ಪತ್ರಕರ್ತೆ ರೀನಾ ಮೇಲೆ ಗುಂಡಿನ ಮಳೆಗೆರೆ

ರೀನಾ ಭಾನುವಾರ ಸಂಜೆ 6 ಗಂಟೆ ವೇಳೆಯಲ್ಲಿ ಕಚೇರಿಯೊಳಕ್ಕೆ ಪ್ರವೇಶಿಸುತ್ತಿದ್ದಾಗ ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ಮಳೆಸುರಿಸಿದ್ದಾರೆ. ರೀನಾ ಬರುವುದಕ್ಕೇ ಕಾಯುತ್ತಿದ್ದ ಆಗುಂತಕರು ತಮ್ಮ ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ರೀನಾರನ್ನು ತಕ್ಷಣ ರಾಮಕೃಷ್ಣ ಮಿಷನ್ ಹಾಸ್ಪಿಟಲ್ ಗೆ ದಾಖಲಿಸಲಾಯಿತು. ಕರುಣು ಮತ್ತು ಬೆನ್ನುಮೂಳೆಗೆ ತೀವ್ರ ಗಾಯಗಳಾಗಿದ್ದು, ರೀನಾ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ತುರ್ತುಚಿಕಿತ್ಸಾ ಘಟಕದಲ್ಲಿ ರೀನಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮುಖ್ಯಮಂತ್ರಿ ನವಂ ಟುಕಿ ಆಸ್ಪತ್ರೆಗೆ ಭೇಟಿ ನೀಡಿ, ಪತ್ರಕರ್ತೆಯ ಯೋಗಕ್ಷೇಮ ವಿಚಾರಿಸಿದರು. ಆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನವಂ ಟುಕಿ, ಪಾತಕಿಗಳ ಪತ್ತೆಗಾಗಿ ವ್ಯಾಪಕ ಜಾಳ ಬೀಸಲಾಗಿದೆ. ಎಲ್ಲ ಚೆಕ್ ಪೋಸ್ಟ್ ಗಳಲ್ಲೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ದುಷ್ಕರ್ಮಿಗಳು ಶೀಘ್ರವೇ ಬಂಧಿಸುವುದಾಗಿ ತಿಳಿಸಿದರು.
ಪತ್ರಕರ್ತೆ ರೀನಾ ಅವರನ್ನು ಹೆಚ್ಚಿನ ಚಿಕಿತತ್ಸೆಗಾಗಿ ಗೌಹಾಟಿಗೆ ಕರೆದುಕೊಂಡು ಹೋಗಲು ಹೆಲಿಕಾಪ್ಟರ್ ಅನ್ನು ಸಿದ್ಧವಾಗಿಡಲಾಗಿದೆ. ಘಟನೆಯ ನಂತರ ಮುಖ್ಯಮಂತ್ರಿ ನವಂ ಟುಕಿ ಅವರು ಉನ್ನತಾಧಿಕಾರಿಗಳ ಸಭೆ ಕರೆದಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಘಟನೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಆದರೆ ಈ ಹತ್ಯಾ ಪ್ರಯತ್ನಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಗಮನಾರ್ಹವೆಂದರೆ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲೂ Arunachal Times ಪತ್ರಿಕಾ ಕಚೇರಿಯ ದಾಳಿ ನಡೆದಿತ್ತು.












Click it and Unblock the Notifications