• search

ಒಲಿಂಪಿಕ್ಸ್: ಹೊಸ ಇತಿಹಾಸ ನಿರ್ಮಿಸಿದ ಶಟ್ಲರ್ ಕಶ್ಯಪ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  ಲಂಡನ್, ಆ.1: ಒಲಿಂಪಿಕ್ಸ್ 2012 ಕ್ರೀಡಾಕೂಟದಲ್ಲಿ ಪಂದ್ಯದಿಂದ ಪಂದ್ಯಕ್ಕೆ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಬಾಡ್ಮಿಂಟನ್ ತಾರೆಪಾರುಪಲ್ಲಿ ಕಶ್ಯಪ್ ಬುಧವಾರ(ಆ.1) ಹೊಸ ಇತಿಹಾಸ ನಿರ್ಮಿಸಿದ್ದಾರೆ.

  ಬುಧವಾರ ನಡೆದ ಸಿಂಗಲ್ಸ್ ಪ್ರೀಕ್ವಾಟರ್ ಫೈನಲ್ ಪಂದ್ಯದಲ್ಲಿ 2-1 ಸೆಟ್ ಗಳ ಅಂತರದಿಂದ ಶ್ರೀಲಂಕಾ ಆಟಗಾರ ಕರುಣರತ್ನೆ ಅವರನ್ನು ಸೋಲಿಸಿ ಕ್ವಾಟರ್ ಫೈನಲ್ ತಲುಪಿದ್ದಾರೆ. ಒಲಿಂಪಿಕ್ಸ್ ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ ಮೊದಲ ಆಟಗಾರ ಎಂಬ ಕೀರ್ತಿ ಗಳಿಸಿದ್ದಾರೆ. [ಜು. 31:ಕ್ರೀಡಾಪಟುಗಳ ಸಾಧನೆ]

  ಶ್ರೀಲಂಕಾದ ದೈತ್ಯ ಸಂಹಾರಿ ವಿಶ್ವದ 48ನೇ ಶ್ರೇಯಾಂಕಿತ ಒಲಿಂಪಿಕ್ಸ್ ಪೆರೇಡ್ ಧ್ವಜಧಾರಿ ನಿಲುಕ ಕರುಣರತ್ನೆ ಅವರನ್ನು ಕಶ್ಯಪ್ 21-14,15-21,21-9 ಅಂತರದಿಂದ ಸೋಲಿಸಿದರು. 25 ವರ್ಷದ ಕಶ್ಯಪ್ ಅವರು ಮೊದಲ ಸೆಟ್ 20 ನಿಮಿಷದಲ್ಲಿ ಗೆದ್ದರೆ, ಎರಡನೇ ಸೆಟ್ 19 ನಿಮಿಷದಲ್ಲಿ ಸೋತರು. ಆದರೆ, ಮೂರನೇ ಸೆಟ್ ಅನ್ನು 21 ನಿಮಿಷದಲ್ಲಿ ತನ್ನದಾಗಿಸಿಕೊಂಡು ಜಯ ಗಳಿಸಿದರು.

  ಪಿ ಕಶ್ಯಪ್ ತಮ್ಮ ಮುಂದಿನ ಪಂದ್ಯವನ್ನು ಅಗ್ರ ಶ್ರೇಯಾಂಕಿತ ಮಲೇಶಿಯಾದ ಲೀ ಚೊಂಗ್ ವೈ ಅಥವಾ ಇಂಡೋನೇಶಿಯಾದ ಸಿಮಾನ್ ಸ್ಯಾಂಟೊಸೊ ವಿರುದ್ಧ ಆಡಲಿದ್ದಾರೆ. ಲೀ ಹಾಗೂ ಸ್ಯಾಂಟೊಸೊ ಪಂದ್ಯ ಬುಧವಾರ ರಾತ್ರಿ ನಡೆಯಲಿದೆ.

