ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಪ್ತಚರ ಅಧಿಕಾರಿಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ

By Srinath
|
Google Oneindia Kannada News

ನವದೆಹಲಿ, ಆ.6: ಅತ್ಯುತ್ತಮ ದೈಹಿಕ, ಮಾನಸಿಕ ಶಕ್ತಿಯಿಂದ ತುಂಬಿರುವ ಯಾವುದೇ ಯುವಕನನ್ನು ಏನಪ್ಪಾ ಅವಕಾಶ ಸಿಕ್ಕಿದರೆ ನೀನು ಗುಪ್ತಚರ ಇಲಾಖೆಗೆ ಅಂದರೆ Intelligence Bureau (IB)ದಲ್ಲಿ ಅಧಿಕಾರಿಯಾಗಲು ಇಷ್ಟಪಡ್ತೀಯಾ ಅಂತ ಕೇಳಿದರೆ ಆತ ಹಿಂದೆಮುಂದೆ ಯೋಚಿಸದೆ ಲೈಫಲ್ಲಿ ಅಂತಹ ಒಂದೇ ಒಂದು ಅವಕಾಶ ಕೊಟ್ಟು ನೋಡಿ ಎಂದು ಕಣ್ಣಲ್ಲಿ ಕಣ್ಣಿಟ್ಟು ಹೇಳುವುದು ಖಂಡಿತ. ಏಕೆಂದರೆ ಗುಪ್ತಚರ ಇಲಾಖೆಯ ( खुफिया ब्यूरो) ಗಮ್ಮತ್ತೇ ಅಂತಹುದು.

ಈಗಲೂ ಅಂತಹ ಅವಕಾಶವೊಂದು ನಿಮಗಾಗಿ ಕಾದಿದೆ. ತಡವೇಕೆ? ಅರ್ಜಿ ಗುಜರಾಯಿಸಿ. Intelligence Bureauಗೆ ಬೇಕಾಗಿದ್ದಾರೆ ಬರೋಬ್ಬರಿ 750 ಅಧಿಕಾರಿಗಳು. ಭಾರತ ಸರಕಾರದ ಗೃಹ ಸಚಿವಾಲಯದಡಿ ಬರುವ ಈ ಇಲಾಖೆಯು 750 ಮಂದಿ Associate Central Intelligence Officer (ACIO)ಗಳನ್ನು ನೇಮಕ ಮಾಡಿಕೊಳ್ಳಲಿದೆ.

ib-asst-central-intelligence-officer-recruitment-2012

ಶೀಘ್ರದಲ್ಲೇ employment news ಪತ್ರಿಕೆಯಲ್ಲಿ ಈ ನೇಮಕಾತಿ ಸಂಬಂಧ ಪ್ರಕಟಣೆ ಹೊರಬೀಳಲಿದೆ. ತದನಂತರ 30 ದಿನಗಳಲ್ಲಿ ಅಂತರ್ಜಾಲದ ಮೂಲಕ ಮಾತ್ರವೇ ಅರ್ಹರು ಅರ್ಜಿ ಸಲ್ಲಿಸಬಹುದು. ಈ ಕುರಿತಾದ ಅಧಿಸೂಚನೆಯು www.mha.nic ವೆಬ್ ಸೈಟಿನಲ್ಲಿ ಲಭ್ಯವಿದೆ. ಮಹಿಳೆಯರೂ ಅರ್ಜಿ ಸಲ್ಲಿಸಬಹುದು.

ಇನ್ನು ಅರ್ಹತೆ ವಿಷಯಕ್ಕೆ ಬಂದರೆ ಅಭ್ಯರ್ಥಿಗಳು ಪದವಿ ಪಡೆದಿರಬೇಕು. ಜತೆಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯಕ. ವಯಸ್ಸು 27 ವರ್ಷದ ಗಡಿ ದಾಟಿರಬಾರದು. ನೀವೂ ಅರ್ಜಿ ಸಲ್ಲಿಸುವಿರಾದರೆ ದಟ್ಸ್ ಕನ್ನಡ 'ನಿಮಗೆ ಶುಭವಾಗಲಿ' ಎಂದು ಹಾರೈಸುತ್ತದೆ.

ಏನಿದು Intelligence Bureau ?: ಭಾರತೀಯ ಪೊಲೀಸ್ ಸೇವೆಗಾಗಿ ಗೃಹ ಸಚಿವಾಲಯದಡಿ 1887ರಲ್ಲಿ ಸ್ಥಾಪನೆಯಾಗಿದೆ. ವಿಶ್ವದಲ್ಲೇ ತುಸು ಹಳೆಯ ಬೇಹು ಸಂಸ್ಥೆ. ನವದೆಹಲಿ ಇಲಾಖೆಯ ಕೇಂದ್ರ ಕಚೇರಿ. ಕೆಲಸ ಇಡೀ ಭಾರತದಾದ್ಯಂತ. 1947ರಲ್ಲಿ Central Intelligence Bureau ಆಗಿ ಪುನರ್ ಅಸ್ತಿತ್ವಕ್ಕೆ. ಅದಕ್ಕೂ ಮುನ್ನ ಬ್ರಿಟೀಷ್ ಆಡಳಿತದ ವಿರುದ್ಧ ದಂಗೆಯೇಳುವವರ ಮೇಲೆ ನಿಗಾಯಿಡಲು Indian Political Intelligence (IPI) ಹೆಸರಿನಲ್ಲಿ 1921ರಲ್ಲಿ ಅಸ್ತಿತ್ವಕ್ಕೆ ಬಂದಿತು.

English summary
New Delhi IB Assistant Central Intelligence officer recruitment 2012. The Union Ministry of Home Affairs has come up with 750 vacancies for the post of Associate Central Intelligence Officers (ACIOs). The aspirants can apply for the post online only at: www.mha.nic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X