ಅಸ್ಸಾಂ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ಸಿಲ್ಚಾರ್ ಮಹಿಳಾ ಕಾಲೇಜಿನ ಸದರಿ ವಿದ್ಯಾರ್ಥಿನಿ, ತನ್ನ ಹಾಸ್ಟೆಲ್‌ನಿಂದ ಟ್ಯೂಶನ್ನಿಗೆಂದು ಹೋಗುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ಕುಂಭೀರ್ ಗ್ರಾಮ ವಿಮಾನ ನಿಲ್ದಾಣ ರಸ್ತೆಗೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಸದರಿ ವಿದ್ಯಾರ್ಥಿನಿ ಮೂಲತಃ ಗುವಾಹಟಿಯ ಉಜಾನ್ ಬಜಾರ್ ಪ್ರದೇಶದ ನಿವಾಸಿ. ಘಟನೆಯ ಸಂಬಂಧ ಸಿಲ್ಚಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನ್ನ ತಾಯಿ ಹಾಗೂ ಸಹೋದರಿಯರ ಬೆಂಬಲದೊಂದಿಗೆ ಬಾಧಿತ ವಿದ್ಯಾರ್ಥಿನಿ ಗುವಾಹಟಿಗೆ ತೆರಳಿ ದೂರು ದಾಖಲಿಸಿದ್ದಾಳೆ.
ದಿವ್ಯೇಂದು ಜ್ಯೋತಿ ಕೊನ್ವರ್ ಎಂಬ ವಕೀಲ ಸೇರದಿಂತೆ ನಾಲ್ವರನ್ನು ಆಕೆ ಆರೋಪಿಗಳನ್ನಾಗಿ ಹೆಸರಿಸಿದ್ದಾಳೆ. ಪೊಲೀಸರು ಆರೋಪಿಗಳಿಗಾಗಿ ವ್ಯಾಪಕ ಶೋಧ ಕೈಗೊಂಡಿದ್ದಾರೆ.












Click it and Unblock the Notifications