• search

ಚುನಾವಣೆ ಕಾಲೇ ನರೇಂದ್ರ ಮೋದಿ ಕ್ರೀಡಾ ಸ್ಫೂರ್ತಿ

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    poll-vault-gujarat-cm-modi-to-distribute-sports-kits
    ಅಹಮದಾಬಾದ್, ಜುಲೈ 25: ಗುಜರಾತ್‌ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು (ಡಿಸೆಂಬರ್) ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಬತ್ತಳಿಕೆಯಲ್ಲಿನ ಅಷ್ಟೂ ಅಸ್ತ್ರಗಳನ್ನು ಯಶಸ್ವಿಯಾಗಿ ಪ್ರಯೋಗಿಸಲು ಈಗಲೇ ಆರಂಭಿಸಿದ್ದಾರೆ.

    Poll-vault: ಯುವ ಶಕ್ತಿಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿ, ಗ್ರಾಮಾಂತರ ಭಾಗದಲ್ಲಿ ಯುವ ಆಟಗಾರರಿಗೆ ಕ್ರೀಡಾ ಸಾಮಾಗ್ರಿಗಳನ್ನೊಳಗೊಂಡ ಕಿಟ್ಟುಗಳನ್ನು ನೀಡಲು ಮುಂದಾಗಿದ್ದಾರೆ.

    ಈಗಿನಿಂದಲೇ ಆರಂಭಿಸಿ ಡಿಸೆಂಬರ್ (ಚುನಾವಣೆ) ವೇಳೆಗೆ ಎಲ್ಲ ಗ್ರಾಮಗಳನ್ನೂ ತಲುಪುವುದು ಈ ಯೋಜನೆಯ ಗುರಿಯಾಗಿದೆ ಎಂದು ಉನ್ನತ ಸರಕಾರಿ ಮೂಲಗಳು ಹೇಳಿವೆ. ದೆಹಲಿ ಗದ್ದುಗೆ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿಗೆ ಈ Poll-vault ಎಷ್ಟು ಊರುಗೋಲಾಗಲಿದೆ ಎಂಬುದು ಮತದಾರರೇ ನಿರ್ಧರಿಸಬೇಕಾಗಿದೆ.

    ಈ sports kitನಲ್ಲಿ ಏನೆಲ್ಲ ಇರುತ್ತದೆ ಅಂದರೆ ಕ್ರಿಕೆಟ್, ವಾಲಿಬಾಲ್, ಚೆಸ್ ಬೋರ್ಡ್, ಕೇರಂ ಮುಂತಾದ ಜನಪ್ರಿಯ ಆಟದ ಸಾಮಗ್ರಿಗಳು ಇರುತ್ತವೆ. ರಾಜ್ಯದಲ್ಲಿ 18,000 ಗ್ರಾಮಗಳಿದ್ದು ಅಷ್ಟೂ ಗ್ರಾಮಗಳಿಗೆ ಈ ಕಿಟ್ಟುಗಳು ತಲುಪಲಿವೆ.

    ಗ್ರಾಮಾಂತರ ಮಟ್ಟದಲ್ಲಿ ಕ್ರೀಡಾ ಪರಿಸರವನ್ನು ಉತ್ತೇಜಿಸುವುದು ಮತ್ತು ಮುಖ್ಯವಾಗಿ ಗ್ರಾಮೀಣ ಯುವಕರನ್ನು ಪರಿಣಾಮಕಾರಿಯಾಗಿ ತಲುಪುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೆಸರು ಹೇಳಲಿಚ್ಚಿಸಿದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಕಿಟ್ಟ ನಲ್ಲಿ ತಲಾ 5,000 ರುಪಾಯಿ ಕ್ರೀಡಾ ಸಾಮಗ್ರಿಯಿರುತ್ತದೆ. ಈ ಯೋಜನೆಗಾಗಿ ಸರಕಾರ 10 ಕೋಟಿ ರುಪಾಯಿ ತೆಗೆದಿರಿಸಿದೆ ಎಂದು ತಿಳಿದುಬಂದಿದೆ.

    ಈಗಾಗಲೇ ಗುಜರಾತ್ ರಾಜ್ಯವನ್ನು ಸಮಗ್ರ ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿರುವ ಆಡಳಿತಾರೂಢ ಬಿಜೆಪಿ ಸರಕಾರ 'ಖೇಲ್ ಮಹಾಕುಂಭ' ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಈಗ ಚುನಾವಣೇ ಕಾಲೇ ವಿಶೇಷ ಮುತುವರ್ಜಿಯಿಂದ ಗ್ರಾಮೀಣ ಯುವಜನತೆಯನ್ನು ತಲುಪಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಶೀಘ್ರವೆ ಕ್ರೀಡಾ ಸಾಮಾಗ್ರಿ ತಯಾರಿಕಾ ಕಂಪನಿಗಳಿಂದ ಟೆಂಡರ್ ಕರೆದು ಯೋಜನೆಯನ್ನು ಕಾರ್ಯಗತಗೊಳಿಸಲಿದೆ ಎನ್ನಲಾಗಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Poll-bound Gujarat Chief Minister Narendra Modi with an eye on forth coming elections is set distribute sports kit, comprising cricket and volleyball kits in each of the 18,000 villages in the state. The government will spend over Rs10 crore on the project, officials added.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more