ಕಾಟನ್ ಪೇಟೆ: ಹೋಟೆಲ್ ದಂಪತಿ ಹತ್ಯೆ, ಮಗುಗೆ ಗಾಯ

ಮಂಗಳವಾರ ರಾತ್ರಿಯೇ ಈ ಘಟನೆ ನಡೆದಿದ್ದರೂ ಬುಧವಾರ ಬೆಳಗ್ಗೆಯಷ್ಟೇ ಈ ಭಯಾನಕ ಹತ್ಯೆಗಳು ಬೆಳಕಿಗೆ ಬಂದಿದೆ. ಆರು ವರ್ಷದ ಮಗು ಪ್ರಿಯಾ ತನ್ನ ಅಪ್ಪ-ಆಮ್ಮನ ಕೊಲೆಗೆ ಸಾಕ್ಷಿಯಾಗಿದ್ದು, ಹಂತಕರಿಗೆ ಇರುಸುಮುರುಸು ತಂದಿದೆ. ಆದ್ದರಿಂದ ಆ ಕಂದನನ್ನೂ ಸಾಯಿಸಲು ಯತ್ನಿಸಿದ್ದಾರೆ.
ಬದುಕುಳಿದಿರುವ ಆ ಹೆಣ್ಣು ಮಗುವಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂಲತಃ ಆಗ್ರಾದವರಾದ ಪಂಕಜ್ ಮತ್ತು ಬಬಿತಾ ಶರ್ಮಾ ದಂಪತಿ ಕಷ್ಟಪಟ್ಟು ಹೋಟೆಲ್ ನಡೆಸುತ್ತಿದ್ದರು. ಹೋಟೆಲನ್ನೇ ಮನೆಯಾಗಿಸಿಕೊಂಡಿದ್ದರು. ಅಲ್ಲೇ ಈ ಹತ್ಯೆಗಳು ನಡೆದಿರುವುದು. ತನಿಖೆಗಾಗಿ ಪೊಲೀಸರು ಮನೆ ಮುಂದೆ ಬೀಡುಬಿಟ್ಟಿದ್ದಾರೆ.
ಏಳು ದಿನಗಳ ಹಿಂದೆ ಕೆಲಸಕ್ಕೆ ಸೇರಿದ ಅಡುಗೆಯವನೇ (ಕಾರ್ತಿಕ್) ಈ ಭಯಾನಕ ಹತ್ಯೆಗಳನ್ನು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಸ್ಸಾಂ ಮೂಲದವನಾದ ಅಡುಗೆಯವ ಘಟನೆಯ ನಂತರ ನಾಪತ್ತೆಯಾಗಿದ್ದಾನೆ.
ಹತ್ಯೆಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಪಂಕಜ್ ಮತ್ತು ಬಬಿತಾ ದಂಪತಿ ಅವರನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಲಾಗಿದೆ. ಹತ್ಯೆಗೆ ಬಳಸಿದ್ದ ಆಯುಧ ಘಟನಾ ಸ್ಥಳದಲ್ಲೇ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications