ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರನ್ನು ಕಾಪಾಡಿ ಸಮುದ್ರಪಾಲಾದ ಸಾಹಸಿ ಮೀನುಗಾರ

By Prasad
|
Google Oneindia Kannada News

Brave fisherman washed away after rescuing two
ಮಂಗಳೂರು, ಜು. 21 : ಭಾರೀ ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡ ಇಬ್ಬರನ್ನು ಉಳಿಸಲು ಹೋದ ಮೀನುಗಾರನೊಬ್ಬ ಅದೇ ಅಲೆಗಳ ಹೊಡೆತಕ್ಕೆ ಬಲಿಯಾದ ದಾರುಣ ಘಟನೆ ಉಲ್ಲಾಳದ ಕೋಟಪುರ ಕೋಡಿ ಕಡಲ ತೀರದಲ್ಲಿ ಶನಿವಾರ ನಡೆದಿದೆ.

ಕಡಲ ಪಾಲಾದ ಉಲ್ಲಾಳದ ಮೀನುಗಾರನನ್ನು ಮೈಕಲ್ ಡಿಸೋಜಾ ಎಂದು ಗುರುತಿಸಲಾಗಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮೀನುಗಾರಿಕೆ ಮಾಡಲು ಕಡಲಿಗೆ ಇಳಿಯಬಾರದೆಂದು ಮೀನುಗಾರರಿಗೆ ಎಚ್ಚರಿಕೆ ನೀಡಿದ್ದರೂ ಸಾಹಸಕ್ಕೆ ಇಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಶನಿವಾರ ಬೆಳಗಿನ ಜಾವ 6.30ಕ್ಕೆ ಮೀನು ಹಿಡಿಯಲೆಂದು ಕಡಲಿಗಿಳಿದ ಇಬ್ಬರು ಮೀನುಗಾರರಾದ ಜಯರಾಮ್ ಮತ್ತು ಡೇವಿಡ್ ಅವರಿದ್ದ ಬೋಟ್ ಅಲೆಗಳ ಹೊಡೆತಕ್ಕೆ ಸಿಲುಕಿ ಮುಗುಚಿದ್ದರಿಂದ ಮೀಂಗುಲಿಗರಿಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಗಮನಿಸಿದ ಅದೇ ಸ್ಥಳದಲ್ಲಿದ್ದ ಮೈಕಲ್ ಅವರನ್ನು ಪಾರು ಮಾಡಲು ಕಡಲಿಗಿಳಿದಿದ್ದಾರೆ.

ಅಸಾಧ್ಯ ಸಾಹಸ ಪ್ರದರ್ಶಿಸಿದ ಮೈಕಲ್ ಡಿಸೋಜಾ ಅವರಿಬ್ಬರನ್ನು ಪಾರು ಮಾಡುವಲ್ಲಿ ಯಶಸ್ವಿಯಾದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಸ್ನೇಹಿತರಿಬ್ಬರನ್ನು ಪಾರು ಮಾಡಿದ ಕೆಲ ಕ್ಷಣಗಳಲ್ಲಿಯೇ ಬಲವಾದ ಅಲೆಗಳ ಹೊಡೆತಕ್ಕಿ ಸಿಕ್ಕು ಮೈಕಲ್ ಡಿಸೋಜಾ ಅವರು ಸಮುದ್ರದಲ್ಲಿ ಮುಳುಗಿದರು.

ಕೂಡಲೆ ಸಮುದ್ರ ತೀರಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿಗಳು ಸಾಕಷ್ಟು ಹುಡುಕಾಟ ನಡೆಸಿದರೂ ಮೈಕಲ್ ಡಿಸೋಜಾ ಪತ್ತೆಯಾಗಿಲ್ಲ.

English summary
Brave fisherman Michael D'Souza was washed away by strong waves on the sea shore of Ullal beach after rescuing two other fishermen. It is raining heavily in coastal Karnataka and fishers have been advised not to venture into the sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X