ರೆಡ್ಡಿ ಮುಂದಿನ ವಾರ ಹೈದರಾಬಾದ್ ಜೈಲಿಗೆ ವಾಪಸ್

bailgate-acb-to-file-pt-warrant-against-janardhan-reddy
ಬೆಂಗಳೂರು, ಆ.8: ಬಳ್ಳಾರಿಯ ಗಣಿ ಧಣಿ ಜನಾರ್ದನ ರೆಡ್ಡಿ ಸದ್ಯದಲ್ಲೇ ಮತ್ತೆ ಹೈದರಾಬಾದ್ ಜೈಲಿಗೆ ವಾಪಸಾಗಲಿದ್ದಾರೆ. ಆದರೆ ಚಂಚಲಗೂಡ ಜೈಲಿಗೆ ಅಲ್ಲ ಬದಲಿಗೆ ಚೆರ್ಲಪಲ್ಲಿ ಜೈಲಿಗೆ.

ಏಕೆಂದರೆ ರೆಡ್ಡಿ ಜಾಮೀನಿಗಾಗಿ ಲಂಚ ಪ್ರಕರಣವು ಹೆಚ್ಚು ತೀವ್ರತೆ (ಮೂಲ ಪ್ರಕರಣವಾದ ಅಕ್ರಮ ಗಣಿಗಾರಿಕೆಗಿಂತ) ಪಡೆದುಕೊಳ್ಳುತ್ತಿದ್ದು, ಜನಾರ್ದನ ರೆಡ್ಡಿಯ ವಿಚಾರಣೆಗಾಗಿ prisoner transit warrant ಮೂಲಕ ರೆಡ್ಡಿಯನ್ನು ಮುಂದಿನ ವಾರದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಎಬ್ಬಿಸಿ, ಕರೆದುಕೊಂಡು ಹೋಗಲಿದ್ದಾರೆ.

'ರೆಡ್ಡಿ ಜಾಮೀನಿಗಾಗಿ ಲಂಚ ಪ್ರಕರಣದ ತನಿಖೆ ನಡೆಸುತ್ತಿರುವ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳವು (ACB) ಇದೇ ಆಗಸ್ಟ್ 15ರಂದು ಪ್ರಾಥಮಿಕ chargesheet ಸಲ್ಲಿಸಲಿದೆ. ಗಾಲಿ ಜನಾರ್ದನ ರೆಡ್ಡಿ ಪ್ರಕರಣದ ನೇರ ಫಲಾನುಭವಿ.

ರೆಡ್ಡಿ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಜಡ್ಜ್ ಪಟ್ಟಾಭಿ A1 ಆಗಿದ್ದರೆ ಸೋಮಶೇಖರ ರೆಡ್ಡಿ A2 ಆಗಿದ್ದಾರೆ. ಪ್ರಕರಣದಲ್ಲಿ ಒಟ್ಟು 11 ಮಂದಿ ಬಂಧಿಯಾಗಿದ್ದಾರೆ. ಇದೀಗ ಜನಾರ್ದನ ರೆಡ್ಡಿ 12 ನೆಯವರಾಗಿ ಬಂಧನಕ್ಕೊಳಗಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳು ಹೇಳಿರುವಂತೆ ಜನಾರ್ದನ ರೆಡ್ಡಿಯ ಆಣತಿ ಮೇರೆಗೆ ಪ್ರಕರಣದ ರೂಪುರೇಷೆ ಮತ್ತು ಕಾರ್ಯಗತವಾಗಿರುವುದು. ಹಾಗಾಗಿ ಜನಾರ್ದನ ರೆಡ್ಡಿ ವಿರುದ್ಧ prisoner transit warrantಗೆ ಅರ್ಜಿ ಸಲ್ಲಿಸಿ, ಆತನನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ' ಎಂದು ACB ಮೂಲಗಳು ಹೇಳಿವೆ.

ಗಮನಾರ್ಹವೆಂದರೆ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಕರ್ನಾಟಕದ ಸಿಬಿಐ ಪೊಲೀಸರು ರೆಡ್ಡಿಯನ್ನು ಆಂಧ್ರದ ಚಂಚಲಗೂಡ ಜೈಲಿನಿಂದ ಕರೆತಂದರಾದರೂ ಹೆಚ್ಚಿನ ವಿಚಾರಣೆಗೆ ಮುಂದಾಗಲೇ ಇಲ್ಲ.

'ಬೆಂಗಳೂರು ಪೊಲೀಸರು, ಇಲ್ಲಿನ ಜೈಲೇ ತನಗೆ ಚೆಂದ. ಹೈದರಾಬಾದ್ ಪೊಲೀಸರು, ಅಲ್ಲಿನ ಜೈಲು ಸಹವಾಸ ನನ್ನ ಶತ್ರುವಿಗೂ ಬೇಡ' ಎಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪಾದವೂರುತ್ತಿದ್ದಂತೆ ಪತ್ರಕರ್ತರೊಬ್ಬರಿಗೆ ಹೇಳಿದ್ದ ರೆಡ್ಡಿ ಸುಖಾಸುಮ್ಮನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆದಿದ್ದೇ ಬಂತು ಕರ್ನಾಟಕದ ಸಿಬಿಐ ಪ್ರಕರಣದಲ್ಲಿ ಹೆಚ್ಚೇನೂ ಪ್ರಗತಿ ಕಂಡಿಲ್ಲ.

ಹಾಗಾಗಿ, ಆಂಧ್ರ ACB ತಂಡವು ರೆಡ್ಡಿಯ ವಿರುದ್ಧ PT warrant ಕೇಳಿದರೆ ಕರ್ನಾಟಕದ ಸಿಬಿಐ ಯಾವುದೇ ಆಕ್ಷೇಪಣೆ ಸಲ್ಲಿಸುವ ಉತ್ಸಾಹ ತೋರುವುದಿಲ್ಲ ಎಂಬುದು ಆರಂಭದಿಂದಲೂ ತನಿಖೆಯ ಗತಿಯನ್ನು ನೋಡಿದವರಿಗೆ ಸ್ಪಷ್ಟವಾಗುತ್ತದೆ. ಅಲ್ಲಿಗೆ ಜನಾರ್ದನ ರೆಡ್ಡಿ ಕಳೆದ ಸೆಪ್ಟೆಂಬರ್ 5ರಂದು ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಬಂಧನವಾದ ಬಳಿಕ ಮತ್ತೆ ಜೈಲುಪಾಲಾಗುತ್ತಿರುವ ಮೂರನೆಯ ಪ್ರಕರಣ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+