• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರು ಕೊಡದ ನೀರೆಯನ್ನು ಪರಲೋಕಕ್ಕೆ ಅಟ್ಟಿದ

By Mahesh
|

ಸಕಲೇಶಪುರ, ಜು.25: 'ಕೊಲ್ಲೊದ್ದಕ್ಕೂ ಒಂದು ರೀಸನ್ ಬೇಡ್ವಾ ಸಾ.. ನೀರು ತಂದು ಕೊಡಲಿಲ್ಲ ಕೊಲ್ಲೊದಾ.. ಎಂದು ಗೊಣಗುತ್ತಾ ಸಕಲೇಶಪುರ ಟೌನ್ ಪೊಲೀಸ್ ಠಾಣೆ ಪೇದೆ ಠಾಣೆ ಪ್ರವೇಶಿಸುತ್ತಾ ಹೇಳಿದ ಮಾತುಗಳಿದು. ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನು ದೊಣ್ಣೆ ಮತ್ತು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಕೊಂದ ಪತಿ ಸೋಮಶೇಖರ ಈಗ ಪೊಲೀಸರ ವಶದಲ್ಲಿದ್ದಾನೆ.

ಗಂಡ ಹೆಂಡತಿ ನಡುವೆ ಹುಸಿಕೋಪದಲ್ಲಿ ಮುಗಿದು ಹೋಗಬೇಕಿದ್ದ ಪ್ರಸಂಗ ಕೊಲೆಯಲ್ಲಿ ಅಂತ್ಯಗೊಂಡಿದೆ. ಅತ್ತ ಅಪ್ಪ ಜೈಲಿಗೆ ಹೋಗಿದ್ದಾನೆ. ಅಮ್ಮ ಬಾರದ ಲೋಕಕ್ಕೆ ತೆರಳಿದ್ದಾಳೆ ಅನಾಥವಾಗಿರುವ ದಂಪರ್ತಿಗಳ ಕಂದ ಈಗ ಅಜ್ಜನ ಆಶ್ರಯದಲ್ಲಿದೆ.

ಸಕಲೇಶಪುರ ತಾಲೂಕಿನ ಚಿಕ್ಕ ಸತ್ತಿಗಾಲ್ ಗ್ರಾಮದ ನಿವಾಸಿಯಾಗಿದ್ದ ಮೃತ ದುರ್ದೈವಿ ಸೌಮ್ಯಳಿಗೆ ಇನ್ನೂ 18 ರ ಪ್ರಾಯ. ಪತಿ ಸೋಮಶೇಖರ ಕೂಡಾ ಹಲವು ವರ್ಷಗಳಿಂದ ಚೆನ್ನಾಗಿ ಪರಿಚಯನಾಗಿದ್ದ, ಮದುವೆ ಬಂಧನಕ್ಕೆ ಸಿಲುಕುವ ಮುನ್ನ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಆದರೆ, ಇಬ್ಬರ ಪ್ರೇಮಕ್ಕೆ ಜಾತಿ ಅಡ್ಡ ಬಂದಿತ್ತು. ಪೂಜಾರಿ ಪಂಗಡಕ್ಕೆ ಸೇರಿದ ಸೌಮ್ಯಳನ್ನು ಪ್ರೀತಿಸಿದ್ದ ದಲಿತರ ಹುಡುಗ ಸೋಮಶೇಖರ್, ಆಕೆಯ ಪ್ರೀತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಸೋಮಶೇಖರ್ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ. ಸುಲ್ಲಕ್ಕಿ ಗ್ರಾಮದ ಸೌಮ್ಯ, ಚಿಕ್ಕ ಸತಿಗಾಲ್ ಗ್ರಾಮದ ಸೋಮಶೇಖರ್ ಪತ್ನಿಯಾದಳು.

ಇಬ್ಬರ ಪ್ರೀತಿಯ ದ್ಯೋತಕವಾಗಿ 7 ತಿಂಗಳ ಮಗು ಕೂಡಾ ನೆನ್ನೆವರೆಗೂ ಆಡಿ ನಲಿಯುತ್ತಿತ್ತು. ಆದರೆ, ಮಂಗಳವಾರ ರಾತ್ರಿ ಮನೆಗೆ ಬಂದ ಸೋಮಶೇಖರ ಅಂಗಡಿಯಿಂದ ತಂದಿದ್ದ ಮಾಂಸದ ಪೊಟ್ಟಣ ಬಿಚ್ಚಿ ತಿನ್ನಲು ಆರಂಭಿಸಿದ. ಬಾಯಿಗೆ ಯಾವ ಪ್ರಾಣಿಯ ಯಾವ ಭಾಗ ತಗುಲಿಕೊಂಡಿತೋ ಗೊತ್ತಿಲ್ಲ. ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ಸೌಮ್ಯಳಿಂದ ಉತ್ತರ ಬರದಿದ್ದಾಗ, ಬೇಗ ನೀರು ತಗೊಂಡು ಬಾರೆ... ಎಂದು ಅರಚಿದ್ದಾನೆ.

