• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಲ್ಗೆಟ್ ಸಂಸ್ಥೆ ಆದಾಯ, ಲಾಭ ಫಳ ಫಳ

By Mahesh
|

ಬೆಂಗಳೂರು, ಜು.24: ಕಾಲ್ಗೇಟ್ ಪಾಮೋಲಿವ್ (ಭಾರತ) ಲಿ ಸಂಸ್ಥೆ ತನ್ನ ಮೊದಲ ತ್ರೈಮಾಸಿಕದಲ್ಲಿ ಭರ್ಜರಿಯಾಗಿ ಹೊಳೆಯುತ್ತಿದೆ. 2012-13ರ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಶೇ 20ರಷ್ಟು ನಿವ್ವಳ ಮಾರಾಟ ಪ್ರಗತಿಯೊಂದಿಗೆ 736.1 ಕೋಟಿ ರು ದಾಖಲಿಸಿದೆ. ಈ ತ್ರೈಮಾಸಿಕದ ನಿವ್ವಳ ಆದಾಯ ಶೇ 17 ರಷ್ಟು ಏರಿಕೆಯಾಗಿದ್ದು, 117.4 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 100.4 ಕೋಟಿ ರು ನಿವ್ವಳ ಲಾಭ ಗಳಿಸಿತ್ತು. ಕೊಲ್ಗೇಟ್ ರಾಯಭಾರಿಗಳಾಗಿ ಅನುಷ್ಕಾ ಶೆಟ್ಟಿ ಹಾಗೂ ಸೋನಾಕ್ಷಿ ಸಿನ್ಹಾ ಅವರು ಕಾಣಿಸಿಕೊಂಡಿರುವ ಕೋಲ್ಗೇಟ್ ಆಕ್ಟಿವ್ ಸಾಲ್ಟ್ ಚಾಲೆಂಜ್ ಜಾಹೀರಾತು ಸಂಸ್ಥೆ ಉತ್ತಮ ಲಾಭ ತಂದು ಕೊಟ್ಟಿದೆ ಎಂದು ಕೊಲ್ಗೇಟ್ ವಕ್ತಾರರು ಹೇಳಿದ್ದಾರೆ.

ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ಸಂಸ್ಥೆ ಶೇ 11 ರಷ್ಟು ಪ್ರಗತಿ ಸಾಧಿಸಿದೆ. ಟೂತ್ ಪೇಸ್ಟ್ ವಿಭಾಗದಲ್ಲಿ(ಜನವರಿ- ಜೂನ್ 2012 ಅವಧಿ) ಶೇ 54.5 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಈ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 52.4ರಷ್ಟು ಪಾಲು ಹೊಂದಿತ್ತು. ' ಕೋಲ್ಗೆಟ್ ಡೆಂಟಲ್ ಕ್ರೀಮ್', ಆಕ್ಟಿವ್ ಸಾಲ್ಟ್', 'ಮ್ಯಾಕ್ಸ್ ಪ್ರೆಸ್', ಕೊಲ್ಗೇಟ್ ಸೆನ್ಸಿಟಿವ್ ಹಾಗೂ ಕೋಲ್ಗೇಟ್ ಟೋಟಲ್ ಒಳ್ಳೆ ಪ್ರಗತಿ ಸಾಧಿಸಿದೆ.

ಟೂತ್ ಪೇಸ್ಟ್ ವಿಭಾಗದಲ್ಲಿ ಕಳೆದ ವರ್ಷ ಶೇ 36.3ರಷ್ಟು ಪಾಲು ಹೊಂದಿದ್ದ ಕೊಲ್ಗೇಟ್ ಸಂಸ್ಥೆ ಈ ವರ್ಷ ಪ್ರಸಕ್ತ ಅವಧಿಯಲ್ಲಿ ಶೇ 38.2ರಷ್ಟು(Y-o-Y) ಅಧಿಕ ಪಾಲು ಸಾಧಿಸಿದೆ.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಕೊಲ್ಗೇಟ್ ಪ್ಲಾಕ್ಸ್ ಫ್ರೆಶ್ ಟೀ ಉತ್ಪನ್ನ ಬಿಡುಗಡೆ ಮಾಡಿದ ಲಾಭ ಈ ತ್ರೈಮಾಸಿಕದಲ್ಲಿ ಕಂಡು ಬಂದಿದೆ. ಮೌತ್ ವಾಶ್ ವಿಭಾಗದಲ್ಲಿ ಉತ್ತಮ ಪ್ರಗತಿ ಕಂಡು ಬಂದಿದೆ.

