• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮೂಹಿಕ ರೇಪ್ ಮಾಡಿ, ಹೆದ್ದಾರಿಯಲ್ಲಿ ಬಿಸಾಡಿದ್ರು

By Srinath
|
delhi-water-board-woman-molested-on-agra-highway
ನವದೆಹಲಿ, ಆ.11: ದೆಹಲಿಯ ಜಲಮಂಡಳಿಯಲ್ಲಿ ಉದ್ಯೋಗದಲ್ಲಿರುವ 22 ವರ್ಷದ ಯುವತಿಯನ್ನು ಗುರುವಾರ ರಾತ್ರಿ ಆಕೆಯ ಪರಿಚಯಸ್ಥನೊಬ್ಬ ತನ್ನ ಏಳು ಜನ ಸಂಗಡಿಗರ ಜತೆಗೂಡಿ ಸಾಮೂಹಿಕ ಅತ್ಯಾಚಾರವೆಸಗಿ, ದೆಹಲಿ-ಆಗ್ರಾ ಹೆದ್ದಾರಿಯಲ್ಲಿರುವ ವಲ್ಲಭಗಢ ಫ್ಲೈ ಓವರ್ ಮೇಲೆ ಆಕೆಯನ್ನು ಬಿಸಾಡಿ ಹೋಗಿರುವ ಘಟನೆ ನಡೆದಿದೆ.

ಘಟನೆಯ ನಂತರ ಧೈರ್ಯ ತಂದುಕೊಂಡ ಯುವತಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿ, ಕೃತ್ಯದಲ್ಲಿ ಬಳಸಲಾಗಿದ್ದ ಕಾರಿನ ನೋಂದಣಿ ಸಂಖ್ಯೆಯನ್ನು ನೀಡಿದ್ದಾರೆ. ಇದರಿಂದ ಪೊಲೀಸರು ಪ್ರಮುಖ ಆರೋಪಿಯನ್ನು ತಕ್ಷಣವೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಕ್ಟರ್ 55 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಾದರೂ ರಾಜಕೀಯ ಒತ್ತಡದಿಂದಾಗಿ ಪೊಲೀಸರು ಇತರೆ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪ್ರಮುಖ ಆರೋಪಿ ಇಂದ್ರಜೀತ್ 'ನನ್ನ ಮತ್ತು ನನ್ನ ಗೆಳತಿಯ ನಡುವೆ ಮನಸ್ತಾಪ ತಲೆದೋರಿದೆ. ಅದನ್ನು ಪರಿಹರಿಸಿಕೊಳ್ಳಬೇಕಾಗಿದೆ.

ಅದಕ್ಕೆ ನೀನೂ ನನ್ನ ಜತೆ ಬಾ' ಎಂದು ಬಾಧಿತ ಯುವತಿಯನ್ನು ವಲ್ಲಭಗಢಕ್ಕೆ ಜತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಯುವತಿ ಇಂದ್ರಜೀತ್ ನ ಗೆಳತಿಯೂ ಬಾಧಿತ ಯುವತಿಗೆ ಪರಿಚಯವಿದ್ದಳು. ಹಾಗಾಗಿ, ಏನೇನೂ ಅನುಮಾನ ವ್ಯಕ್ತಪಡಿಸದೆ ಬಾಧಿತ ಯುವತಿ ಇಂದ್ರಜೀತ್ ಜತೆ ಹೊರಟಿದ್ದಾಳೆ.

ಅದರಂತೆ ನಿಗದಿತ ಸ್ಥಳಕ್ಕೆ ತೆರಳಿದ ಯುವತಿ, ಇಂದ್ರಜೀತ್ ಸ್ಯಾಂಟ್ರೋ ಕಾರಿನಲ್ಲಿ ಗೆಳೆಯರೊಂದಿಗೆ ತನಗಾಗಿ ಕಾಯುತ್ತಿರುವುದನ್ನು ಗಮನಿಸಿದ್ದಾಳೆ. ಆದರೆ ಕಾರಿನ ಬಳಿ ಸಾಗುತ್ತಿದ್ದಂತೆ ಆ ದುರುಳರು ಯುವತಿಯನ್ನು ಅಪಹರಿಸಿದ್ದಾರೆ. ಇಂದ್ರಜೀತ್ ಮತ್ತು ಲುಕ್ಕು, ನವೀನ್, ಸಂತು ಸ್ಯಾಂಟ್ರೋ ಕಾರಿನಲ್ಲಿದ್ದರೆ ಉಳಿದವರು ನ್ಯಾನೊ ಮತ್ತು ಸ್ಕೋಡಾ ಕಾರಿನಲ್ಲಿ ತೆರಳಿದ್ದಾರೆ.

ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ ಇಂದ್ರಜೀತ್ ತನ್ನ ಸ್ನೇಹಿತರ ಜತೆಗೂಡಿ ಯುವತಿಯ ಮೇಲೆ ಸರಣಿ ಅತ್ಯಾಚಾರ ಮಾಡಿದ್ದಾರೆ. ಮಾರ್ಗ ಮಧ್ಯೆ ಆರೋಪಿಗಳು ಯುವತಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ್ದಾರೆ. ರಾತ್ರಿ 2 ಗಂಟೆಯ ವೇಳೆ ಯುವತಿಯನ್ನು ವಲ್ಲಭಗಢ ಫ್ಲೈ ಓವರ್ ಮೇಲೆ ಬಿಟ್ಟುಹೋಗಿದ್ದಾರೆ.

ಬಾಧಿತ ಯುವತಿಯು ತಕ್ಷಣ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿ ಕಾರಿನ ವಿವರ ನೀಡಿದ್ದಾರೆ. ಅದನ್ನು ಅನುಸರಿಸಿ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಆಗ ಪ್ರಮುಖ ಆರೋಪಿ ನ್ಯಾನೋ ಕಾರಿನ ಸಮೇತ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಆದರೆ ಉಳಿದವರು ಇನ್ನೂ ಸಿಕ್ಕಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಅತ್ಯಾಚಾರ ಸುದ್ದಿಗಳುView All

English summary
Delhi water Board woman employee molested on Agra highway. A 22-year-old woman employed with the Delhi Jal Board was allegedly gang-raped by an acquaintance (Inderjeet) and at least seven of his friends through Thursday night (Aug 9) and dumped near the Ballabhgarh flyover on the Delhi-Agra highway.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more