ನರೇಂದ್ರ ಮೋದಿದೂ ಸೆಕ್ಸ್ ವಿಡಿಯೋ ಇದೆಯಾ?
ಮುಂಬೈ, ಜುಲೈ 19: ಪ್ರಧಾನಿ ಪಟ್ಟಕ್ಕೇರುವ ಹಾದಿಯಲ್ಲಿ ಮಹತ್ವದ ಚುನಾವಣಾ ಸಮರ ಎದುರಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ವಾಮಮಾರ್ಗದಲ್ಲಿ ಅಡ್ಡಗಾಲು ಹಾಕುತ್ತಿದೆ ಎನ್ನಲಾಗಿದೆ.

ಈ ಸಂಬಂಧ, ವರ್ಷಾಂತ್ಯ ಗುಜರಾತ್ ವಿಧಾನಸಭೆ ಚುನಾವಣೆ ನಿಗದಿಯಾಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಗಿಯಾಗಿರುವ ಸೆಕ್ಸ್ ವಿಡಿಯೋವನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನು ಶಿವಸೇನೆ ಮುಖವಾಣಿಯಾದ ಸಾಮ್ನಾದ ಏರುಹೊತ್ತಿನ ಆವೃತ್ತಿಯಲ್ಲಿ ಮಾಡಲಾಗಿದೆ.
'ನರೇಂದ್ರ ಮೋದಿ ಜತೆಗೆ ತಮಗೆ ಸಂಬಂಧವಿದೆ' ಎಂಬುದನ್ನು ಚುನಾವಣೆ ಸಂದರ್ಭದಲ್ಲಿ ಜಗಜ್ಜಾಹೀರುಗೊಳಿಸುವುದು ಈ ವಿಡಿಯೋದ ಉದ್ದೇಶ. 'ಕಾಂಗ್ರೆಸ್ ಮೂಲಗಳೇ ತನಗೆ ಈ ಸ್ಫೋಟಕ ಮಾಹಿತಿ ನೀಡಿದೆ' ಎಂದು Dopahar Ka Saamna ಪತ್ರಿಕೆ ಹೇಳಿದೆ.
ಪತ್ರಿಕೆಯ ನಿನ್ನೆಯ (ಜು. 18) ಸಂಚಿಕೆಯಲ್ಲಿ ಮುಖಪುಟದಲ್ಲೇ ಈ ಸ್ಫೋಟಕ ಸುದ್ದಿಯಿದೆ. ಮೋದಿಯನ್ನು ಚುನಾವಣೆಗೆ ಮುನ್ನ ಹೇಗಾದರೂ ಮಾಡಿ ಹಣಿಯಬೇಕು ಎಂಬ ಹತಾಶ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಈ ವರ್ಷಾಂತ್ಯದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಮೋದಿಯ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಸಲುವಾಗಿ ಆ ಪಕ್ಷವು ಕಾರ್ಯಪಡೆಯೊಂದನ್ನು ಸಿದ್ಧಗೊಳಿಸಿದ್ದು, ಈ ಕಾರ್ಯಪಡೆಯು ಮೋದಿಯ ಸೆಕ್ಸ್ ಸಿ.ಡಿ.ಯನ್ನು ತಯಾರಿಸುವಂತಹ ಹೀನ ಕೆಲಸಕ್ಕಿಳಿದಿದೆ ಎಂಬುದು ಸುದ್ದಿಯ ಸಾರ.
ಕಂಪ್ಯೂಟರ್ ಮತ್ತು ಡಿಜಿಟಲ್ ತಜ್ಞರ ಒಂದು ತಂಡವೇ ಸೆಕ್ಸ್ ಸಿ.ಡಿ. ತಯಾರಿಕೆಯಲ್ಲಿ ನಿರತವಾಗಿದೆ. ಇದನ್ನು ಕಾಂಗ್ರೆಸ್‌ನ 'Dirty Picture' ಎಂದು ಕರೆದಿರುವ ಸಾಮ್ನಾ, ಎನ್‌ಡಿಎ ಜತೆ ಗುರುತಿಸಿಕೊಂಡಿರುವ ಒಬ್ಬ ತಮಿಳು ನಟಿ ಹಾಗೂ ಪಂಜಾಬ್ ಮೂಲದ ಪಕ್ಷದ ಕಾರ್ಯಕರ್ತೆಯನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ಎರಡು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸದರಿ ನಟಿಗೆ ಮುಂಬೈನಲ್ಲಿ ಒಂದು ಫ್ಲ್ಯಾಟ್ ಒದಗಿಸಲಾಗಿದೆ ಹಾಗೂ ಪಂಜಾಬಿ ಮಹಿಳೆಯ ಕೈಯಲ್ಲಿ ಅಪಾರ್ಟ್‌ಮೆಂಟಿನ (ಚಂಡೀಗಢದಲ್ಲಿ) ಕೀಲಿ ಕೈಯಿದೆ.
ಕಾಂಗ್ರೆಸ್ ಪಕ್ಷದ ಈ ಪ್ರಯತ್ನ ನಿಜವೇ ಆಗಿದ್ದಲ್ಲಿ '1885ರಲ್ಲಿ ಅಸ್ತಿತ್ವಕ್ಕೆ ಬಂದ ಪುರಾತನ ಪಕ್ಷವೊಂದು ಇಂತಹ ಕೀಳುಮಟ್ಟಕ್ಕೆ ಇಳಿಯಿತಾ!? ಎಂದು ಮತ ಮಹಾಪ್ರಭು ಮಾತನಾಡಿಕೊಳ್ಳುವಂತಾಗಿದೆ.












Click it and Unblock the Notifications