• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾವಿನಕೆರೆ ಬೆಟ್ಟದಲ್ಲಿ ಗಳಗಳನೆ ಅತ್ತ ದೇವೇಗೌಡ

By Prasad
|
ಹಾಸನ, ಆ. 11 : ಜಿಲ್ಲೆಯ ಮಾವಿನಕೆರೆ ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿ, ಮಾಧ್ಯಮದವರ ಸಮ್ಮುಖದಲ್ಲಿ, ನೂರಾರು ಅಭಿಮಾನಿಗಳ ಉಪಸ್ಥಿತಿಯಲ್ಲಿ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ 79 ವರ್ಷದ ಧುರೀಣ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಗಳಗಳನೆ ಅತ್ತಿದ್ದಾರೆ.

ಶ್ರಾವಣದ ಕಡೆ ಶನಿವಾರದಂದು ಮಾವಿನಕೆರೆ ಬೆಟ್ಟದ ಮೇಲಿರುವ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ದೇವೇಗೌಡರು ತಮ್ಮ ಬಾಲ್ಯದ ನೆನಪುಗಳಿಗೆ ಜಾರಿ ಗದ್ಗದಿತರಾದರು. ತಾವು ಚಿಕ್ಕವರಿದ್ದಾಗ ತಮ್ಮ ತಂದೆ ಇಲ್ಲಿ ಪ್ರತಿವರ್ಷ ಕರೆದುಕೊಂಡು ಬರುತ್ತಿದ್ದರು ಎಂದು ಭಾವುಕರಾದ ದೇವೇಗೌಡರು, ತಮ್ಮ ತಂದೆ ದೊಡ್ಡೇಗೌಡರನ್ನು ಸ್ಮರಿಸಿ ಕಣ್ಣೀರುಗರೆದರು.

ನಂತರ ಸುಧಾರಿಸಿಕೊಂಡ ಮಾಜಿ ಪ್ರಧಾನಿ, ಬರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಆಡಳಿತ ಪಕ್ಷ ಭಾರತೀಯ ಜನತಾ ಪಕ್ಷದ ಮೇಲೆ ಹರಿಹಾಯ್ದರು. ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ನೊಂದು ನುಡಿದ ಅವರು, ದೇವರ ಕೃಪೆಯಿಂದಾಗಿ ಎಲ್ಲ ಸರಿಹೋಗುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಜಿಲ್ಲೆಯ ಆಲೂಗಡ್ಡೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಳೆಯಾಗದೆ ಬೆಳೆಗಳು ನಾಶವಾಗುತ್ತಿವೆ. ರೈತರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ರಾಜಕಾರಣಿಗಳ ಕರ್ತವ್ಯ. ಈ ಕುರಿತು ವಿಧಾನಸಭೆಯಲ್ಲಿ ಆಡಳಿತ ಪಕ್ಷದೊಡನೆ ಚರ್ಚಿಸಿ ರೈತರಿಗೆ ಸೂಕ್ತ ಪರಿಹಾಸ ಒದಗಿಸಲು ಯತ್ನಿಸುವುದಾಗಿ ಅವರು ನುಡಿದರು. ನಂತರ, ಕೆಲ ದಿನಗಳಲ್ಲಿಯೇ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವುದರ ಜೊತೆಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಅವರು ನುಡಿದರು. [ಜೆಡಿಎಸ್ ಸೇರಿದ ನಾರಾಯಣ್ ಎಸ್]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ದೇವೇಗೌಡ ಸುದ್ದಿಗಳುView All

English summary
Former Primi Minister H.D. Deve Gowda becomes emotional and weeps remembering his father on Mavinakere Betta in Hassan on Shravana Saturday. He said, his father would bring him to the hill every year when he was a kid. HDD criticized BJP for not handling drought situation in Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more