• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯನಗರದ ಫುಟ್ಪಾತ್, ರಸ್ತೆ ಯಾರಪ್ಪನ ಮನೆ ಆಸ್ತಿ?

By Prasad
|

ಬೆಂಗಳೂರು, ಆ. 6 : ಫುಟ್ಪಾತ್ ಮೇಲೆ ಹರಡಿಕೊಂಡಿರುವ ಮರಳು, ಜಲ್ಲಿಕಲ್ಲು, ಬೃಹತ್ ಸಮುಚ್ಚಯ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು... ಸ್ವಲ್ಪ ಮುಂದೆ ಬಂದರೆ ಖಾಸಗಿ ಟಿವಿ ಚಾನಲ್ ವಾಹನಗಳು... ಎರಡು ಹೆಜ್ಜೆ ಮುಂದೆ ಸಾಗಿದರೆ ಕಾರ್ ಡ್ರೈವಿಂಗ್ ವಾಹನಗಳು... ಇನ್ನೆರಡು ಹೆಜ್ಜೆ ಇಟ್ಟರೆ ಮತ್ತೊಂದು ಕಾರು, ಅದರ ಪಕ್ಕದಲ್ಲಿ ವಿರಾಜಮಾನವಾಗಿ ನಿಂತಿರುವ ಮತ್ತೊಂದು ಕಾರು!

Whose property is this footpath?

ಈ ಇಂಟ್ರೋದಲ್ಲಿ ಏನು ವಿಶೇಷವಿದೆ ಎಂದು ಭಾವಿಸಿದರೆ ಈ ಫುಟ್ಪಾತ್ ಮೇಲೆ ನೀವು ಒಂದು ಬಾರಿ ನಡೆದು ಸಾಗಬೇಕು. ಫುಟ್ಪಾತ್ ಎಲ್ಲಿದೆ? ರಸ್ತೆ ಸಂಚಾರಿಗಳು ಎಲ್ಲಿಂದ ಸಾಗಬೇಕು? ಫುಟ್ಪಾತ್ ಮೇಲಾ, ರಸ್ತೆಯ ಮೇಲಾ? ಪ್ರತಿಷ್ಠಿತ ಜಯನಗರದ 3ನೇ ಬ್ಲಾಕ್ ನಲ್ಲಿರುವ, ಎಲಿಫೆಂಟ್ ರಾಕ್ ರಸ್ತೆಯಲ್ಲಿ, ಆರ್ ಆರ್ ಗೋಲ್ಡ್ ಪ್ಯಾಲೇಸ್ ನಂತರದ ಫುಟ್ಪಾತ್ ಇದೆಯಲ್ಲ? ಎಲ್ಲಿದೆ ಫುಟ್ಪಾತ್? ಇದಿಷ್ಟು ಸಾಲದೆಂಬಂತೆ ಇಡೀ ಫುಟ್ಪಾತನ್ನು ಆಕ್ರಮಿಸಿಕೊಂಡು ನಿಂತಿರುವ ಟ್ರಾನ್ಸ್‌ಫಾರ್ಮರ್!

ಆಗಸ್ಟ್ 6ರ ಸೋಮವಾರ ಮಟಮಟ ಮಧ್ಯಾಹ್ನದಲ್ಲಿ KA 05 MF 2109 ನಂಬರಿನ ಸ್ವಿಫ್ಟ್ ಡಿಸೈರ್ ಕಾರು (ಯಾವ ಮಹಾನುಭಾವನಿಗೆ ಸೇರಿದ್ದೋ?) ಸುಮಾರು ಹೊತ್ತು ಇಂಡಿಕೇಟರ್ ಬ್ಲಿಂಕ್ ಮಾಡಿಕೊಂಡು ಫುಟ್ಪಾತ್ ಪಕ್ಕದ ರಸ್ತೆಯನ್ನು ಆಕ್ರಮಿಸಿಕೊಂಡಿತ್ತು. ಅದರ ಪಕ್ಕದಲ್ಲಿ AP 9 AF 1415 ರಿಜಿಸ್ಟ್ರೇಷನ್ ನಂಬರ್ ಇರುವ ಮತ್ತೊಂದು ಟೊಯೋಟ ಕ್ವಾಲಿಸ್ ಇಡೀ ಫುಟ್ಪಾತನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತ್ತು. ರಸ್ತೆ ಸಂಚಾರಿಗಳು ಅವೆರಡನ್ನು ದಾಟಬೇಕಿದ್ದರೆ ರಸ್ತೆಯ ಮೇಲೆಯೇ ಸಾಗಬೇಕಿತ್ತು.

ಇದು ಕೇವಲ ಒಂದು ದಿನದ ದೃಶ್ಯವಲ್ಲ. ಕಳೆದ ಒಂದು ವರ್ಷದಿಂದ ಪ್ರತಿದಿನ ಕಾಣುತ್ತಿರುವ ದೃಶ್ಯಾವಳಿ. ಯಾರಪ್ಪನ ಮನೆ ಆಸ್ತಿ ಈ ಫುಟ್ಪಾತ್ ಮತ್ತು ರಸ್ತೆ? ಆಶ್ಚರ್ಯದ ಸಂಗತಿಯೆಂದರೆ ಅದೇ ವೃತ್ತದಲ್ಲಿ ನಿಂತಿರುವ ಸಂಚಾರಿ ಪೊಲೀಸರಿಗೆ ಯಾರೂ ದೂರ ನೀಡಿದಂತೆ ಕಂಡುಬಂದಿಲ್ಲ (ಸೋಮವಾರ ಮಧ್ಯಾಹ್ನ ಒಬ್ಬ ಪೊಲೀಸ್ ಕೂಡ ಅಲ್ಲಿರಲಿಲ್ಲ)!

ಹೇಗಿದ್ರೂ ವಾಹನಗಳನ್ನು ಫುಟ್ಪಾತ್ ಮೇಲೆ ಓಡಿಸುವುದು, ರಸ್ತೆಯಲ್ಲಿಯೇ ದಿಲ್ ದಾರ್ ಆಗಿ ನಡೆದುಕೊಂಡು ಹೋಗುವುದು ನಮ್ಮ ಜನರಿಗೆ ರೂಢಿಯಾಗಿದೆ. ಯಾವಾಗಲೂ ಕಾಲಿಗೆ ಚಕ್ರ ಕಟ್ಟಿಕೊಟ್ಟಂತೆ ಓಡಾಡುವ ಜನರಿಗೆ ದೂರು ನೀಡಲು ಸಮಯವೂ ಇರುವುದಿಲ್ಲ, ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತಾರೆಂಬ ಭರವಸೆಯೂ ಇರುವುದಿಲ್ಲ. ಕನಿಷ್ಠಪಕ್ಷ ಓಡಾಡುವವರಿಗೆ ತೊಂದರೆಯಾಗುತ್ತದೆ ಎಂಬ ಪರಿಜ್ಞಾನವಾದರೂ ಈ ವಾಹನ ಮಾಲಿಕರಿಗೆ ಇರಬೇಡವೆ? ಈ ಕ್ಷೇತ್ರದ ಶಾಸಕರಾಗಿರುವ ಬಿ.ಎನ್. ವಿಜಯಕುಮಾರ್ ಅವರು ತುಸು ಇತ್ತಕಡೆ ಗಮನ ಹರಿಸುತ್ತಾರಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Whose property is this footpath? Just come to Jayanagar 3rd block, between RR Gold Palace and 3rd block junction. You will never get a change to walk on footpath. The walkers will be forced to walk on the road.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more