YouTubeನಲ್ಲಿ ನ್ಯಾಯ ಬೇಡಿದ ಅತ್ಯಾಚಾರ ಬಾಧಿತೆ

ತನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ಬಿಂದಾಸ್ ಆಗಿ ತನ್ನ ಕಣ್ಣೆದುರೇ ಓಡಾಡಿಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಆರೋಪಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಬಯಸಿ, ಅತ್ಯಾಚಾರ ಬಾಧಿತ ಮಹಿಳೆ ಅನಿವಾರ್ಯವಾಗಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.
ವಿಡಿಯೋದಲ್ಲಿ ಇಡೀ ಅತ್ಯಾಚಾರದ ದೃಶ್ಯಾವಳಿಗಳು ಇದ್ದರೆ ಬಾಧಿತ ಮಹಿಳೆ ಮಧ್ಯೆ ಮಧ್ಯೆ ಆರೋಪಿಗಳ ಹೆಸರುಗಳನ್ನು ಹೇಳುತ್ತಾ, ತಮ್ಮ ಧ್ವನಿಯಲ್ಲೇ ತಮ್ಮ ನರಕಯಾತನೆಯ ವಿವರಣೆ ನೀಡಿದ್ದಾರೆ.
ಕಾಮಾ ಪಟ್ಟಣದ ಸೀಮಾ (ಹೆಸರು ಬದಲಿಸಲಾಗಿದೆ) ವಿಡಿಯೋದಲ್ಲಿ ಹೇಳುವಂತೆ ಆಕೆಯ ಕುಟುಂಬಕ್ಕೂ ಮಿಯೋ ಸಮುದಾಯದ ಕುಟುಂಬಕ್ಕೂ ಭೂ ವಿವಾದವಿತ್ತು. ನ್ಯಾಯಯುತವಾಗಿ ಅದು ನಮಗೆ ಸೇರಿಬೇಕಾಗಿದೆ. ಕೋರ್ಟ್ ನಿರ್ದೇಶನದ ಹೊರತಾಗಿಯೂ ಎದುರಾಳಿ ಕುಟುಂಬದವರು ಆ ಭೂಮಿಯನ್ನು ನಮಗೆ ಬಿಟ್ಟುಕೊಡಲಿಲ್ಲ. ಬದಲಿಗೆ ಧಮ್ಕಿ ಹಾಕಿದರು.
2010ರ ಅಕ್ಟೋಬರ್ 20ರಂದು ಸುಮಾರು 10 ಜನರ ಗುಂಪೊಂದು ನನ್ನನ್ನು ಅಪಹರಿಸಿತು. ನಿರ್ಜನ ಪ್ರದೇಶಕ್ಕೆ ತಲುಪಿದ ತಂಡವು ಸತತವಾಗಿ ನನ್ನ ಮೇಲೆ ಸಾಮಃಉಕಿ ಅತ್ಯಾಚಾರವೆಸಗಿತು ಎಂದು ವಿಡಿಯೋದಲ್ಲಿ ಗ್ರಾಮಸ್ಥೆ ಹೇಳಿದ್ದಾರೆ. ತನ್ನ ಯಾತನೆಯನ್ನು ಸಾದ್ಯಂತವಾಗಿ ವಿವರಿಸಿರುವ ಆ ಮಹಿಳೆ, ಕೊನೆಗೆ ಆ ದುರುಳರಿಂದ ತಾನು ಹೇಗೆ ತಪ್ಪಿಸಿಕೊಂಡು ಬಂದೆ ಎಂಬುದನ್ನು ವಿವರಿಸಿದ್ದಾರೆ.
ಮುಂದೆ ಪೊಲೀಸ್ ವರಿಷ್ಠಾಧಿಕರಿಗೆ ದೂರು ದಾಖಲಿಸಿದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದಕ್ಕೆ ರಾಜಕೀಯ ಒತ್ತಡವಿದೆ ಎಂದು ತಿಳಿಸಿರುವ ಸದರಿ ಮಹಿಳೆ ತಕ್ಷಣ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು YouTube ವಿಡಿಯೋ ಮೂಲಕ ಆಗ್ರಹಿಸಿದ್ದಾರೆ.












Click it and Unblock the Notifications