ಕೇಂದ್ರ ಸಂಪುಟ ವಿಸ್ತರಣೆ: ರಾಹುಲ್ ಗಾಂಧಿಗೆ ಮಣೆ?

ಕೇಂದ್ರ ಸಂಪುಟದಲ್ಲಿ ಈ ಬಾರಿ ಭಾರಿ ಬದಲಾವಣೆಗಳಾಗುವುದು ನಿಶ್ಚಿತ. ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಹಿನ್ನೆಲೆಯಲ್ಲಿ ಪಿ ಚಿದಂಬರಂ ಅವರು ತಮ್ಮ ಹಿಂದಿನ ಖಾತೆಯಾದ ಹಣಕಾಸಿಗೆ ಮರಳುವ ಸಾಧ್ಯತೆ ದಟ್ಟವಾಗಿದೆ.
ಚಿದಂಬರಂ ಹಣಕಾಸು ಕಾತೆಗೆ ವಾಪಸಾದರೆ ಗೃಹ ಖಾತೆ ಯಾರ ಹೆಗಲಿಗೆ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ ಅನೇಕ ಸಂಸದರು/ಸಚಿವರು/ ಶಾಸಕರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಹಿಂದೆಬಿದ್ದಿದ್ದು ಯುವನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಮುಖ ಹೊಣೆಗಾರಿಕೆ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಅದರಲ್ಲೂ ಕಂದ್ರ ಗೃಹ ಖಾತೆಯನ್ನು ರಾಹುಲ್ ಗೆ ವಹಿಸುವಂತೆ ಭಾರಿ ಒತ್ತಡ ಹೇರಿದ್ದಾರೆ.
ಇದೇ ವೇಳೆ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಗೃಹ ಖಾತೆ ಜವಾಬ್ದಾರಿ ಹೊರುವ ಲಕ್ಷಣಗಳಿವೆ. ಜತೆಗೆ, ಇಂಧನ ಖಾತೆ ಸಚಿವ ಸುಶೀಲ್ ಕುಮಾರ್ ಶೀಂಧೆ ಅವರ ಹೆಸರೂ ಗೃಹ ಖಾತೆಗಾಗಿ ಕೇಳಿಬಂದಿದೆ. ಕಳೆದ ಒಂದು ದಶಕದಲ್ಲಿ ಉತ್ತರ ಭಾರತದಲ್ಲಿ ಅತ್ಯಂಕ ಕೆಟ್ಟ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಕಂಡುಬಂದ ಹಿನ್ನೆಲೆಯಲ್ಲಿ ಶಿಂಧೆ ಅವರನ್ನು ಪರಿಹಾರೋಪಾಯವಾಗಿ ಗೃಹ ಖಾತೆಗೆ ಉನ್ನತೀಕರಿಸುವ ಸಂಭವವೂ ಇದೆ.
ಇದು ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತವಾಗಿಲ್ಲ. ಯುಪಿಎ ಮಿತ್ರ ಪಕ್ಷಗಳೂ ಸಂಪುಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ಬೇಡುತ್ತಿವೆ. ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಸ್ಥಾನ ತುಂಬುವುದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅತ್ಯಗತ್ಯವಾಗಿದೆ.












Click it and Unblock the Notifications