• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುತ್ರನ ಮಾತನಾಡಿಸಿ ಸಂಡೂರಿನತ್ತ ಹೊರಟ ರೆಡ್ಡಿ

By Srinath
|
wife-kids-meet-janardhana-reddy-in-bellary-prison
ಬಳ್ಳಾರಿ, ಆ.17: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಿನ್ನೆ ರಾತ್ರಿ ಕಳೆದಿದ್ದ ಅಕ್ರಮ ಗಣಿವೀರ ಗಾಲಿ ಜನಾರ್ದನ ರೆಡ್ಡಿ, ಇಂದು ಬೆಳಗ್ಗೆಯೇ ಜೈಲಿಗೆ ಬಂದ ಮಗ, ಮಗಳನ್ನು ಕಂಡು ಮಾತನಾಡಿಸಿ ಸಂಡೂರಿನತ್ತ ಹೊರಟಿದ್ದಾರೆ. ಕೂಡ್ಲಗಿ ಮಾರ್ಗವಾಗಿ ಬಿಗಿ ಭದ್ರತೆಯಲ್ಲಿ ಪೊಲೀಸರು ರೆಡ್ಡಿಯನ್ನು ಸಂಡೂರು ಕೋರ್ಟಿಗೆ ಕರೆದೊಯ್ಯುತ್ತಿದ್ದಾರೆ.

ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ಅವರ ಪುತ್ರ 5ನೇ ತರಗತಿಯಲ್ಲಿ ಓದುತ್ತಿರುವ ಕಿರೀಟಿ ಮತ್ತು 10ನೆಯ ತರಗತಿಯಲ್ಲಿ ಓದುತ್ತಿರುವ ಪುತ್ರಿ ಬ್ರಹ್ಮಿಣಿ ಜೈಲಿನಲ್ಲಿ ರೆಡ್ಡಿಯನ್ನು ಇಂದು ಬೆಳಗ್ಗೆ ಭೇಟಿ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿ: ಜನಾರ್ದನ ರೆಡ್ಡಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಲಾಗಿದೆ.

2006ರಲ್ಲಿ ಗಡಿ ಒತ್ತುವರಿ ಹಾಗೂ ಕೊಲೆ ಬೆದರಿಕೆ ಆರೋಪದ ವಿಚಾರಣೆಗಾಗಿ ರೆಡ್ಡಿಯನ್ನು ಸಂಡೂರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಬಳ್ಳಾರಿ ಜೈಲಿಗೆ ಪೊಲೀಸರು ನಿನ್ನೆ ರಾತ್ರಿ 8.30ಕ್ಕೆ ಕರೆತಂದಿದ್ದರು.

ಗಮನಾರ್ಹವೆಂದರೆ ತೋರಣಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದ ದೂರುದಾರ ತುಮಟಿ ಮೈನ್ಸ್ ಕಂಪನಿಯ ಮಾಲೀಕ ಟಪಾಲ್ ನಾರಾಯಣ ರೆಡ್ಡಿ ಅವರು 2011ರ ಏಪ್ರಿಲ್ 1ರಂದು ಮೃತಪಟ್ಟಿದ್ದಾರೆ. ನಾರಾಯಣ ರೆಡ್ಡಿ ದೂರನ್ನು ಪರಿಗಣಿಸಿದ ಸಂಡೂರಿನ ನ್ಯಾಯಾಲಯ ಆರೋಪಿ ಜನಾರ್ದನ ರೆಡ್ಡಿಗೆ 10ನೇ ಬಾರಿ ಸಮನ್ಸ್ ಜಾರಿ ಮಾಡಿತ್ತು.

2006ರಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಆಂಧ್ರದ ರಾಯದುರ್ಗದ ಹಾಲಿ ಶಾಸಕ, ಜನಾರ್ದನ ರೆಡ್ಡಿಯ ಸಂಬಂಧಿ ಕಾಪು ರಾಮಚಂದ್ರಾ ರೆಡ್ಡಿ, ಓಎಂಸಿ ಗಣಿ ವ್ಯಸವ್ಥಾಪಕ ಲಕ್ಷ್ಮಿಪ್ರಸಾದ್ ಸೇರಿ ಒಟ್ಟು ನಾಲ್ಕು ಮಂದಿಯ ವಿರುದ್ಧ ಗಡಿ ಒತ್ತುವರಿ ಮತ್ತು ಪ್ರಾಣ ಬೆದರಿಕೆ ಒಡ್ಡಿದ ಆರೋಪ ಹೊರೆಸಿ ಟಿ ನಾರಾಯಣ ರೆಡ್ಡಿ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಸಂಡೂರು ಕೋರ್ಟಿಗೆ ವರದಿ ಸಲ್ಲಿಸಿದ್ದರು.

ಈ ಮಧ್ಯೆ, ರೆಡ್ಡಿ ಹೊರತುಪಡಿಸಿ ಉಳಿದ ಆರೋಪಿಗಳು ಕೋರ್ಟಿಗೆ ಹಾಜರಾಗಿ, ಹೇಳಿಕೆ ನೀಡಿ ಜಾಮೀನು ಪಡೆದುಕೊಂಡಿದ್ದರು. ಇದೇ ವೇಳೆ, ರೆಡ್ಡಿ ಮೇಲಿನ ವಿಚಾರಣೆಯನ್ನು ಕೈಬಿಡುವಂತೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ದೋಷಾರೋಪ ಪಟ್ಟಿ ಪರಿಗಣಿಸಿದ್ದ ಹೈಕೋರ್ಟ್, ಆರೋಪಗಳ ಕುರಿತು ಮೇಲ್ನೋಟಕ್ಕೆ ಕಂಡುಬರುವ ಅಂಶಗಳ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುವಂತೆ ಆದೇಶಿಸಿದ್ದರಿಂದ ಸಂಡೂರಿನ JMFC ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Janardhana Reddy Obalapuram company Illegal Mining: Janardhana Reddy's wife Lakshmi Aruna, His son Kireeti, a fifth standard student and daughter Bramhani, a tenth class student met Janardhana Reddy in Bellary prison a short while ago today (Aug 17).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more