ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳ ಏರಿಕೆ, ವಿಪ್ರೋ ಉದ್ಯೋಗಿಗಳು ಖುಷ್?

By Mahesh
|
Google Oneindia Kannada News

VP, HR Pratik Kumar
ಬೆಂಗಳೂರು, ಜು.25: ವಿಪ್ರೋ ಸಂಸ್ಥೆ ತನ್ನ 138,552 ಉದ್ಯೋಗಿಗಳಿಗೆ ಸಿಹಿ ಸುದ್ದಿ ಪ್ರಕಟಿಸಿದೆ. ಮೊದಲ ತ್ರೈಮಾಸಿಕ ವರದಿ ಮಂಗಳವಾರ(ಜು.24) ಪ್ರಕಟಿಸಿದ ಬೆನ್ನಲ್ಲೇ ತನ್ನ ಉದ್ಯೋಗಿಗಳಿಗೆ ಶೇ 8ರಷ್ಟು ಸಂಬಳ ಏರಿಕೆ ಘೋಷಿಸಿದೆ.

ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ಆನ್ ಸೈಟ್ ಉದ್ಯೋಗಿಗಳಿಗೆ ಶೇ 3 ರಷ್ಟು ಹಾಗೂ ಆಫ್ ಶೋರ್ ಉದ್ಯೋಗಿಗಳಿಗೆ ಶೇ 8 ರಷ್ಟು ಸಂಬಳ ಏರಿಕೆಯಾಗಲಿದೆ. ಮೊದಲ ಹಂತದ ಪ್ರಮೋಷನ್ ಹಾಗೂ ಇಂಕ್ರೀಮೆಂಟ್ ಗಳನ್ನು ನೀಡಲು ವಿಪ್ರೋ ಅರಂಭಿಸಿದೆ.

ಮೊದಲ ತ್ರೈಮಾಸಿಕದಲ್ಲಿ 1,508 ಕೋಟಿ ರು ನಂತೆ ಶೇ 18 ರಷ್ಟು ಲಾಭ ಗಳಿಸಿದೆ. ಒಟ್ಟಾರೆ ಆದಾಯದಲ್ಲೂ ಶೇ 24 ರಷ್ಟು ಏರಿಕೆಯಾಗಿದ್ದು 10,653 ಕೋಟಿ ರು ಆದಾಯ ಗಳಿಸಿದೆ. ಸಂಸ್ಥೆಯ ಒಟ್ಟು ಆದಾಯಕ್ಕೆ ಐಟಿ ಸೇವಾ ವಿಭಾಗವು ಶೇ 78 ರಷ್ಟು ಕೊಡುಗೆ ನೀಡುತ್ತಿದೆ. ಐಟಿ ವಿಭಾಗದ ಆದಾಯ 8,31,400 ಕೋಟಿ ರು ದಾಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 30 ರಷ್ಟು ಪ್ರಗತಿ ಕಂಡು ಬಂದಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ Attrittion ಕೂಡಾ ಕುಸಿತ ಕಂಡಿದೆ. ಕಳೆದ ವರ್ಷ ಶೇ 22.6ರಷ್ಟಿತ್ತು ಈಗ 15.6 ರಷ್ಟಿದೆ. ಇದು ಸಹಜ ಕೂಡಾ ಅಪ್ರೈಸಲ್ ಋತು ಕೊನೆಗೊಳ್ಳುತ್ತಿದ್ದಂತೆ ಸರಿಯಾದ ಕಾರ್ಯಕ್ಷಮತೆ ತೋರದ ಜೊಳ್ಳುಗಳನ್ನು ಹೊರ ಹಾಕುವುದು ನಡೆದುಕೊಂಡು ಬಂದಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಪ್ರತೀಕ್ ಕುಮಾರ್ ಹೇಳಿದ್ದಾರೆ.

ವಿಪ್ರೋ ಸಂಸ್ಥೆ ಕಾರ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಪ್ರತಿ ಔದ್ಯಮಿಕ ವಿಭಾಗಗಳಿಗೆ ಪ್ರತ್ಯೇಕ HR ತಂಡವನ್ನು ನೀಡಲಾಗಿದ್ದು, ಉದ್ಯೋಗಿಗಳ ನೇಮಕಾತಿ ಹಾಗೂ ಬಳಕೆ ದರ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಕ್ಯಾಂಪಸ್ ಮೂಲಕ ಆಯ್ಕೆಯಾದ ಹೊಸಬರ ನೇಮಕಾತಿ ಶೀಘ್ರವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಕುಮಾರ್ ಹೇಳಿದ್ದಾರೆ.

ಮುಂಬರುವ ಯುಎಸ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ವಿಪ್ರೋ ಸಂಸ್ಥೆ, ಚುನಾವಣೆ ನಂತರ ಹೊರ ಗುತ್ತಿಗೆ ಕ್ಷೇತ್ರದಲ್ಲಿ ಉಂಟಾಗುವ ಬದಲಾವಣೆ ಬಗ್ಗೆ ನಿಗಾವಹಿಸಲಾಗುವುದು ಉದ್ಯೋಗ ಕೊರತೆ ಅನುಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಕುಮಾರ್ ಹೇಳಿದರು.

ಸ್ಥಳೀಯ ಉದ್ಯೋಗಿಗಳಿಗೆ ಆದ್ಯತೆ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಆನ್ ಸೈಟ್ ಉದ್ಯೋಗಿಗಳಲ್ಲಿ ಶೇ 38 ರಷ್ಟು ಸ್ಥಳೀಯರಿದ್ದಾರೆ. H1B ಉದ್ಯೋಗಿಗಳಲ್ಲಿ ರುವ ಗೊಂದಲ ನಿವಾರಿಸಿ, ಕಾರ್ಯಕ್ಷಮತೆ ಹೆಚ್ಚಿಸಲಾಗುವುದು ಎಂದು ಕುಮಾರ್ ತಿಳಿಸಿದರು.

English summary
With good result in the past quater Wipro is set to raise pay hike to all of its employees. The has been 8% for off shore employees and 3% for those who are working onsite. Wipro has 138,552 employees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X