆಣ್ಣಿನ ನಡುವೆ ತಾರತಮ್ಮ ಉಂಟಾಗುತ್ತದೆ. ಅಲ್ಲದೆ, ವಿಚ್ಛೇದನದ ನಂತರ ಮಗು ರಕ್ಷಣೆ ಹೊಣೆ ತಾಯಿಗೆ ಮಾತ್ರ ಸಿಗಲಿದೆ ಇದು ಎಷ್ಟರಮಟ್ಟಿಗೆ ಸರಿ ಎಂದು ಲಲಿತಾನಾಯಕ್ ಪ್ರಶ್ನಿಸಿದ್ದಾರೆ.

ಮಕ್ಕಳ ರಕ್ಷಣೆ: ಬೆಂಗಳೂರು ಮೂಲದ CRISP (Children's Rights Initiative for Shared Parenting) ಸ್ಥಾಪಕ ಅಧ್ಯಕ್ಷ ಕುಮಾರ್ ವಿ ಜಹಗೀರ್ ದಾರ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಉದ್ದೇಶಿತ ವೈವಾಹಿಕ ತಿದ್ದುಪಡಿ ಮಸೂದೆಗೆ ನಮ್ಮ ವಿರೋಧವಿದೆ. ಇದು ವಿವಾಹಿತ ಪುರುಷ ಹಾಗೂ ಸ್ತ್ರೀ ನಡುವೆ ಕದಂಕ ಮೂಡಿಸುವುದಲ್ಲದೆ, ಸಮಾನತೆಗೆ ಭಂಗ ತರುತ್ತದೆ. ಇದನ್ನು ವಿರೋಧಿಸಿ ನಮ್ಮ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ವೈವಾಹಿಕ ತಿದ್ದುಪಡಿ ಮಸೂದೆ (Marriage Law (Amendment Bill2010) ) ಮಂಡನೆಯಾಗಲಿದೆ. ಈ ಮಸೂದೆ ಜಾರಿಗೊಂಡರೆ ಮದುವೆ ನಂತರ ಪತಿ ಹೊಂದಿರುವ ಸ್ವಯಾರ್ಜಿತ ಆಸ್ತಿ ಬಹುಪಾಲು ಎಲ್ಲವೂ ಪತ್ನಿಯ ಪಾಲಾಗಲಿದೆ.

ಆದರೆ, CRISP ಆಕ್ಷೇಪ ಇಲ್ಲಿಗೆ ನಿಲ್ಲುವುದಿಲ್ಲ. ಮಕ್ಕಳ ಪಾಲನೆ ಪೋಷಣೆ ಮಾಡಲು ತಾಯಿಗೆ ಸೂಕ್ತ ಎಂಬ ಪೂರ್ವಾಗ್ರಹ ಹೊಂದಿದೆ. ಈ ಮೂಲಕ ಮಕ್ಕಳ ಪಾಲನೆ ಹಾಗೂ ತಂದೆ ತನ್ನ ಮಕ್ಕಳನ್ನು ವೀಕ್ಷಿಸಲು ನಿರ್ಬಂಧ ಹೇರುತ್ತದೆ.

ಮಹಿಳಾ ಕೇಂದ್ರಿತ ಮಸೂದೆ ಇದಾಗಿದ್ದು, ವಿವಾಹ ವಿಚ್ಛೇದನದ ನಂತರ ಪುರುಷ ತನ್ನ ಸ್ವಯಾರ್ಜಿತ ಆಸ್ತಿ ಅಲ್ಲದೆ ಮಕ್ಕಳ ಪೋಷಣೆಯ ಹೊಣೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ತಂದೆ ಇಲ್ಲದೆ ಮಕ್ಕಳನ್ನು ಎಲ್ಲಾ ಹೆಣ್ಣು ಮಕ್ಕಳು ಬೆಳೆಸಬಲ್ಲರು ಎಂಬ ಪೂರ್ವಾಗ್ರಹ ಸಿದ್ಧಾಂತಕ್ಕೆ ನಮ್ಮ ವಿರೋಧವಿದೆ ಎಂದು ಜಹಗೀರದಾರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Marital law or Marriage bill 2010 should be gender neutral like the Hindu Marriage Act. The bill curtails the fundamental Rights to Equality before Law as granted by Constitution to every citizen. Husband can't challenge the divorce petition filed by the wife which is illogical said BT Lalitha Nayak.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more