  ಗೆಲುವಿಗೆ ಕೋಚ್ ಕಾರಣ: ಪಂದ್ಯ ನಂತರ ಮಾತನಾಡಿದ ಪಿ ಕಶ್ಯಪ್ ಅವರು, ನನ್ನ ಸಾಧನೆಗೆ ಕೋಚ್ ಪಿ ಗೋಪಿಚಂದ್ ಕಾರಣ ಎಂದಿದ್ದಾರೆ. ಮಾಜಿ ಬಾಡ್ಮಿಂಟನ್ ತಾರೆ ಹಾಲಿ ಕೋಚ್ ಪುಲ್ಲೆಲ್ಲ ಗೋಪಿಚಂದ್ ಅವರು ಸಿಡ್ನಿ ಒಲಿಂಪಿಕ್ಸ್ 2000ರಲ್ಲಿ ಪ್ರೀ ಕ್ವಾಟರ್ ಫೈನಲ್ ತಲುಪಿದ ಸಾಧನೆ ಮೆರೆದಿದ್ದರು. ಇದಕ್ಕೂ ಮುನ್ನ 16 ರ ಘಟ್ಟವನ್ನು ದೀಪಾಂಕರ್ ಭಟ್ಟಾಚಾರ್ಯ ತಲುಪಿದ್ದರು.

  ಈಗ ಗುರುವಿನ ಸಾಧನೆಯನ್ನು ಮೀರಿ ಕಶ್ಯಪ ಬೆಳೆದಿದ್ದು, ಒಂದು ಹಂತ ಮುಂದಕ್ಕೆ ಕಾಲಿಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಪದಕದ ನಿರೀಕ್ಷೆ ಹುಟ್ಟಿಸಿರುವ ಸೈನಾ ನೆಹ್ವಾಲ್ ಪ್ರೀ ಕ್ವಾಟರ್ ಫೈನಲ್ ತಲುಪಿದ್ದಾರೆ. ಆದರೆ, ಉಳಿದಂತೆ ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಡಿ ಜು ಸೋತು ನಿರ್ಗಮಿಸಿರುವುದರಿಂದ ಕಶ್ಯಪ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  21ನೇ ಶ್ರೇಯಾಂಕದ ಕಶ್ಯಪ್ ಅವರು ಮಂಗಳವಾರ ಡಿ ಗುಂಪಿನ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ವಿಶ್ವದ 11ನೇ ಶ್ರೇಯಾಂಕದ ಆಟಗಾರ ವಿಯೆಟ್ನಾಂನ ಟೀನ್ ಮಿನ್ ನುಯೆನ್ ಅವರನ್ನು ಕೇವಲ 35 ನಿಮಿಷದಲ್ಲಿ (21-14, 21-12) ಸೋಲಿಸಿದ್ದರು. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ ಬೆಲ್ಜಿಯಂನ ಟಾನ್ ಯುಹಾನ್ ರನ್ನು (21-9, 21-14) ಪರಾಭವಗೊಳಿಸಿದ್ದರು.

  ಕಶ್ಯಪ್ ಗೆಲುವಿಗೆ ಅತೀವ ಹರ್ಷ ವ್ಯಕ್ತಪಡಿಸಿರುವ ಕ್ರೀಡಾ ಸಚಿವ ಅಜಯ್ ಮಾಕೆನ್ (ajaymaken): "KASHYAP on his day is a World Champ! Congrats KASHYAP! Congrats Coach GOPI! We are proud of both of your wards Saina & KASHYAP!." ಎಂದು ಟ್ವೀಟ್ ಮಾಡಿದ್ದಾರೆ,

  ಹೈದರಾಬಾದಿನ ಗೋಪಿಚಂದ್ ಬಾಡ್ಮಿಂಟನ್ ಅಕಾಡೆಮಿಯ ವಿದ್ಯಾರ್ಥಿಯಾಗಿರುವ ಕಶ್ಯಪ್ ಅವರಿಗೆ 2000ರಲ್ಲಿ ಆಸ್ತಮಾ ಕಾಯಿಲೆ ಬಾಧಿಸಿತ್ತು. ಕಶ್ಯಪ್ ವೃತ್ತಿ ಜೀವನ ಅಂತ್ಯವಾಯಿತು ಎಂದು ತಿಳಿಯಲಾಗಿತ್ತು. ಆದರೆ, ಧೃತಿಗೆಡದೆ ಸೂಕ್ತ ಚಿಕಿತ್ಸೆ ಪಡೆದು ಉತ್ತಮ ಬಾಡ್ಮಿಂಟನ್ ಪಟುವಾಗಿ ಬೆಳೆದಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Shuttler P Kashyap created history at the London Olympics 2012 by becoming the first Indian to reach the men's singles quarter-finals on Wednesday(Aug.1).

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more