• search
For Quick Alerts
ALLOW NOTIFICATIONS  
For Daily Alerts

  ಅಂತೂ ಇಂತೂ ಯಡಿಯೂರಪ್ಪಗೆ ಶಾಪ ವಿಮೋಚನೆ

  By * ಮಲೆನಾಡಿಗ
  |
  ಬೆಂಗಳೂರು, ಜು.12: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರು ಗುರುವಾರ(ಜು.12) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಮೇಲಿದ್ದ ಕಳಂಕವನ್ನು ತೊಡೆದುಕೊಂಡಿದ್ದಾರೆ. ಶೆಟ್ಟರ್ ಅವರ ತಾಯಿಯ ಶಾಪದಿಂದ ವಿಮೋಚನೆ ಹೊಂದಿದ್ದಾರೆ.

  "ನನ್ನ ಮಗ ಮುಖ್ಯಮಂತ್ರಿ ಅಗ್ದಂತೆ ಕಲ್ಲ ಹಾಕಿದ್ದ. ಈಗ ಸಿಎಂ ಆಗ್ದಂತೆ ಅಡ್ಡಿ ಮಾಡ್ಯಾನೆ. ಮುಂದ್ ಒಂದ್ ದಿನ ನನ್ಮಗ ಸಿಎಂ ಆಗಿಯೇ ಆಗ್ತಾನೆ' ನನ್ಮಗ ಬೇಸರ ಮಾಡಿಕೊಂಡಿಲ್ಲ. ತನ್ನ ಹೋರಾಟ ಮುಂದುವರೆಸುತ್ತಾನಾ ಎಂದು ಜಗದೀಶ್ ಶೆಟ್ಟರ್ ಅವರ ತಾಯಿ ಬಸವಣ್ಣೆವ್ವ ಶೆಟ್ಟರ್ ಅವರು ನೊಂದು ನುಡಿದಿದ್ದರು.

  ಆಗ ಡಿವಿ ಸದಾನಂದ ಗೌಡ ವಿರುದ್ಧ ಕೇವಲ 7 ಮತಗಳ ಅಂತರದಿಂದ ಮುಖ್ಯಮಂತ್ರಿ ಪಟ್ಟ ಕಳೆದುಕೊಂಡ ಜಗದೀಶ್ ಶೆಟ್ಟರ್ ಅವರ ಸೋಲಿಗೆ ಬಿಎಸ್ ಯಡಿಯೂರಪ್ಪ ಅವರೇ ಕಾರಣ ಎಂದು ಶೆಟ್ಟರ್ ಅವರ ತಾಯಿ ಬಸವಣ್ಣೆಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

  "ಹಿಂದೆ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಬೇಕಾಗಿದ್ದಾಗ ಕೂಡ ಸಿಗದಂತೆ ತಡೆದವರೇ ಯಡಿಯೂರಪ್ಪ. ಯಡಿಯೂರಪ್ಪನವರು ಮನಸು ಮಾಡಿದ್ದರೆ ಮಗನಿಗೆ ಮೊದಲೇ ಮಂತ್ರಿ ಸ್ಥಾನ ಸಿಗಬೇಕಾಗಿತ್ತು" ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು..

  "ಮುಂದೊಂದು ದಿನ ಮಗ ಸಿಎಂ ಆಗೇ ಆಗುತ್ತಾನೆ. ಶಿವನ ಕೃಪೆ ಅವನ ಮೇಲಿದೆ" ಎಂದು ಭಾವುಕರಾಗಿ ಅವರು ನುಡಿದರು. ಸದಾನಂದ ಮುಖ್ಯಮಂತ್ರಿ ಆಗಿದ್ದು ಬೇಜಾರಿಲ್ಲ. ಆತ ಕೂಡ ನನ್ನ ಮಗನಂತೆ ಎಂದು ಮಾತೃಭಾವವನ್ನು ಅವರು ಮೆರೆದರು. ಯಡಿಯೂರಪ್ಪ ಮಾಡಿದ್ದನ್ನು ಶಿವ ಮೆಚ್ಚುವನೆ?

  ಹೀಗೆ ಅಮ್ಮನ ಶಾಪ ವಿಮೋಚನೆ ಮಾಡಿಕೊಂಡ ಯಡಿಯೂರಪ್ಪ ಅವರಿಗೆ ಇನ್ನೂ ಅನೇಕ ಶಾಪಗಳು ತಟ್ಟಿದೆ. ಅವುಗಳಲ್ಲಿ ರೈತರ ಶಾಪ, ದೇವರುಗಳ ಶಾಪ ಮುಖ್ಯವಾದವು.

  ರೈತರ ಶಾಪ: ಹಸಿರು ಶಾಲು ಹೊದ್ದುಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ರೈತರನ್ನು ಮರೆತುಬಿಟ್ಟರು. ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ನಡೆಸಿದ್ದ ಯಡಿಯೂರಪ್ಪ 2008ರ ಮೇ 30ರ ನಂತರ ಸಂಪೂರ್ಣ ಬದಲಾಗಿ ಬಿಟ್ಟರು.

