ಅವಿವಾಹಿತ ಮೋದಿಯ ಲೇಡಿ ಫ್ಯಾನ್ ಯಾರು ಗೊತ್ತಾ

am-a-big-fan-of-gujarat-cm-modi-sunny-leone
ಮುಂಬೈ,ಆ. 16: ಗುಜರಾತ್ ಮುಖ್ಯಮಂತ್ರಿಯಾಗಿ 10 ವರ್ಷಗಳ ಆಡಳಿತ ಪೂರೈಸಿ, ಮತ್ತೊಂದು ಅವಧಿಗೆ ಸಿಎಂ ಆಗಲು ಹೊರಟಿರುವ ನರೇಂದ್ರ ಮೋದಿ ಎಂಬ ಅವಿವಾಹಿತ ಜನನಾಯಕನಿಗೆ ಪ್ರೇಮ ಪಾರಿವಾಳವೊಂದು ಅಚ್ಚರಿಯ ಸಂದೇಶವನ್ನು ಹೊತ್ತುತಂದಿದೆ.

ಭಾರತದಲ್ಲಿ ಇತ್ತೀಚೆಗೆ ಪಟ್ಟೆ ಹುಡುಗರಿಗೆ ಕಚಗುಳಿಯಿಡುತ್ತಿರುವ ಕೆನಡಾ ಮೂಲದ ನೀಲಿ ತಾರೆ ಸನ್ನಿ ಲಿಯೋನ್, ನರೇಂದ್ರ ಮೋದಿ ಬಗ್ಗೆ ಹೀಗೆ ಹೇಳಿದ್ದಾಳೆ: 'ತಾನು ಆ ಗಡ್ಡಧಾರಿ ನರೇಂದ್ರ ಮೋದಿಯನ್ನು ಎಂದೂ ಮುಖತಃ ಭೇಟಿಯಾಗಿಲ್ಲ.

ಆದರೆ Time Magazine ಮುಖಪಟದಲ್ಲಿ ಅವರ ಫೋಟೋ ಪ್ರಕಟವಾಗಿರುವುದನ್ನು ನೋಡಿ ಆತನ ಕಟ್ಟಾ ಅಭಿಮಾನಿಯಾಗಿಬಿಟ್ಟೆ. ಆತನನ್ನು ಹೇಗಾದರೂ ಮಾಡಿ ಭೇಟಿಯಾಗಬೇಕು ಎಂದು ತಹತಹಿಸುತ್ತಿರುವೆ. ಆ ಸಂಭ್ರಮದ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇನೆ' ಎಂದು ನೀಲಿ ತಾರೆ ಸನ್ನಿ ಲಿಯೋನ್ ಹೇಳಿದ್ದಾಳೆ.

ಇದರಿಂದ ಶಿಸ್ತಿನ, ಮಡಿವಂತಿಕೆಯ ಪಕ್ಷವೆನಿಸಿರುವ ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗುವ ಸಾಧ್ಯತೆಯಿದೆ.

'ಬಿಗ್ ಬಾಸ್' ಖ್ಯಾತಿಯ ಸನ್ನಿ ಲಿಯೋನ್ ಮುಂಬೈ ಬಗ್ಗೆಯೂ ವಿಶೇಷ ಅಭಿಮಾನದಿಂದ ಮಾತಾನಾಡಿದ್ದಾರೆ. 'ಮುಂಬೈಗಾಗಿ ನನ್ನ ಮನ ವಿಶೇಷವಾಗಿ ಮಿಡಿಯುತ್ತದೆ.

ನಿಮ್ಗೆ ಗೊತ್ತಾ ನನ್ನ 'ಬಿಗ್ ಬಾಸ್' ಗರಿಷ್ಠ TRP ಗಳಿಸಿದ್ದು ಇದೇ ಮುಂಬೈ ಮಾಯಾನಗರಿಯಿಂದ. ಹಾಗಾಗಿ ಮುಂಬೈವಾಲಾ ಅಂದರೆ ನನಗೆ ವಿಶೇಷ ಮಮತೆ' ಎಂದೂ ಪಡ್ಡೆಗಳ 'ಲೇಡಿ ಬಾಸ್' ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

ಆಮದು ನಟಿ ಸನ್ನಿ ಲಿಯೋನ್ ಪಡ್ಡೆಗಳನ್ನು ಬುಟ್ಟಿಗೆ ಹಾಕಿಕೊಳ್ಳುವುಷ್ಟೇ ಅಲ್ಲ; ಜನನಾಯಕರನ್ನೂ ತನ್ನತ್ತ ಸೆಳೆದುಕೊಳ್ಳುವುದು ಹೇಗೆ ಎಂಬುದು ಚೆನ್ನಾಗಿ ತಿಳಿದಿದ್ದಾಳೆ. ಹೇಗೂ ಚುನಾವಣೆ ಸಮಯ. ನೋಡಬೇಕು 'ಮೋದಿ ಸಾಬ್' ಸನ್ನಿ ಬೇಡಿಕೆಗೆ ಹೇಗೆ ಪ್ರತಿಕ್ರಿಯಿಸುತ್ತಾರೋ!?

ಅಂದಹಾಗೆ, ಕನ್ನಡ ಚಿತ್ರಗಳ ಹೆಸರಾಂತ ನಿರ್ಮಾಪಕ ಗಂಡುಗಲಿ ಕೆ ಮಂಜು ಅವರು ಬಾಲಿವುಡ್ ತಾರೆ, ನೀಲಿ ಚಿತ್ರಗಳ ಅಪ್ಸರೆ ಸನ್ನಿ ಲಿಯೋನ್ ಜೊತೆ ಡೀಲ್ ಕುದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ಸನ್ನಿ ಅವರನ್ನು ಬುಕ್ ಮಾಡಿದ್ದಾರೆ ಮಂಜು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+