ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಂಟಿ ಹೊಡಿರಿ, ಇನ್ ಕಂ ಜಾಸ್ತಿ ಮಾಡ್ರಿ: ರೇಣುಕಾ

By Mahesh
|
Google Oneindia Kannada News

Minister Renukacharya
ಬೆಂಗಳೂರು, ಜು.31: ವಿಧಾನ ಪರಿಷತ್ ನಲ್ಲಿ ಮಂಗಳವಾರ(ಜು.31) ಮತ್ತೊಮ್ಮೆ ಕುಡುಕರ ಬಗ್ಗೆ ಭಾರಿ ಚರ್ಚೆಯಾಯಿತು. ಅಸೆಂಬ್ಲಿಯಲ್ಲಿರೋ ಸಚಿವರುಗಳೇ ಮದ್ಯಪಾನ ಮಾಡೋದಿಲ್ಲ.

ಇನ್ನು ನಮ್ಮ ಇಲಾಖೆಗೆ ಆದಾಯ ಎಲ್ಲಿಂದ ಬರಬೇಕು. ಹೀಗಾಗಿ ಎಲ್ಲರೂ ಮದ್ಯಪಾನ ಮಾಡತೊಡಗಿದರೆ ರಾಜ್ಯ ಬೊಕ್ಕಸದ ಆದಾಯವೂ ಹೆಚ್ಚುತ್ತದೆ. ಆದರೆ, ಆದಾಯ ಹೆಚ್ಚಳಕ್ಕಾಗಿ ಸಾರಾಯಿ ಮಾರಾಟಕ್ಕೆ ಇಳಿಯುವುದಿಲ್ಲ ಎಂದು ವಿಧಾನಪರಿಷತ್ ನಲ್ಲಿ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಹೇಳಿದರು.

ಬಡವರಿಗೂ ಶುದ್ಧ ಮದ್ಯ ಸಿಗಬೇಕು ಅವರ ಆರೋಗ್ಯ ಚೆನ್ನಾಗಿರಬೇಕು ಎಂದು ರಾಜ್ಯ ಸರ್ಕಾರ ಸಾರಾಯಿ ಮಾರಾಟ ನಿಷೇಧಿಸಿದೆ. ಇದನ್ನು ಮರಳಿ ಜಾರಿಗೆ ತರುವ ಪ್ರಶ್ನೆಯೇ ಇಲ್ಲ.

ಕಡಿಮೆ ಬೆಲೆಯಲ್ಲಿ ಮದ್ಯ (36 ರು 80 ಪೈಸೆಗೆ 180 ಮಿ.ಲೀಟರ್) ಪೂರೈಕೆ ಮಾಡಲಾಗುತ್ತಿದೆ. ಪಕ್ಕದ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ ಇದೆ ಎಂದು ರೇಣುಕಾಚಾರ್ಯ ಬೆನ್ನು ತಟ್ಟಿಕೊಂಡರು.

ಕಳೆದ 5 ವರ್ಷಗಳಿಂದ ಅಬಕಾರಿ ಇಲಾಖೆ ಗಳಿಸಿರುವ ಆದಾಯ ಇಂತಿದೆ;
* 2007-08ನೇ ಸಾಲಿನಲ್ಲಿ 4811.93 ಕೋಟಿ ರು
* 2008-09ರಲ್ಲಿ 5792.41 ಕೋಟಿ ರು
* 2009-10ರಲ್ಲಿ 70001.9 ಕೋಟಿ ರು
* 2010-11ರಲ್ಲಿ 8345.39 ಕೋಟಿ ರು
* 2011-12ರಲ್ಲಿ 9827.89 ಕೋಟಿ ರು ಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ ನಾಣಯ್ಯ, 36 ರು ಗೆ ನೀವು ಕೊಡುವ ಮದ್ಯ ಯಾವಾತ್ತಾದರೂ ಕಿಕ್ ಕೊಡುತ್ತಾ? ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂದು ಹೇಗೆ ಹೇಳುತ್ತೀರಾ? ಎಂದು ಪ್ರಶ್ನಿಸಿದರು. ನೀವು ಮದ್ಯ ಸೇವನೆ ಮಾಡುತ್ತೀರಾ, ನಾವು ಮದ್ಯ ಮಾಡುತ್ತೀವಿ. ಹೀಗಾಗಿ ಇಬ್ಬರೂ ಫಲಾನುಭವಿಗಳು ಎಂದರು.

ಇದಕ್ಕೆ ಉತ್ತರಿಸಿದ ರೇಣುಕಾಚಾರ್ಯ, ಇಲ್ಲಪ್ಪ ನಾನು ಕುಡುಕನಲ್ಲ. 37 ರು ಮದ್ಯ ಇನ್ನು ಕುಡಿದಿಲ್ಲ. ನೀವು ಮಾತ್ರ ಫಲಾನುಭವಿ. ನಿಮ್ಮಂಥವರಿಂದಲೇ ನಮ್ಮ ಇಲಾಖೆ ಆದಾಯ ಹೆಚ್ಚಾಗಿದೆ. ನಿಮಗೆ ನಮ್ಮ ಧನ್ಯವಾದ ಎಂದರು.

English summary
'Please drink more and more liquor increase our department income' Excise Minister Renukacharya has requested like this during assembly session today(Jul.31). Renukacharya later released excise department income earned yearwise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X