ನೀರು ತರಲು ತಡವಾಗುತ್ತಿದ್ದಂತೆ ಸೋಮಶೇಖರನ ಪಿತ್ತ ನೆತ್ತಿಗೇರಿದೆ. ಊಟದ ತಟ್ಟೆಯನ್ನು ಪಕ್ಕಕ್ಕೆ ತಳ್ಳಿ ಹಸಿದ ಹೆಬ್ಬುಲಿಯಂತೆ ಸೌಮ್ಯಳ ಮೇಲೆ ಬಿದ್ದಿದ್ದಾನೆ. ಕೋಪಗೊಂಡು ಮತಿಗೆಟ್ಟಂತೆ ಆಡುತ್ತಿದ್ದವನ ಕೈಗೆ ಕೋಲು ಸಿಕ್ಕಿದೆ. ಪತ್ನಿಯನ್ನು ಕೋಲಿನಿಂದ ಮನಸೋಇಚ್ಛೆ ಚೆಚ್ಚಿದ್ದಾನೆ. ಸೌಮ್ಯಳ ಕೂಗಾಟ ನಿಂತು ಕುಸಿದು ಬಿದ್ದಾಗ, ಹತ್ತಿರಕ್ಕೆ ಬಂದು ನೋಡಿದ್ದಾನೆ. ಸೌಮ್ಯಳ ಪ್ರಾಣಪಕ್ಷಿ ಹಾರಿ ಹೋಗಿರುವುದು ಖಾತ್ರಿಯಾಗುತ್ತಿದ್ದಂತೆ ಸೋಮಶೇಖರ ಕಾಲಿಗೆ ಬುದ್ಧಿ ಹೇಳಿದ್ದಾನೆ.

ಸುಲ್ಲಕ್ಕಿ ಗ್ರಾಮದ ಸೌಮ್ಯಳ ತಂದೆ ಸುಂದರ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿ ತಮ್ಮ ಮಗಳ ಸಾವಿನ ಗೋಳು ತೋಡಿಕೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಪ್ರಭಾಕರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿದ್ದ ಆರೋಪಿ ಸೋಮಶೇಖರನನ್ನು ಬುಧವಾರ ಬೆಳಗ್ಗೆ ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಠಾಣೆ ದೂರಿನ ಪ್ರತಿ ಇಲ್ಲಿದೆ: ಕುಲ್ಲಕ ಕಾರಣ ಪತಿಯಿಂದಲೇ ಪತ್ನಿ ಹತ್ಯೆ: ಈಗ್ಗೆ 1 1/2 ವರ್ಷಗಳ ಹಿಂದೆ ಸಕಲೇಶಪುರ ತಾಲ್ಲೂಕು, ಸುಳ್ಳಕ್ಕಿ ಗ್ರಾಮದ ಸುಂದರ ರವರ ಮಗಳು ಸೌಮ್ಯಳನ್ನು ಸಕಲೇಶಪುರ ತಾಲ್ಲೂಕು, ಚಿಕ್ಕಸತ್ತಿಗಾಲದ ಲೇಟ್ ಮಂಜಯ್ಯ ರವರ ಮಗ ಸೋಮಶೇಖರ ರವರಿಗೆ ಮದುವೆ ಮಾಡಿಕೊಟ್ಟಿದ್ದು ದಿನಾಂಕ: 23/24-07-12 ರಂದು ರಾತ್ರಿ 10-00 ಘಂಟೆ ಸಮಯದಲ್ಲಿ ಸೌಮ್ಯಳ ಪತಿ ಸೋಮಶೇಖರ್ ಇಬ್ಬರು ಅಡಿಗೆ ವಿಚಾರದಲ್ಲಿ ಜಗಳ ತೆಗೆದು ಸೌಮ್ಯಳ ಬಗ್ಗೆ ಶೀಲ ಶಂಕಿಸಿ ಕುಡ್ಲು ಮತ್ತು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ ಸೌಮ್ಯ ಕೋಂ ಸೋಮಶೇಖರ್, 18 ವರ್ಷ, ಚಿಕ್ಕಸತ್ತಿಗಾಲ, ಸಕಲೇಶಪುರ ತಾಲ್ಲೂಕು ರವರನ್ನು ಕೊಲೆ ಮಾಡಿ ಮನೆಯ ಮುಂದಿನ ಬೇಲಿಯ ಪಕ್ಕ ಬಿಸಾಕಿರುತ್ತಾನೆ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತಳ ತಂದೆ ಸುಂದರ ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಈ ಸಂಬಂಧ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ಪ್ರಭಾಕರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ತನಿಖೆಯಲ್ಲಿರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A young housewife killed by her husband for not giving him drinking water. the deceased woman Sowmya was found murdered at Chikkasattigala village in Sakleshpur taluk on Tuesday(Jul.24). Sakleshpur town police arrested husband Somashekar and registered a case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more