ಮದುವೆಯಾಗ್ತೀನಿ ಅಂತ ರೇಪ್ ಮಾಡಿದವನಿಗೆ ಜೈಲು

molestation-on-marriage-pretext-delhi-man-jailed
ನವದೆಹಲಿ, ಆ.1: ಮದುವೆಯಾಗ್ತೀನಿ ಅಂತ ಪುಸಲಾಯಿಸಿ ಯುವತಿಯ ಮೇಲೆ ರೇಪ್ ಮಾಡಿಬಿಟ್ಟ ಯವಕನಿಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ. ರಾಜಧಾನಿಯ ಹೆಚ್ಚುವರಿ ಸೆಷನ್ಸ್ ಜಡ್ಜ್ ಟಿಆರ್ ನಾವಲ್ ಅವರು ಭುಪೇಶ್ ಕುಮಾರ್ ಎಂಬ 26 ವರ್ಷ ಭೂಪನಿಗೆ ಈ ಶಿಕ್ಷೆ ವಿಧಿಸಿದ್ದಾರೆ.

'ನಿನ್ನನ್ನು ಮದ್ವೆಯಾಗ್ತೀನಿ. ಅಮ್ಮನಿಗೆ ಪರಿಚಯಿಸಿಕೊಡುತ್ತೇನೆ. ಬಾ ನಮ್ ಮನೆಗೆ ಹೋಗೋಣ' ಎಂದು ಯುವತಿಯನ್ನು ತನ್ನ ಚಿಕ್ಕಪ್ಪನ ಮನೆಗೆ ಕರೆದೊಯ್ದ ಭೂಪ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ.

'ಮೇಲಿನ ಕಾರಣಗಳು, ಇಬ್ಬರ ನಡುವಣ ಚರ್ಚೆಗಳು ಮತ್ತು ಸಂದರ್ಭ ಸಾಕ್ಷ್ಯಗಳನ್ನು ಪರಿಗಣಿಸಿದಾಗ ಆಪಾದಿತ ಭೂಪ ದುಷ್ಕೃತ್ಯವೆಸಗಿರುವುದರ ಬಗ್ಗೆ ನ್ಯಾಯಾಲಯಕ್ಕೆ ಎಳ್ಳಷ್ಟೂ ಸಂಶಯವಿಲ್ಲ. ಆದ್ದರಿಂದ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಹಾಗಾಗಿ ಆತ 7 ವರ್ಷಗಳ ಜೈಲುವಾಸ ಅನುಭವಿಸಲಿ' ಎಂದು ಜಡ್ಜ್ ನಾವಲ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

'ಮದುವೆಯಾಗುವ ನೆಪವೊಡ್ಡಿ ಆರೋಪಿಯು ಯುವತಿಯನ್ನು ತನ್ನ ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದಾನೆ. ಆದರೆ ಆಗ ಮನೆಯಲ್ಲಿ ಯಾರೂ ಇರಲಿಲ್ಲ. ಪರಿಸ್ಥಿತಿಯ ಲಾಭ ಪಡೆದ ಆರೋಪಿಯು ಯುವತಿಯ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂಬುದು ದೃಢಪಟ್ಟಿದೆ' ಎಂದು ಕೋರ್ಟ್ ಹೇಳಿದೆ. ಆರೋಪಿಗೆ ಜೈಲುಶಿಕ್ಷೆಯ ಜತೆಗೆ 10,000 ರುಪಾಯಿ ದಂಡವನ್ನೂ ವಿಧಿಸಿದೆ.

HSBC credit card ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಭುಪೇಶ್ ಕುಮಾರ ಬಾಧಿತ ಯುವತಿಯ ಸ್ನೇಹ ಬೆಳೆಸಿ, ಆಕೆಯನ್ನು ಮದುವೆಯಾಗುವುದಾಗಿ ಹೇಳಿ, ಅತ್ಯಾಚಾರವೆಸಗಿದ್ದಾನೆ. ಕುತೂಹಲದ ಸಂಗತಿಯೆಂದರೆ 2008ರಿಂದ ಯುವಕ ಈ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಈ ಮಧ್ಯೆ ಬೇರೊಬ್ಬ ಯುವತಿಯ ಜತೆ ಮದುವೆಯೂ ಆಗಿದ್ದಾನೆ.

'ಅತ್ಯಾಚಾರವೆಸಗುತ್ತಿದ್ದಂತೆ ಭುಪೇಶ್ ಕುಮಾರ, ಬೇರೊಬ್ಬ ಯುವತಿಯ ಜತೆ ನನಗೆ engagement ಆಗಿದೆ. ಆದ್ದರಿಂದ ನನ್ನನ್ನು ಮರೆತುಬಿಡು' ಎಂದು ಹೇಳಿದ್ದ. ಸುದೀರ್ಘ ವೊಚಾರಣೆಯ ನಂತರ ಆರೋಪಿಯು ಅತ್ಯಾಚಾರವೆಸಗಿರುವುದು ಕೋರ್ಟಿಗೆ ಮನವರಿಕೆಯಾಗಿದ್ದು, ಅತ್ಯಾಚಾರಿ ಭುಪೇಶ್ ಕುಮಾರನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಜಡ್ಜ್ ನಾವಲ್ ಅವರು ಪೊಲೀಸರಿಗೆ ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+