ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ ನೆಟ್ ಕಟ್; ಬಾಲಕಿ ನೇಣಿಗೆ ಶರಣು

By Srinath
|
Google Oneindia Kannada News

internet-cut-coimbatore-girl-hangs-self-dad-censure
ಕೊಯಮತ್ತೂರು, ಜುಲೈ 31: 'ಯಾವಾಗ ನೋಡಿದರೂ ಇಂಟರ್ ನೆಟ್ ಮುಂದೇನೆ ಕೂತಿರುತ್ತೀಯಾ? ಎಂದು ಅಪ್ಪ ಬೈದಿದ್ದೇ ಬಂತು, 14 ವರ್ಷದ ಬಾಲಕಿ ಸೀದಾ ನೇಣಿಗೆ ಗೋಣೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

'ಅದೇನೋ ಅಂತರ್ಜಾಲ, ಸಾಮಾಜಿಕ ತಾಣಗಳು ಅಂತೆಲ್ಲ ಯಾವಾಗಲೂ ಅದರಲ್ಲೇ ಮುಳುಗಿಹೋಗಿರುತೀಯಲ್ಲಾ ಮಗಳೆ, ಅದೆಲ್ಲ ಬೇಡಮ್ಮಾ' ಎಂದು 10ನೆ ತರಗತಿಯಲ್ಲಿ ಓದುತ್ತಿದ್ದ ಮಗಳನ್ನು ತನ್ನ ಪಕ್ಕದಲ್ಲಿ ಕೂಡಿಸಿಕೊಂಡು ಅಪ್ಪ ಬುದ್ಧಿವಾದ ಹೇಳಿದ್ದರು. ಆದರೆ ಅಪ್ಪ ಹೇಳಿದ ಬುದ್ಧಿಯ ಮಾತುಗಳಿಗೆ ಮಗಳು ಬೇರೆಯದೇ ನಿರ್ಧಾರ ತೆಗೆದುಕೊಂಡಳು.

ಮೃತಳನ್ನು ಇಲ್ಲಿನ ಕಾರಮಡೈನಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಶೋಲೈ ಎಂದು ಗುರುತಿಸಲಾಗಿದೆ. ಶೋಲೈ ವೆಲ್ಲಕಿನಾರುದಲ್ಲಿರುವ ವಿಸಿಎಸ್ ನಗರದ ನಿವಾಸಿ. ಶೋಲೈಳ ಅಪ್ಪ ಅರುಣಾಚಲಂ ದುಬೈನಲ್ಲಿ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೋಲೈಗೆ ವಿಸಿಎಸ್ ನಗರದಲ್ಲಿರುವ ತನ್ನ ಮನೆಯಲ್ಲಿ ಕಂಪ್ಯೂಟರಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸಲಾಗಿತ್ತು. ಅವಳಂತೂ ಸಾಮಾಜಿಕ ತಾಣಗಳಲ್ಲಿ ತುಂಬಾನೇ ಸಕ್ರಿಯಳಾಗಿದ್ದಳು. ಸ್ನೇಹಿತರೊಂದಿಗೆ ನಿರಂತರವಾಗಿ ಚಾಟಿಂಗ್ ನಡೆಸುತ್ತಿದ್ದಳು. ಜತೆಗೆ ಇಂಟರ್ ನೆಟ್ಟಿನಲ್ಲಿ ಗೇಮ್ಸ್ ಆಡುವ ಚಟವನ್ನೂ ಹತ್ತಿಸಿಕೊಂಡಿದ್ದಳು ಎಂದು ಶೋಲೈ ಸ್ನೇಹಿತರು ಹೇಳಿದ್ದಾರೆ.

ಮಗಳು ಹೀಗೆ ಇಂಟರ್ ನೆಟ್ಟಿಗೆ ಅಂಟಿಕೊಂಡಿರುವುದನ್ನು ನೋಡಿ ಗಾಬರಿಗೆ ಬಿದ್ದ ಶೋಲೈ ತಾಯಿ ಅಲಗು ಅದನ್ನು ದುಬೈನಲ್ಲಿರುವ ತಮ್ಮ ಪತಿಯ ಗಮನಕ್ಕೆ ತಂದಿದ್ದಾರೆ. ಅಪ್ಪನಿಗೂ ಮಗಳ ಬಗ್ಗೆ ಚಿಂತೆ ಶುರುವಾಗಿದೆ. ವಿಡಿಯೋ ಚಾಟ್ ಮೂಲಕ ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. 'ಹೀಗೇ ನೀನು ಇಂಟರ್ ನೆಟ್ ಮುಂದೆ ಕೂತಿದ್ದರೆ connection ತೆಗೆಸಿಬಿಡುತ್ತೇನೆ. ಮೊದಲು ಓದಿನ ಕಡೆ ಗಮನಕೊಡು' ಎಂದಿದ್ದಾರೆ.

ನಂತರ ಶೋಲೈ ತಾಯಿ ಅಲಗು password ಬದಲಾಯಿಸಿ, ಶೋಲೈಗೆ ನೆಟ್ ಸಿಗದಂತೆ ಮಾಡಿದ್ದಾರೆ. ಅವಳಿಗೋ ನೀರುನಿಂದ ಹೊರಹಾಕಿದ ಮೀನಿನಂತಾಗಿದೆ. ಹತಾಶಗೊಂಡ ಶೋಲೈ ಮೊನ್ನೆ ಭಾನುವಾರ time fix ಮಾಡಿಕೊಂಡು ಸೀಲಿಂಗ್ ಫ್ಯಾನಿಗೆ ದುಪ್ಪಟ್ಟಾ ತಗಲು ಹಾಕಿ, ನೇಣು ಹಾಕಿಕೊಂಡಿದ್ದಾಳೆ.

ಸಂಜೆ ಅಮ್ಮ ಮನೆಗೆ ಬಂದಾಗ ಒಳಗಿನಿಂದ ಬೀಗ ಹಾಕಿರುವುದನ್ನು ಗಾಬರಿಗೊಂಡಿದ್ದಾರೆ. ಕಿಟಕಿಯಿಂದ ನೋಡಿದಾಗ ಮಗಳು ಫ್ಯಾನಿಗೆ ನೇತಾಡುತ್ತಿರುವುದು ಕಂಡುಬಂದಿದೆ. ಮುಂದೆ!? ಇದನ್ನು ಓದಿದ ಅಪ್ಪ-ಅಮ್ಮ ಮತ್ತು ಅವರು ಕಷ್ಟಪಟ್ಟು ಸಾಕುತ್ತಿರುವ ಮಕ್ಕಳಿಗೆ ಹುಷಾರಾಗಿರಿ ಎಂದು ಹೇಳುವ ಸರದಿ.

English summary
A 14-year-old girl Sholai, studying in Class 10 in Karamadai in Coimbatore, hanged herself after her father Arunachalam scolded her (from Dubai) for spending a lot of time browsing the Internet and using social networking sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X