ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ರಸ್ತೆಗಳ ಅಗಲೀಕರಣಕ್ಕೆ ಡಿಸಿ ಸೂಚನೆ

|
Google Oneindia Kannada News

Mangalore Road Image
ಮಂಗಳೂರು, ಜು. 22: ಇಲ್ಲಿನ ಪಿ ಎಂ ರಾವ್ ರಸ್ತೆ ಹಾಗೂ ಶರವು ಮಹಾಗಣಪತಿ ದೇವಾಲಯದ ರಸ್ತೆಗಳನ್ನು ಅಗಲಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಡಿಸಿ ಡಾ. ಎನ್ ಎಸ್ ಚೆನ್ನಪ್ಪ ಗೌಡ, ಮಂಗಳೂರಿನ ಸಿಟಿ ಕಾರ್ಪೋರೇಷನ್ ಕಮೀಷನರ್ (MCC) ಡಾ. ಹರೀಶ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಮಂಗಳೂರಿನಲ್ಲಿ ಸಂಚಾರ ಸುಗಮಗೊಳಿಸುನ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪಿ ಎಂ ರಾವ್ ರಸ್ತೆ ಹಾಗೂ ಶರವು ಮಹಾಗಣಪತಿ ದೇವಾಲಯದ ರಸ್ತೆಗಳ ಜೊತೆ ಯು ಪಿ ಮಲ್ಯ ರೋಡ್, ಗಣಪತಿ ಹೈಸ್ಕೂಲ್ ರಸ್ತೆ, ಹೋಟೆಲ್ ವಿಮಲೇಶ್ ರಸ್ತೆ, ಕೆ ಎಸ್ ರಾವ್ ರೋಡ್ ಹೀಗೆ ಮಂಗಳೂರು ಪಟ್ಟಣದ ಕೆಲವು ರಸ್ತೆಗಳನ್ನು ಪರಿಶೀಲಿಸಿದ ನಂತರ ಡಿಸಿ ಚೆನ್ನಪ್ಪ ಗೌಡ ಅವರು ಈ ರೀತಿ ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕಾಗಿ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದ್ದಾರೆ.

ಪಾರದರ್ಶಕವಾಗಿ ಈ ಎಲ್ಲಾ ಬೆಳವಣಿಗೆಗಳು ನಡೆಯಬೇಕೆಂದು ಎಂಸಿಸಿ ಅಧಿಕಾರಿಗಳಿಗೆ ಒತ್ತಿಹೇಳಿರುವ ಚೆನ್ನಪ್ಪ ಗೌಡರು, ಈ ಅಭಿವೃದ್ಧಿ ಕಾಮಗಾರಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಯೋಜನೆ ಪ್ರಕಾರ, ಜಿಎಚ್ ಎಸ್ ರೋಡ್ ಈಗಿರುವ 25 ಅಡಿಗಳಿಂದ 50 ಅಡಿಗಳಿಗೆ ಹಾಗೂ ಶರವು ಮಹಾಗಣಪತಿ ರಸ್ತೆಯು 40 ಅಡಿಗಳಿಗೆ ಬದಲಾಗಲಿದೆ. ಈ ಕೆಲಸಕ್ಕಾಗಿ ಸುಮಾರು 31 ಭೂಮಾಲೀಕರು ತಮ್ಮ ಜಮೀನು ನೀಡಿ ಸಹಕರಿಸಬೇಕಿದೆ.

ನಗುರಿಯಿಂದ ಮಂಗಳೂರು ಜಂಕ್ಷನ್ ರೇಲ್ವೆ ಸ್ಟೇಷನ್ ರಸ್ತೆಯು 60 ಅಡಿಗೆ ವಿಸ್ತಾರವಾಗಲಿದ್ದು ಮಿಕ್ಕ ರಸ್ತೆಗಳೆಲ್ಲವೂ 40 ಅಡಿಗಳಿಗೆ ವಿಸ್ತಾರಗೊಳ್ಳಲಿವೆ. ಈ ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 11 ಕಟ್ಟಡಗಳು ಹಾಗೂ ಕಂಪೌಂಡ್ ಗೋಡೆಗಳು ಒತ್ತುವರಿ ಮಾಡಿಕೊಳ್ಳಲಾಗುವುದು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಬಹಳಷ್ಟು ಎಂಸಿಸಿ ಅಧಿಕಾರಿಗಳು ಹಾಗು ಇಂಜಿನಿಯರುಗಳು ಅವರ ಈ ಹೇಳಿಕೆ ವೇಳೆ ಉಪಸ್ಥಿತರಿದ್ದರು.

English summary
Mangaore DC Dr. N. S. Channappa Gowda has directed Dr. Harish Kumar, commissioner of Mangalore City Corporation (MCC), to take the required steps to widen P. M. Rao Road and Sharavu Mahaganapathy Temple Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X