ಭೂ ಗ್ರಹದ ಅತ್ಯಂತ ವೇಗದ ಮಾನವ ಬೋಲ್ಟ್

Usain Bolt defends his Olympic 100 title in London
ಲಂಡನ್, ಆ.6: 'ನಾನು ಶೇ 90 ರಷ್ಟು ಮಾತ್ರ ಫಿಟ್ ಆಗಿದ್ದೇನೆ' ಎಂದು ಇತ್ತೀಚೆಗೆ ಹೇಳುವ ಮೂಲಕ ಅಭಿಮಾನಿಗಳಿಗೆ ಚಿಂತೆ ಮೂಡಿಸಿದ್ದ ಉಸೇನ್ ಬೋಲ್ಟ್, ಸೋಮವಾರ (ಆ.6) ಸೂರ್ಯೋದಯಕ್ಕೂ ಮುನ್ನ ಮತ್ತೊಮ್ಮೆ ಪ್ರಜ್ವಲಿಸಿದ್ದಾರೆ. ಪುರುಷರ 100 ಮೀ ಅಂತಿಮ ಸ್ಪರ್ಧೆಯಲ್ಲಿ ಸಮೀಪದ ಸ್ಪರ್ಧಿ ಗೆಳೆಯ ಯೋಹಾನ್ ಬ್ಲಾಕ್ ರನ್ನು ಸೋಲಿಸಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಕ್ರೀಡಾಭಿಮಾನಿಗಳು ಕಾತುರದಿಂದ ಕಾದು ನೋಡುವ ಒಲಿಂಪಿಕ್ಸ್ ನ ನೂರು ಮೀಟರ್ ಓಟಕ್ಕೆ ಜಮೈಕಾ ಅಥ್ಲೀಟ್ ಗಳು ನಿಜಕ್ಕೂ ಕಳೆ ತಂದು ಕೊಟ್ಟಿದ್ದಾರೆ. ಉಸೇನ್ ಬೋಲ್ಟ್ ಮತ್ತು ಯೊಹಾನ ಬ್ಲ್ಯಾಕೆ ನಡುವೆ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ 10 ಸೆಂಕಡುಗಳಲ್ಲಿ ನಿರ್ಧಾರವಾಗಿದೆ.

ಜಮೈಕಾದ ಬೋಲ್ಟ್ ಒಲಿಂಪಿಕ್ಸ್ ನಲ್ಲಿ ಹೊಸ ದಾಖಲೆ (9.63ಸೆ.)ಯೊಂದಿಗೆ ಚಿನ್ನ ಗೆದ್ದುಕೊಂಡಿದ್ದಾರೆ. ಈ ಮೂಲಕ ಭೂ ಗ್ರಹದ ಅತ್ಯಂತ ವೇಗದ ಮಾನವ ಎಂಬ ಕೀರ್ತಿ ಮತ್ತೊಮ್ಮೆ ಬೋಲ್ಟ್ ಕೊರಳಿಗೇರಿದೆ.

ಜಮೈಕಾದ ಯೋಹಾನ್ ಬ್ಲ್ಯಾಕ್ ಬೆಳ್ಳಿ ಮತ್ತು ಅಮೆರಿಕಾದ ಜಸ್ಟಿನ್ ಗ್ಯಾಟ್ಲಿನ್ ಕಂಚಿನ ಪದಕ ಗೆದ್ದರು. ಬ್ಲ್ಯಾಕೆ 9.75 ಸೆ. ಗುರಿಮುಟ್ಟಿ ಬೆಳ್ಳಿ ಮತ್ತು ಗ್ಯಾಟ್ಲಿನ್ 9.79 ಸೆ. ಗುರಿಮುಟ್ಟಿ ಮೂರನೇ ಸ್ಥಾನಕ್ಕೇರಿದರು. ಏಳನೇ ಲೇನ್ ನಲ್ಲಿದ್ದ ಬೋಲ್ಟ್ ಓಟಕ್ಕೆ ಸ್ಪರ್ಧೆ ಒಡ್ಡಿದ್ದ ಜಸ್ಟಿನ್ ಗ್ಯಾಟ್ಲಿನ್ ಆರಂಭದಲ್ಲಿ ಎಲ್ಲರಿಗಿಂತ ಮುಂದಿದ್ದರು. ಆದರೆ, ಆರೂವರೆ ಅಡಿ ಅಜಾನುಬಾಹು ಬೋಲ್ಟ್ ಕೊನೆ 25 ಮೀ ನಲ್ಲಿ ಅದ್ಭುತವಾಗಿ ಓಡುತ್ತಾ ಸುಲಭವಾಗಿ ಗೆಲುವಿನ ಗುರಿ ಮುಟ್ಟಿದರು.

ಬೋಲ್ಟ್ ಸತತ ಎರಡು ಒಲಿಂಪಿಕ್ಸ್ ನ ನೂರು ಮೀ. ಓಟದಲ್ಲಿ ಚಿನ್ನದ ಗೆದ್ದ ದಾಖಲೆಯನ್ನು ಮಾಡಿದ್ದಾರೆ. ಇದಕ್ಕೆ ಮೊದಲು ಕಾರ್ಲ್ ಲೂಯಿಸ್ ((1984-1988)ಈ ದಾಖಲೆ ಮಾಡಿದ್ದರು. ಬೋಲ್ಟ್ ಒಲಿಂಪಿಕ್ಸ್ ನ ನಾಲ್ಕನೇ ಚಿನ್ನದ ಪದಕ ತಮ್ಮ ಜೋಳಿಗೆಗೆ ಹಾಕಿಕೊಂಡಿದ್ದಾರೆ. 100 ಮೀ ಗೆದ್ದಿರುವ ಬೋಲ್ಟ್ 200 ಮೀ ನಲ್ಲೂ ಚಿನ್ನ ಗೆದ್ದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಮಂಗಳವಾರ 200 ಮೀ ಓಟದ ಹೀಟ್ಸ್ ಆರಂಭವಾಗಲಿದೆ.

ವೇಗದ ಓಟಗಾರ್ತಿ: ಮಹಿಳೆಯರ 100 ಮೀ. ಓಟದಲ್ಲಿ ಜಮೈಕಾದ ಶೆಲ್ಲಿ-ಅನ್ನ್ ಫ್ರೆಸರ್-ಪ್ರಿಸ್ ಒಲಿಂಪಿಕ್ಸ್ ಚಿನ್ನದ ಪದಕ ಗಳಿಸಿದ್ದಾರೆ. ಈ ವರ್ಷ ವಿಶ್ವದ ವೇಗದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿರುವ ಫ್ರೆಸರ್-ಪ್ರಿಸ್, ಅಮೆರಿಕದ ಜೀಟೆರ್‌ರನ್ನು ಹಿಂದಿಕ್ಕಿ 10.75 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು.

ಜೀಟೆರ್ 10.78 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೆ ಸ್ಥಾನ ಪಡೆದರು. ಜಮೈಕಾದ ವೆರೊನಿಕಾ ಕ್ಯಾಂಪಲ್-ಬ್ರೌನ್ 10.81 ಸೆಕೆಂಡ್‌ನಲ್ಲಿ ಗುರಿ ತಲುಪಿ ಕಂಚಿನ ಪದಕ ಗಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+