• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಶಕುನಿ, ಅಶೋಕ್ ಮೀರ್ ಸಾಧಿಕ್ : ಗೌಡ

By Mahesh
|
ಬೆಂಗಳೂರು, ಜು.10: ಮುಖ್ಯಮಂತ್ರಿ ಸದಾನಂದಗೌಡರು ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದರು. ಅವರ ಜನಪರ ಕಾಳಜಿ ಕಂಡು ಸಹಿಸಲಾಗದ ಅನಾವಶ್ಯಕವಾಗಿ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿ ಜಾತಿ ರಾಜಕೀಯ ಮಾಡುತ್ತಿರುವ ಯಡಿಯೂರಪ್ಪ ಶಕುನಿ ಇದ್ದ ಹಾಗೆ. ಒಕ್ಕಲಿಗರ ಪರ ನಿಲ್ಲದ ಆರ್ ಅಶೋಕ್ ಮೀರ್ ಸಾಧಿಕ್ ಇದ್ದಂತೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಶಂಕರಲಿಂಗೇಗೌಡ ಅವರು ಹೇಳಿದ್ದಾರೆ.

ರಾಜ್ಯ ಬಿಜೆಪಿ ಬಿಕ್ಕಟ್ಟಿಗೆ ಮಾಜಿ ಸಿಎಂ ಯಡಿಯೂರಪ್ಪ ಕುತಂತ್ರವೇ ಕಾರಣ. ಜಗದೀಶ್ ಶೆಟ್ಟರ್ ಅವರು ಒಳ್ಳೆ ವ್ಯಕ್ತಿ ಆದರೆ, ಯಡಿಯೂರಪ್ಪ ಅವರ ಸಹವಾಸಕ್ಕೆ ಬಿದ್ದರೆ ನಾಶ ಖಂಡಿತ ಎಂದು ಬಿಜೆಪಿ ಶಾಸಕ ಶಂಕರಲಿಂಗೇಗೌಡ ಎಚ್ಚರಿಸಿದ್ದಾರೆ.

ನಾಯಕತ್ವ ಬದಲಾವಣೆ ವಿರೋಧಿಸಿ ಒಕ್ಕಲಿಗ ಸಂಘ ನಗರದ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಜೆಪಿ ಶಾಸಕ ಶಂಕರಲಿಂಗೇಗೌಡ, ಯಡಿಯೂರಪ್ಪ ಭ್ರಷ್ಟ, ಕುತಂತ್ರಿ, ಜಾತಿವಾದಿಯಾಗಿದ್ದಾರೆ. ನಮ್ಮ ಜನಾಂಗದವರಾದ ಸದಾನಂದ ಗೌಡರನ್ನು ಒಂದು ವರ್ಷ ಕೂಡಾ ಅಧಿಕಾರ ನಡೆಸಲು ಬಿಡಲಿಲ್ಲ. ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾದಲ್ಲಿ ಈ ಕೂಡಲೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅಬ್ಬರಿಸಿದರು.

ನಾಯಕತ್ವ ಬದಲಾವಣೆ ವಿರೋಧಿಸಿ ಒಕ್ಕಲಿಗ ಸಮುದಾಯದ ಮುಖಂಡರು ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಮಂಗಳವಾರ(ಜು.10) ನೆಲಮಂಗಲದಲ್ಲಿ ರಸ್ತೆ ತಡೆದು ಬಹರಿ ಪ್ರತಿಭಟನೆ ಕೈಗೊಂಡಿರುವ ಒಕ್ಕಲಿಗರು, ಬಿಜೆಪಿ ಹೈಕಮಾಂಡ್ ಗೆ ಸವಾಲು ಎಸೆದಿದ್ದಾರೆ.

ದಲಿತ ಮುಖಂಡರೊಬ್ಬರನ್ನು ಸಿಎಂ ಮಾಡಿ, ಸದಾನಂದ ಗೌಡರನ್ನು ಕೆಳಗಿಳಿಸಿದ್ದು ಏಕೆ ಎಂದು ಸ್ಪಷ್ಟವಾದ ಕಾರಣ ನೀಡಿ, ಜಾತಿ ರಾಜಕಾರಣ ಕೈಬಿಡಿ, ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ ಎಂದು ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಅವರು ಹೈಕಮಾಂಡ್ ಗೆ ಸವಾಲು ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸದಾನಂದ ಗೌಡ ಸುದ್ದಿಗಳುView All

English summary
MLA Shankarlinge Gowda calls Yeddyurappa as Shakuni and| R Ashok as Meer Sadik. Nanjaavadhoota Swami of Pattanayakanahalli mutt threatened to show the Vokkaliga strength might if Sadananda Gowda was removed from the chief minister’s post. MLAs Ashwathnarayana, Shankarlinge Gowda, Muniraju ready to resign

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more