  ಹಾವೇರಿ ಗೋಲಿಬಾರ್ ಪ್ರಕರಣದ ನಂತರ ರೈತರ ಕೋಪ ತಣ್ಣಗಾಗಿಸಲು ಅನೇಕ ಯೋಜನೆಗಳನ್ನು ಕೈಗೊಂಡರು, ಸಾಲಮನ್ನಾ, ಕೃಷಿಗೆ ಪ್ರತ್ಯೇಕ ಬಜೆಟ್ ಇತ್ಯಾದಿ. ಆದರೂ ರೈತರ ಆತ್ಮಹತ್ಯೆಗಳನ್ನು ಇನ್ನೂ ತಡೆಗಟ್ಟಲು ಆಗಿಲ್ಲ. ಬುಧವಾರ ಕೂಡಾ ಉತ್ತರ ಕರ್ನಾಟಕದಲ್ಲಿ ಇಬ್ಬರು ರೈತರು ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆ ರೈತರ ಓಲೈಕೆ ಮಾಡುತ್ತಾ ಇನ್ನೊಂದೆಡೆ ಕೈಗಾರಿಕೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರಿಂದ ಯಡಿಯೂರಪ್ಪ ಅವರಿಗೆ ರೈತರ ಶಾಪ ತಟ್ಟಿದೆ.

  ದೇವ ರ ಶಾಪ : ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಮೇಲೆ ಮಠ ಮಾನ್ಯಗಳಿಗೆ ಭರ್ಜರಿಯಾಗಿ ದಾನ ಧರ್ಮ ಮಾಡಿದ್ದಾರೆ. ಕರ್ನಾಟಕ ಸಾಲದೆಂಬಂತೆ ಕೇರಳ, ತಮಿಳುನಾಡಿನ ದೇಗುಲಗಳಿಗೂ ದೇಣಿಗೆ ನೀಡಿದ್ದಾರೆ.

  ಆದರೆ, ಉಡುಪಿಯಲ್ಲಿ ಕೈಗೊಂಡ ಯಾಗವೊಂದು ಅವರಿಗೆ ತಿರುಗುಬಾಣವಾಗಿ ಚುಚ್ಚುತ್ತಿದೆ. ಕರ್ತೃವಾಗಿ ಯಡಿಯೂರಪ್ಪ ಅವರು ಪೀಠದಲ್ಲಿ ಕೂತಿದ್ದರೆ ಪತ್ನಿ ಸಮೇತ ಕೈಗೊಳ್ಳಬೇಕಿದ್ದ ಯಾಗದಲ್ಲಿ ಲೋಪ ಎಸೆಗಲಾಗಿದೆ. ಕೈಗೆ ಕಂಕಣ ಕಟ್ಟದೆ, ಸಪತ್ನಿ ಸಮೇತ ಯಾಗ ಆಚರಿಸದೆ ಇರುವುದು ದೋಷಕ್ಕೆ ಕಾರಣವಾಗಿದೆ ಎಂದು ಹಿರಿಯ ಜ್ಯೋತಿಷಿಗಳು ಹೇಳಿದ್ದಾರೆ.

  ಯಡಿಯೂರಪ್ಪ ಅವರು ಸದ್ಯಕ್ಕೆ ಮುಖ್ಯಮಂತ್ರಿ(ರಾಜ) ಅಲ್ಲದ ಕಾರಣ ರಾಜಸೂಯ ಯಾಗದ ಬದಲಿಗೆ ವಾಜಪೇಯ ಯಾಗಕ್ಕೆ ಮನಸ್ಸು ಮಾಡಿದರು. ಋತ್ವಿಕರ ಸಂಪೂರ್ಣ ಮೇಲ್ವಿಚಾರಣೆಯಲ್ಲಿ ನಡೆಯುವ ಯಾಗದಲ್ಲಿ ಸಾಂಕೇತಿಕವಾಗಿ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು

  ರಾಜಸೂಯ ಯಾಗವನ್ನು ರಾಜನಾದವನು ಮಾತ್ರ ಮಾಡಬಹುದಾಗಿದೆ. ಆದರೆ, ವಾಜಪೇಯ ಯಾಗವನ್ನು ಲೋಕ ಹಿತಕ್ಕಾಗಿ ಯಾವುದೇ ಹೋತ್ರಿಗಳು ಕೈಗೊಳ್ಳಬಹುದಾಗಿದೆ.
  ಯಡಿಯೂರಪ್ಪ ಅವರು ಪಟ್ಟದಿಂದ ಕೆಳಗಿಳಿದಿರುವುದರಿಂದ ಹಾಗೂ ರಾಜಸೂಯ ಯಾಗಕ್ಕೆ ಹೆಚ್ಚಿನ ಕಾಲಾವಧಿ ಬೇಕಿರುವುದರಿಂದ ವಾಜಪೇಯವನ್ನು ಆಯ್ಕೆಮಾಡಲಾಗಿದೆ ಎಂಬ ಸಮರ್ಥನೆಯೂ ಇದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  With Jagadish Shettar sworn in as CM of Karnataka former CM BS Yeddyruappa gets relief one can recall in 2011 Jagadish Shettar's mother Basavannemma has expressed her displeasure that her son could not become Chief Minister of Karnataka. Yeddyrappa is now relief from one of the curse against him

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more