ಹೊಸ ಆವಿಷ್ಕಾರ: ಟೂಪತ್ ಪೇಸ್ಟ್ ವಿಭಾಗದಲ್ಲಿ Colgate 360 Battery Toothbrush ಪರಿಚಯಿಸಿದ್ದು dual action ಬ್ರಷ್ ಆಗಿದ್ದು, 20X ಅಧಿಕ ಹೆಚ್ಚಿನ ಸ್ವಚ್ಛತೆ ಒದಗಿಸುತ್ತದೆ. ಸಾಮಾನ್ಯ ಟೂತ್ ಬ್ರಷ್ ಗಳಿಗಿಂತ ಉತ್ತಮ ಕಾರ್ಯಕ್ಷಮತೆ ಹೊಂದಿದೆ ಎಂದು ಸಂಸ್ಥೆ ಹೇಳಿದೆ.

ಕೊಲ್ಗೇಟ್ ಮ್ಯಾಕ್ಸ್ ಫ್ರೆಶ್ ಟೂತ್ ಬ್ರಷ್ multi-height bristles ಹೊಂದಿದ್ದು ಹಲ್ಲುಗಳ ನಡುವೆ ಇರುವ ಪಾಚಿ, ಕೊಳೆಯನ್ನು ದೂರಾಗಿಸುತ್ತದೆ ಹಾಗೂ ನಾಲಗೆ ಸ್ವಚ್ಛಗೊಳಿಸಲು ಸಹಾಯಕವಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಸಂಸ್ಥೆ ಬಗ್ಗೆ : ಕೊಲ್ಗೇಟ್ ಪಾವೋಲಿವ್ (ಇಂಡಿಯಾ) ಲಿ ಸಂಸ್ಥೆ ವೈಜ್ಞಾನಿಕವಾಗಿ ಸಾಬೀತುಪಡಿಸಿದ ಬಾಯಿ ಸ್ವಚ್ಛತಾ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿದೆ. ಟೂತ್ ಪೇಸ್ಟ್, ಟೂತ್ ಪೌಡರ್, ಟೂತ್ ಬ್ರಷ್ ಹಾಗೂ ಮೌತ್ ವಾಶರ್ ಗಳು ಕೊಲ್ಗೇಟ್ ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಬಾಯಿ ಸಂಬಂಧಿತ ಚಿಕಿತ್ಸೆಗಳಿಗೆ Colgate Oral Pharmaceuticals ಅಡಿಯಲ್ಲಿ ಸೇವೆ ಒದಗಿಸಲಾಗುತ್ತದೆ. ಪಾಮೋಲಿವ್ ಬ್ರಾಂಡ್ ಅಡಿಯಲ್ಲಿ ವೈಯಕ್ತಿಕ ಸೌಂದರ್ಯದ ಸಾಧನ ಉತ್ಪನ್ನಗಳನ್ನು ಕೊಲ್ಗೇಟ್ ಸಂಸ್ಥೆ ಹೊಂದಿದೆ.

2003 ರಿಂದ 2007ರ ತನಕ ಭಾರತದಲ್ಲಿ ಬಹು ಜನಪ್ರಿಯ ಹಾಗೂ ಜನರ ವಿಶ್ವಾಸನೀಯ ಬ್ರಾಂಡ್ ಆಗಿ ಕೊಲ್ಗೇಟ್ ಗುರುತಿಸಲ್ಪಟ್ಟಿದೆ. 2011ರ ಬ್ರಾಂಡ್ ಈಕ್ವಿಟಿ ಸಮೀಕ್ಷೆಯಲ್ಲೂ ಕೊಲ್ಗೇಟ್ ಅಗ್ರಸ್ಥಾನ ಗಳಿಸಿದೆ. 1992-2011 ರ ತನಕ ಮಾರುಕಟ್ಟೆಯಲ್ಲಿ ಬಹುತೇಕ ಅಗ್ರಸ್ಥಾನ ಕಾಯ್ದುಕೊಂಡ ಹಿರಿಮೆಯನ್ನು ಸಂಸ್ಥೆ ಹೊಂದಿದೆ. ಕೊಲ್ಗೇಟ್ ಸಂಸ್ಥೆ ಹಾಗೂ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.colgate.co.in. ಸಂಪರ್ಕಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Colgate-Palmolive (India) Limited first quarter results for the financial year 2012-13 with net sales of Rs. 736.1 crore, an increase of 20% over the same quarter of the previous year. Net profit for the quarter is reported at Rs. 117.4 crore, a 17% increase over the net profit of Rs. 100.4 crore on Y-o-Y.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more