ಭರ್ಜರಿ ಮಳೆ, ತುಂಬಿ ತುಳುಕುತ್ತಿರುವ ಅಣೆಕಟ್ಟುಗಳು

KRS Dam
ಬೆಂಗಳೂರು, ಆ.9: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಸುರಿದಿರುವ ಭರ್ಜರಿ ಮಳೆಗೆ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹಲವು ಜಲಾಶಯಗಳು ತುಂಬಿದ್ದು, ಉಳಿದ ಜಲಾಗಾರಗಳ ಒಳಹರಿವು ದಿನೇ ದಿನೇ ಹೆಚ್ಚುತ್ತಿದೆ.

ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿದಿರುವುದರಿಂದ ತುಂಗಾ ಭದ್ರಾ ನದಿ ಪಾತ್ರದ ಅಣೆಕಟ್ಟಿನ ನೀರಿನ ಮಟ್ಟ ಹೆಚ್ಚಿದೆ. ಭದ್ರಾ, ತುಂಗಾಭದ್ರಾ, ಲಿಂಗನಮಕ್ಕಿ, ಘಟಪ್ರಭಾ, ಮಲಪ್ರಭಾ ಹಾಗೂ ನಾರಾಯಣಪುರ ಜಲಾಶಯಗಳ ನೀರಿನ ಮಟ್ಟ ಸುಧಾರಿಸಿದೆ.

ಕಾವೇರಿ ನದಿ ಪಾತ್ರದ ಕೆಆರ್ಎಸ್, ಹಾರಂಗ, ಹೇಮಾವತಿ ಹಾಗೂ ಕಬಿನಿ ಜಲಾಶಯ ಜೊತೆಗೆ ಸೂಪಾ, ವಾರಾಹಿ ಜಲಾಶಯದ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಎಲ್ಲಾ ಅಣೆಕಟ್ಟುಗಳ ಒಳ ಹರಿವು ಹೆಚ್ಚಿದೆ.

ಮುನ್ಸೂಚನೆ: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ಭಾರಿ ಗಾಳಿ ಮಳೆಯಾಗುತ್ತಿದೆ. ಪ್ರಮುಖ ಜಲಾಶಯಗಳು ತುಂಬಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

ಮಳೆ ಪ್ರಮಾಣ: ಕೊಲ್ಲೂರು 18 ಗೇರುಸೊಪ್ಪ 17, ತೀರ್ಥಹಳ್ಳಿ, ಕಾರ್ಕಳ ತಲಾ 13 ಸೆಂ ಮೀ ಮಳೆಯಾಗಿದೆ. ಮಡಿಕೇರಿ ಕಸಬಾ 48.60, ನಾಪೋಕ್ಲು 38, ಸಂಪಾಜೆ 67.60, ಭಾಗಮಂಡಲ 77.80, ವಿರಾಜಪೇಟೆ ಕಸಬಾ 30.20, ಹುದಿಕೇರಿ 23.90, ಪೊನ್ನಂಪೇಟೆ 48, ಅಮ್ಮತಿ 30, ಬಾಳೆಲೆ 33.70, ಸೋಮವಾರಪೇಟೆ ಕಸಬಾ 10 ಮಿ.ಮೀ ಮಳೆಯಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ: [ನೀರಿನ ಮಟ್ಟ ಬದಲಾವಣೆಗೆ ಒಳಪಟ್ಟಿದೆ]

ಜಲಾಶಯ ಗರಿಷ್ಠ ಮಟ್ಟ ಇಂದಿನ ಮಟ್ಟ(ಅಡಿಗಳಲ್ಲಿ) ಒಳಹರಿವು(ಕ್ಯೂಸೆಕ್ಸ್) ಹೊರಹರಿವು ಮಳೆ ಪ್ರಮಾಣ(ಮಿ.ಮೀ)
ಲಿಂಗನಮಕ್ಕಿ 1819.00 1786.20 63716.00 0.00 117.2
ಭದ್ರಾ 186.00 150.1 41788.0 3166.00 7.8
ತುಂಗಾ 588.24 587.14 140690.00 139180.00 0.00
ಆಲಮಟ್ಟಿ 519.60 ಮೀಟರ್ 518.71 ಮೀಟರ್ 95430 30000 0.00
ಹಾರಂಗಿ 2859 2856.36 6800 8025 5.20
ಕೆಆರ್ ಎಸ್ 124.80 91.80 0.00 0.00 0.00
ಕಬಿನಿ 2284.00 2270.02 0.00 0.00 0.00
ಸುಪಾ 1859.39 1700.60 0.00 0.00 0.00
ವಾರಾಹಿ 1950.00 1900.01 0.00 0.00 0.00
ಘಟಪ್ರಭಾ 2175.00 2141.20 19018 120 0.00
ಮಲಪ್ರಭಾ 2079.00 2049.70 4695 1701 0.00
ತುಂಗ ಭದ್ರಾ 1,633 1,601.05 2,232 0.00 0.00
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+